Sahyadri Narayana Hospital Doctors /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮತ್ತೊಂದು ಸಾಧನೆ ಮಾಡಿದ್ದಾರೆ. 75 ವರ್ಷದ ವೃದ್ಧೆಯೊಬ್ಬರನ್ನು ಆರಂಭಿಕ ಹಂತದ ಜಠರದ ಕ್ಯಾನ್ಸರ್ನಿಂದ ಸಂಪೂರ್ಣವಾಗಿ ಗುಣಪಡಿಸಿದ್ದಾರೆ. ಮೆಡಿಕಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ವಿ. ಶಿವಕುಮಾರ್ ಅವರ ನೇತೃತ್ವದ ವೈದ್ಯರ ತಂಡ ಈ ಸಾಧನೆ ಮಾಡಿದೆ.ಮಿನಿಮಲಿ ಇನ್ವೇಸಿವ್ ಎಂಡೋಸ್ಕೋಪಿಕ್ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಈ ಚಿಕಿತ್ಸೆ ಕೈಗೊಳ್ಳಲಾಗಿದೆ.

ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು, ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಭೇಟಿ ನೀಡಿದ್ದ ಇವರನ್ನ ವೈದ್ಯಕೀಯ ತಪಾಸಣೆ ನಡೆಸಿದಾಗ, ರಕ್ತದದಲ್ಲಿ ಅನೀಮಿಯಾ ಇರುವುದು ವೈದ್ಯರ ಗಮನಕ್ಕೆ ಬಂದಿದೆ. ಇದರ ನಿಖರ ಕಾರಣ ತಿಳಿಯಲು ಅಪ್ಪರ್ ಗ್ಯಾಸ್ಟ್ರೋ ಇಂಟಸ್ಟೈನಲ್ ಎಂಡೋಸ್ಕೋಪಿ (Upper GI Endoscopy) ಪರೀಕ್ಷೆಯನ್ನು ಮಾಡಲಾಯಿತು. ಈ ತಪಾಸಣೆಯ ಸಂದರ್ಭದಲ್ಲಿ ಜಠರದ ಒಳಭಾಗದಲ್ಲಿ ರಕ್ತಸ್ರಾವದ ಲಕ್ಷಣಗಳು ಹಾಗೂ ಹೊಟ್ಟೆಯ ಕೆಳಭಾಗದಲ್ಲಿ ಸಣ್ಣ ಗಡ್ಡೆಯ ಆಕಾರದ ರಚನೆ ಇರುವುದು ಪತ್ತೆಯಾಯಿತು. ಹೆಚ್ಚಿನ ತಪಾಸಣೆಗಾಗಿ ಬಯಾಪ್ಸಿ (Biopsy) ಪರೀಕ್ಷೆ ನಡೆಸಿದಾಗ, ವೃದ್ಧೆಗೆ ಆರಂಭಿಕ ಹಂತದ ಗ್ಯಾಸ್ಟ್ರಿಕ್ ಕಾರ್ಸಿನೋಮ (ಜಠರದ ಕ್ಯಾನ್ಸರ್) ಇರುವುದು ಖಚಿತವಾಯಿತು.
ಈ ವಿಚಾರ ತಿಳಿದ ಬಳಿಕ ಡಾ. ವಿ. ಶಿವಕುಮಾರ್ ಅವರ ನೇತೃತ್ವದ ತಜ್ಞರ ತಂಡ, ಎಂಡೋಸ್ಕೋಪಿಕ್ ಸಬ್ಮ್ಯೂಕೋಸಲ್ ಡಿಸೆಕ್ಷನ್ (ESD) ಮೂಲಕ ಸತತ 3 ಗಂಟೆಗಳ ಕಾಲ ಆಪರೇಷನ್ ನಡೆಸಿ ಯಶಸ್ವಿಯಾದರು, ಶಸ್ತ್ರಚಿಕಿತ್ಸೆ ನಡೆದು 3 ನೇ ದಿನಕ್ಕೆ ಆಸ್ಪತ್ರೆಯಿಂದ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈ ಯಶಸ್ವಿ ಚಿಕಿತ್ಸೆಯಲ್ಲಿ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ಡಾ. ಸುಮೇಶ್ ನಾಯರ್, ಡಾ. ಪೂಜಾ ಮತ್ತು ಡಾ. ಉಮೇಶ್ ಅವರು ಕೈಜೋಡಿಸಿದ್ದರು. ಈ ಮಹತ್ವದ ವೈದ್ಯಕೀಯ ಸಾಧನೆಯ ಕುರಿತು ಸಹ್ಯಾದ್ರಿ ನಾರಾಯಣ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ವರ್ಗೀಸ್ ಪಿ. ಜಾನ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
