Politics ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಸಹ ವಿಧಾಸೌಧದ ಮುಂದೆ ಕೂತು ಪ್ರತಿಭಟನೆ ಮಾಡುವ ಮೂಲಕ ಹೈಕಮಾಂಡ್ ನ್ನು ಎಚ್ಚರಿಸಲಿ ಎಂದು ಕೆ ಎಸ್ ಈಶ್ವರಪ್ಪ ಅಧಿಕಾರ ಹಂಚಿಕೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ದ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ: ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಿದ ಮಹಾನಗರ ಪಾಲಿಕೆ ಮತ್ತು ಟ್ರಾಫಿಕ್ ಪೊಲೀಸರು.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಅಧೋಗತಿಗೆ ಹೋಗಿದೆ ಮತ್ತು ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಾಗುತ್ತಿಲ್ಲ ಎಂದು ಗುಡುಗಿದರು.
ಅಧಿಕಾರಕ್ಕೋಸ್ಕರ ಒಬ್ಬರಿಂದ ಒಬ್ಬರು ಹಪಹಪಿಸುತ್ತಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಅಧಿಕಾರ ಹಂಚಿಕೆಯ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ತಮ್ಮಲ್ಲಿ ನಡೆದಿರುವ ಒಪ್ಪಂದದ ಬಗ್ಗೆ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಗಳೇ ಹೇಳಲಿ ಎಂದು ಹೇಳುತ್ತಿದ್ದಾರೆ. ಡಿಕೆಶಿ ಬೆಂಬಲಿಗರು ಬಜೆಟ್ ಅಧಿವೇಶನ ಮುಗಿಯುವುದರೊಳಗೆ ಡಿಕೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುತ್ತಿದ್ದರೆ, ಅನೇಕ ಪತ್ರಿಕೆಗಳಲ್ಲಿ ಗೃಹ ಸಚಿವ ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಬರೆಯಲಾಗಿದೆ.
ಇನ್ನೊಂದೆಡೆ ದಲಿತ ನಾಯಕರು 25 ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಿ ಹಾಗೂ ಹರಿಪ್ರಸಾದ್ ಅವರನ್ನು ಗೃಹಮಂತ್ರಿ ಮಾಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಅಹಿಂದ ಶಕ್ತಿ ಏನೆಂದು ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೆಲ್ಲವನ್ನು ನೋಡಿದಾಗ ಕಾಂಗ್ರೆಸ್ ಪಕ್ಷ ಸತ್ತು ಹೋಗಿದೆಯಾ ಎಂಬ ಅನುಮಾನ ಮೂಡುತ್ತದೆ ಎಂದು ಈಶ್ವರಪ್ಪ ಟೀಕಿಸಿದರು.
ಪ್ರತಿನಿತ್ಯ ಇವರ ಕೆಟ್ಟ ಹೇಳಿಕೆಗಳನ್ನು ಕೇಳಿ ಜನ ಬೇಸತ್ತು ಹೋಗಿದ್ದಾರೆ ಮತ್ತು ಇವರ ಕಿತ್ತಾಟದಿಂದ ಒಂದೇ ಒಂದು ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಸಿಎಂ ಹಾಗೂ ಡಿಸಿಎಂ ಇಬ್ಬರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳುತ್ತಿದ್ದರೂ, ಹೈಕಮಾಂಡ್‌ನಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ಆದ್ದರಿಂದ ನೀವಿಬ್ಬರೂ ವಿಧಾನಸೌಧದ ಮುಂದೆ ಧರಣಿ ಕೂತುಬಿಡಿ ಮತ್ತು ನೀವು ಸ್ಪಷ್ಟತೆ ನೀಡುವವರೆಗೂ ಧರಣಿಯಿಂದ ಏಳುವುದಿಲ್ಲ ಎಂದು ಹೈಕಮಾಂಡ್ ಗೆ ಒತ್ತಡ ಹೇರಿ ಎಂದರು.
Politics ಹಾಗೆಯೇ ಮಲ್ಲಿಕಾರ್ಜುನ ಖರ್ಗೆ ಅವರು ಬಾಯಿ ಮುಚ್ಚಿಕೊಂಡು ಇರಿ ಎಂದು ಹೇಳಿದ್ದರೂ ಎಲ್ಲಾ ಶಾಸಕರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ, ಅಂದರೆ ಖರ್ಗೆ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಧರಣಿ ಮಾಡುವ ಮೂಲಕವಾದರೂ ದೇಶದ ಗಮನ ಸೆಳೆಯಿರಿ, ಆಗಲಾದರೂ ಸತ್ತಿರುವ ಹೈಕಮಾಂಡ್ ಗೆ ಜೀವ ಬಂದು ಕ್ರಮ ಕೈಗೊಳ್ಳಬಹುದು ಎಂದು ವ್ಯಂಗ್ಯವಾಡಿದರು.
ಹೈಕಮಾಂಡ್ ಹೀಗಿರುವ ಪರಿಣಾಮ ದೇಶದಾದ್ಯಂತ ರಾಷ್ಟ್ರಧ್ರೋಹಿ ಕೃತ್ಯಗಳು ಹೆಚ್ಚುತ್ತಿವೆ. ಇಡೀ ರಾಜ್ಯದಲ್ಲಿ ಇನ್ನು ಎಷ್ಟು ಕೊಲೆ ಆಗಬೇಕು ಎಂದು ಪ್ರಶ್ನಿಸಿದ ಅವರು, ರಾಷ್ಟ್ರದ್ರೋಹಿಗಳು ಯಾವುದೇ ಭಯ ಇಲ್ಲದಂತೆ ಜೀವನ ನಡೆಸುತ್ತಿದ್ದಾರೆ ಮತ್ತು ಅಧಿಕಾರಿಗಳು ಸಹ ಸರ್ಕಾರವೇ ಹೀಗಿರುವಾಗ ನಾವೇನು ಮಾಡುವುದು ಎಂದು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಮುಸಲ್ಮಾನರಿಗೆ ಸಂಪೂರ್ಣ ಸಪೋರ್ಟ್ ನೀಡುತ್ತಿದ್ದು, ರಾಜ್ಯದಲ್ಲಿ ಗಾಂಜಾ ಎಷ್ಟು ಬೇಕಾದರೂ ಬೆಳೆಯಬಹುದು ಹಾಗೂ ಬೇಕಾದರೆ ಗಾಂಜಾದ ಫ್ಯಾಕ್ಟರಿಯನ್ನು ಸಹ ತೆರೆಯಬಹುದು ಎಂಬಂತಾಗಿದೆ. ಕೆಲವೊಂದು ಬೀಡಾ ಅಂಗಡಿಗಳಲ್ಲಿಯೂ ಗಾಂಜಾ ಸಿಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಬಾಲಕನ ಹತ್ಯೆ ವಿಚಾರವಾಗಿ ಮಾತನಾಡುತ್ತಾ, ಊರುಗಡೂರಿನಲ್ಲಿ ಬಾಲಕನ ಹತ್ಯೆ ಬಹಳಾ ನೋವಿನ ಸಂಗತಿಯಾಗಿದ್ದು, ಈ ವಿಚಾರವಾಗಿ ನಾನು ಎರಡು ದಿನ ನಿದ್ದೆ ಮಾಡಿಲ್ಲ ಎಂದರು. ಮಸೀದಿಯಿಂದ ಕೆಲ ಮುಲ್ಲಾಗಳು ಕಲ್ಲು ತೂರಾಟ ಮಾಡುತ್ತಾರೆ, ಇಷ್ಟಾದರೂ ಆ ಮಸೀದಿಯನ್ನು ಸೀಜ್ ಮಾಡಲಿಲ್ಲ ಮತ್ತು ಆ ಆರೋಪಿಗಳನ್ನು ಸಹ ಅರೆಸ್ಟ್ ಮಾಡಲಿಲ್ಲ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಜನ ನೋಡುತ್ತಿದ್ದಾರೆ ಎಂದು ಹೇಳಿದ ಅವರು, ಇದೊಂದು ಹೇಡಿ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು.
Politics Eshwarappa Hits Out at Failed Govt


Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.