ದಾವಣಗೆರೆ ಟು ಶಿವಮೊಗ್ಗ: ಬೆಸ್ಕಾಂ ಸಿವಿಲ್ ಎಂಜಿನಿಯರ್ ಅರ್ಜುನ್ ಮನೆಗಳ ಮೇಲೆ ಲೋಕಾಯುಕ್ತ ರೇಡ್

ಹಂಚಿಕೊಳ್ಳಿ
WhatsApp Facebook X Telegram
Lokayukta Raid on BESCOM Engineer RH Arjun in Shivamogga & Davanagere
Lokayukta Raid on BESCOM Engineer RH Arjun in Shivamogga & Davanagere

ಮಲೆನಾಡು ಟುಡೆ ಸುದ್ದಿ / ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾವಣಗೆರೆ ಬೆಸ್ಕಾಂನ ಸಿವಿಲ್ ವಿಭಾಗದಲ್ಲಿ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆರ್.ಹೆಚ್. ಅರ್ಜುನ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಈ ದಾಳಿ ನಡೆದಿದೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದ ತಂಡ ಈ ಕಾರ್ಯಾಚರಣೆ ಕೈಗೊಂಡಿದೆ.

 Lokayukta Raid on BESCOM Engineer RH Arjun in Shivamogga & Davanagere
Lokayukta Raid on BESCOM Engineer RH Arjun in Shivamogga & Davanagere

ಕುಡಿಯುವ ನೀರಿನ ಸಮಸ್ಯೆ ಯಾರಿಗೆ ಹೇಳ್ಕೋಬೇಕು? ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಕಂಟ್ರೋಲ್​ ರೂಂಗಳ ನಂಬರ್!

ಅರ್ಜುನ್​ರವರಿಗೆ ಸೇರಿದ ಶಿವಮೊಗ್ಗ ನಗರದ ಗೋಪಾಳ ಬಡಾವಣೆಯಲ್ಲಿರುವ ಮನೆ  ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೆ ಸಾಯಿ ಇಂಟರ್ ನ್ಯಾಷನಲ್ ಬಳಿ ಇರುವ ಗುಡಿ ಎಂಪೋರಿಯಮ್  ಮೇಲೆ ಲೊಕಾಯುಕ್ತ ಅಧಿಕಾರಿಗಳು ರೇಡ್ ನಡೆಸಿದ್ದಾರೆ. ಅರ್ಜುನ್ ದಾವಣಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಿಟ್ಟುವಳ್ಳಿಯಲ್ಲಿ ಅವರು ವಾಸವಿದ್ದ ಬಾಡಿಗೆ ಕೊಠಡಿ ಹಾಗೂ ಅವರ ಕಚೇರಿಯ ಮೇಲೂ ದಾಳಿ ನಡೆಸಲಾಗಿದೆ.  

ಚುನಾವಣೆಗಾಗಿ ಹೊಸ ಟೆಕ್ನಿಕ್​ ಬಳಸಿದ ಶಿವಮೊಗ್ಗ ಮಹಾನಗರ ಪಾಲಿಕೆ! ಏನದು ನೋಡಿ

ಬೆಸ್ಕಾಂ ಎಂಜಿನಿಯರ್ ಆಗಿರುವ ಅರ್ಜುನ್ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ದೂರಿನ ಮೇರೆಗೆ ಈ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

 Lokayukta Raid on BESCOM Engineer RH Arjun in Shivamogga & Davanagere
Lokayukta Raid on BESCOM Engineer RH Arjun in Shivamogga & Davanagere
Lokayukta Raid on BESCOM Engineer RH Arjun in Shivamogga & Davanagere – Malenadu Todayಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಬೆಸ್ಕಾಂ ಎಂಜಿನಿಯರ್ ಆರ್.ಹೆಚ್. ಅರ್ಜುನ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ. ಅಪಾರ ಪ್ರಮಾಣದ ಚಿನ್ನ, ಆಸ್ತಿ ಪತ್ರ ಪತ್ತೆ. ಪೂರ್ಣ ವರದಿ ಇಲ್ಲಿದೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor