ತಾಳಗುಪ್ಪ-ಯಶವಂತಪುರ ರೈಲಿನೊಳಗೆ ನುಗ್ಗಿ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿ!ವಿದ್ಯಾನಗರ ರೈಲ್ವೆ ಸ್ಟೇಷನ್​ನಲ್ಲಿ ದರೋಡೆ!

ಹಂಚಿಕೊಳ್ಳಿ
WhatsApp Facebook X Telegram
Shivamogga Train Robbery Confirmed
Shivamogga Train Robbery Confirmed

ಮಲೆನಾಡು ಟುಡೆ ಸುದ್ದಿ / ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಮಂಗಳವಾರ ತಡರಾತ್ರಿ ದರೋಡೆಕೋರನೊಬ್ಬ ತಲ್ವಾರ್ ಹಿಡಿದು ಬೋಗಿಯೊಳಗೆ ನುಗ್ಗಿ ದಾಂಧಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ವಿದ್ಯಾನಗರದಲ್ಲಿರುವ (ಮಹಾದೇವಿ ಟಾಕೀಸ್​) ಹಳೆ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 

ತಾಳಗುಪ್ಪ-ಯಶವಂತಪುರ ರೈಲಿನೊಳಗೆ ನುಗ್ಗಿ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿ!ವಿದ್ಯಾನಗರ ರೈಲ್ವೆ ಸ್ಟೇಷನ್​ನಲ್ಲಿ ದರೋಡೆ!
Shivamogga Train Robbery

ಏನಾಯ್ತು ಹೇಗಾಯ್ತು ಘಟನೆ/Shivamogga Train Robbery

ರಾತ್ರಿ 11 ಗಂಟೆ 50 ನಿಮಿಷಕ್ಕೆ ಶಿವಮೊಗ್ಗದಿಂದ ಹೊರಡಬೇಕಿದ್ದ ರೈಲು ಮಂಗಳವಾರ ತಡವಾಗಿ ಆಗಮಿಸಿತ್ತು. ರೈಲು ವಿದ್ಯಾನಗರದ ಹಳೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಬೋಗಿಯೊಳಗೆ ನುಗ್ಗಿದ ಆಗಂತುಕ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಪ್ರಯಾಣಿಕರನ್ನು ಹೆದರಿಸಿದ್ದಾನೆ. ಈ ವೇಳೆ ತಲ್ವಾರ್ ಬೀಸಿದ್ದರಿಂದ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎನ್ನಲಾಗಿದೆ. ಈ ಮಧ್ಯೆ ದುಷ್ಕರ್ಮಿ ಓರ್ವರ ಮೊಬೈಲ್ ಹಾಗೂ ದುಡ್ಡನ್ನ ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.  ಶಿವಮೊಗ್ಗ ಟೌನ್ ರೈಲು ಸ್ಟೇಷನ್​ನಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿರುವ ಈ ನಿಲ್ದಾಣದಲ್ಲಿ ಘಟನೆ ನಡೆದಿದೆ.

ತಾಳಗುಪ್ಪ-ಯಶವಂತಪುರ ರೈಲಿನೊಳಗೆ ನುಗ್ಗಿ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿ!ವಿದ್ಯಾನಗರ ರೈಲ್ವೆ ಸ್ಟೇಷನ್​ನಲ್ಲಿ ದರೋಡೆ!

ಇನ್ನೂ SMET Halt ನಿಲ್ದಾಣದಲ್ಲಿ, ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ದರೋಡೆ ಯತ್ನ ಮತ್ತು ಹಲ್ಲೆ ಪ್ರಕರಣವನ್ನು ರೈಲ್ವೆ ಇಲಾಖೆ ಅಧಿಕೃತವಾಗಿ ದೃಢಪಡಿಸಿದೆ. ಪ್ರಯಾಣಿಕರೊಬ್ಬರು ರೈಲ್ ಮದದ್ (RailMadad) ಪೋರ್ಟಲ್‌ನಲ್ಲಿ ನೀಡಿದ ದೂರಿಗೆ ಇಲಾಖೆ ಉತ್ತರ ನೀಡಿದೆ. ಉತ್ತರದಲ್ಲಿ ರೈಲು ಸಂಖ್ಯೆ 16582 (SMET-YPR) ಎಕ್ಸ್‌ಪ್ರೆಸ್ ರೈಲಿನ ಎಸ್-9 (S-9) ಬೋಗಿಯಲ್ಲಿ ನಡೆದ ಘಟನೆ ಬಗ್ಗೆ ಪ್ರಯಾಣಿಕೊಬ್ಬರು ದೂರು ನೀಡಿದ್ದು, ಅವರ ದೂರಿನಂತೆ ರೈಲ್ವೆ ಬೋಗಿಯೊಳಗೆ ನುಗ್ಗಿದ್ದ ದುಷ್ಕರ್ಮಿ ದೂರುದಾರರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಲು ಯುತ್ನಿಸಿದ. ಅಷ್ಟೆ ಅಲ್ಲದೆ ಅದೇ ಬೋಗಿಯಲ್ಲಿದ್ದ ಇನ್ನೊಬ್ಬ ಪ್ರಯಾಣಿಕರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಅವರ ಬಳಿ ಇದ್ದ ಮೋಟೋರೋಲಾ (Motorola) ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ . ಈ ಬಗ್ಗೆ ರೈಲ್ವೆ ಇಲಾಖೆಯು ತಕ್ಷಣವೇ ಕರ್ತವ್ಯದಲ್ಲಿದ್ದ ಶಿವಮೊಗ್ಗ ರೈಲ್ವೆ ಪೊಲೀಸ್ (PC/SMET) ಮತ್ತು ಬೆಂಗಳೂರು ಜಿಆರ್‌ಪಿ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದೆ.   

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook ,  whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ತಾಳಗುಪ್ಪ-ಯಶವಂತಪುರ ರೈಲಿನೊಳಗೆ ನುಗ್ಗಿ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿ!ವಿದ್ಯಾನಗರ ರೈಲ್ವೆ ಸ್ಟೇಷನ್​ನಲ್ಲಿ ದರೋಡೆ!
Shivamogga Train Robbery
Shivamogga Train Robbery Confirmed: RailMadad Report on Knife Attack – Malenadu Today ಶಿವಮೊಗ್ಗ ರೈಲಿನಲ್ಲಿ ಚಾಕು ತೋರಿಸಿ ದರೋಡೆ: ರೈಲ್ ಮದದ್ ದೂರಿನ ಅನ್ವಯ ಘಟನೆ ದೃಢ. ಸುಜಯ್ ಮತ್ತು ವಿನಯ್ ಕುಮಾರ್ ಎಂಬುವರ ಮೇಲೆ ಹಲ್ಲೆ ಯತ್ನ. ರೈಲ್ವೆ ಇಲಾಖೆಯ ಉತ್ತರ ಇಲ್ಲಿದೆ.
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor