SHIVAMOGGA NEWS TODAY

ಬ್ರೇಕಿಂಗ್ ನ್ಯೂಸ್: ರಾಹುಲ್ ಗಾಂಧಿ ಅವಹೇಳನ ಕೇಸ್, ಶಾಸಕ ಆರಗ ಜ್ಞಾನೇಂದ್ರರ ಆಪ್ತನ ಜಾಮೀನು ಅರ್ಜಿ ವಜಾ! ನ್ಯಾಯಾಂಗ ಬಂಧನ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ /ಎಐಸಿಸಿ ವರಿಷ್ಟ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕರೊಬ್ಬರ ಜಾಮೀನು ಅರ್ಜಿ ತಿರಸ್ಕರಿಸಿ ಹೊಸನಗರ ಜೆಎಂಎಫ್‌ಸಿ (JMFC) ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

Shivamogga airport ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಮತ್ತೊಂದು ಗುಡ್‌ ನ್ಯೂಸ್‌! ಏನದು ಗೊತ್ತಾ?

ಏನಿದು ಪ್ರಕರಣ

ಹೊಸನಗರ ತಾಲ್ಲೂ ನಗರ ಪೊಲೀಸ್ ಠಾಣೆಯಲ್ಲಿ (Nagara PS) ದಿನಾಂಕ 20-05-2025 ರಂದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(2) ರ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿತ್ತು ಪೊಲೀಸ್ ಸಿಬ್ಬಂದಿ ಪ್ರವೀಣ್ ಕುಮಾರ್ ಜಿ.ಎಸ್ ( Sri Praveen Kumar B S CHC-428), ದಾಖಲಿಸಿದ್ದ ಸುಮುಟೋ ಪ್ರಕರಣದಲ್ಲಿ, ಆರೋಪಿ ಹೊಸನಗರ ತಾಲೂಕಿನ ಮಳಲಿ ಗ್ರಾಮದ ನಿವಾಸಿ ರಾಜೇಶ್ ಹಿರಿಮನೆ ಎಂಬವರು, ಹುಲ್ ಗಾಂಧಿ ಅವರ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಹರಿಬಿಟ್ಟು ವೈರತ್ವ, ವೈಮಸ್ಯ ಮತ್ತು ದ್ವೇಷ ಹರಡುವ ಕೃತ್ಯ ಎಸೆಗಿದ್ದಾರೆ ಎಂದು ಆರೋಪಿಸಿ ಎಫ್​ಐಆರ್ ಆಗಿತ್ತು. 

Rajesh Hirimane FIR Copy & Court Order Revealed Rahul Gandhi Case
Rajesh Hirimane FIR Copy & Court Order Revealed: Rahul Gandhi Case

ಈ ಪ್ರಕರಣದಲ್ಲಿ ಕೋರ್ಟ್ ವಿಚಾರಣೆಗೆ ಸಂಬಂಧಿಸಿದಂತೆ ಆರೋಪಿಗೆ ವಾರಂಟ್ ಜಾರಿಯಾಗಿತ್ತು. ಅದರಂತೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಆರೋಪಿ ಪರ ವಕೀಲರಾದ ವಿ.ಎಸ್.ಕೆ ಅವರು ಹಾಜರಾಗಿ ವಕಾಲತ್ತು ಸಲ್ಲಿಸಿದರು.ಆರೋಪಿ ಪರ ವಕೀಲರು ಬಿಎನ್‌ಎಸ್‌ಎಸ್ (BNSS) ಕಾಯ್ದೆಯ ಸೆಕ್ಷನ್ 72(2) ಅಡಿಯಲ್ಲಿ ವಾರಂಟ್ ರದ್ದುಪಡಿಸಲು ಹಾಗೂ ಸೆಕ್ಷನ್ 480ರ ಅಡಿಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಆದರೆ, ಈ ಪ್ರಕರಣದಲ್ಲಿ ಬಿಎನ್‌ಎಸ್ (BNS) ಕಾಯ್ದೆಯ ಸೆಕ್ಷನ್ 353(2) ರ ಅಡಿಯಲ್ಲಿ ದೂರು ದಾಖಲಾಗಿದ್ದು, ಇದು ಜಾಮೀನು ರಹಿತ ಅಪರಾಧವಾಗಿದೆ. ಅಲ್ಲದೆ ಈ ಅಪರಾಧಕ್ಕೆ 3 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ  ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿಲ್ಲ. ಆರೋಪಿಯನ್ನು  ಫೆಬ್ರವರಿ 24, 2026ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ಆದೇಶ ಹೊರಡಿಸಿದೆ. 

Rajesh Hirimane FIR Copy & Court Order Revealed Rahul Gandhi Case
Rajesh Hirimane FIR Copy & Court Order Revealed: Rahul Gandhi Case
Rajesh Hirimane FIR Copy & Court Order Revealed: Rahul Gandhi Case Updateಹೊಸನಗರ ಕೋರ್ಟ್ ಮಹತ್ವದ ಆದೇಶ: ಶಾಸಕ ಆರಗ ಜ್ಞಾನೇಂದ್ರ ಆಪ್ತ ಸಹಾಯಕನ ಜಾಮೀನು ಅರ್ಜಿ ವಜಾ. ಬಿಎನ್‌ಎಸ್ ಸೆಕ್ಷನ್ 353(2) ಅಡಿ ಫೆಬ್ರವರಿ 24ರವರೆಗೆ ನ್ಯಾಯಾಂಗ ಬಂಧನ.
ಸೂಚನೆ : ಹೊಸನಗರ ಕೋರ್ಟ್​ನ ನ್ಯಾಯಾಂಗ ವಿಚಾರದ ವರದಿ ಇದಾಗಿದ್ದು, ಮಾಹಿತಿಗಾಗಿ ಮಾತ್ರ ವರದಿಯನ್ನು ಬಿತ್ತರಿಸಲಾಗಿದೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Rajesh Hirimane FIR Copy & Court Order Revealed Rahul Gandhi Case
Rajesh Hirimane FIR Copy & Court Order Revealed: Rahul Gandhi Case

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ