ಶಿವಮೊಗ್ಗ : ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಕಾಲೇಜ್ ಒಂದಕ್ಕೆ ಹೋಗಿಬರುತ್ತೇನೆ ಎಂದು ತೆರಳಿದ್ದ ಯುವತಿ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆ ಯುವತಿಯ ಪತ್ತೆಗಾಗಿ ಪೊಲೀಸರು ಪ್ರಕಟಣೆ ಯನ್ನು ಹೊರಡಿಸಿದ್ದಾರೆ. ಭೂಮಿಕ (18) ನಾಪತ್ತೆಯಾದ ಯುವತಿ.
ಭದ್ರಾವತಿ ತಾಲೂಕು ರಾಮಿನಕೊಪ್ಪ ವಾಸಿ ಹನುಮಂತನಾಯ್ಕ ಎಂಬುವವರ ಮಗಳು ಭೂಮಿಕಾ ಜ. 30 ರಂದು ಮನೆಯಿಂದ ಬೈಪಾಸ್ ರಸ್ತೆಯ ಬಳಿಯಿರುವ ಕಾಲೇಜಿಗೆ ಎಂದು ಹೋದವರು ನಾಪತ್ತೆಯಾಗಿದ್ದಾರೆ
ಯುವತಿಯ ಚಹರೆ
5.2 ಅಡಿ ಎತ್ತರ, ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಪ್ಪುಬಣ್ಣದ ಪ್ಯಾಂಟ್, ಪರ್ಪಲ್ ಬಣ್ಣದ ಟಾಪ್ ಧರಿಸಿರುತ್ತಾರೆ
ಈ ಯುವತಿಯ ಕುರಿತು ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 9844470744 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯ ತಿಳಿಸಿದೆ.
College Student Bhumika Missing in Shivamogga


Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
