ಕೇವಲ 48 ಗಂಟೆಯಲ್ಲಿ ಬೆಲೆಬಾಳುವ ವಸ್ತು ಕದ್ದ ಆರೋಪಿಗಳು ಅಂದರ್​, ಕದ್ದಿದ್ದೇನು ಗೊತ್ತಾ..?

This Article Written by / Prathapa thirthahalli / ಫೆಬ್ರವರಿ 3, 2026

Bhadravathi Police Arrest Gold Snatchers Within 48 Hours

ಭದ್ರಾವತಿ :  ಭದ್ರಾವತಿ ಗ್ರಾಮಾಂತರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಬೆಳೆಬಾಳುವ ಚಿನ್ನದ ಸರವನ್ನು ಕದ್ದ ಆರೋಪಿಗಳನ್ನು 2 ದಿನದೊಳಗೆ ಬಂಧಿಸಿದ್ದಾರೆ. ಚಂದನ್ ನಾಯ್ಕ (20)   ವೇಣುಗೋಪಾಲ, (26) ಬಂಧಿತ ಆರೋಪಿಗಳು.

ಶಿವಮೊಗ್ಗದ ಬೀನಾಗೆ ಪಿ ಹೆಚ್ ಡಿ

ಘಟನೆ ವಿವರ

ಜನವರಿ 30 ರಂದು ಭದ್ರಾವತಿ ತಾಲೂಕಿನ ಕುವೆಂಪು ನಗರ ನಿವಾಸಿ ಜಯಂತ್​ ಎನ್ನುವವರು ಬೈಕ್​ನಲ್ಲಿ ಹೋಗುತ್ತಿದ್ದಾಗ, ಇಬ್ಬರು ಯುವಕರು ಜಯಂತ್​ರನ್ನು ಅಡ್ಡಗಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರ ಮೇಲೆ ಹಲ್ಲೆ ಮಾಡಿ ಅವರ ಕೊರಳಲ್ಲಿದ್ದ 14 ಗ್ರಾಂ ತೂಕದ 1,50,000 ರೂ ಬೆಲೆ ಬಾಳುವ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಹಿನ್ನೆಲೆ ಜಯಂತ್​ ಭದ್ರಾವತಿ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಳ್ಳರ ಪತ್ತೆಗಾಗಿ ಪೊಲೀಸರು ತಂಡ ರಚಿಸಿ ಶೋಧ ಕಾರ್ಯ ನಡೆಸಿದ್ದು, 2 ದಿನದೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಿಂದ ಸುಲಿಗೆ ಮಾಡಿದ 10ಗ್ರಾಂ ಬಂಗಾರದ ಸರ ಅಂದಾಜು ಮೌಲ್ಯ 1,50,000 ರೂಪಾಯಿ ಹಾಗೂ  ಆರೋಪಿತರು ಕೃತ್ಯಕ್ಕೆ ಬಳಸಿದ ಬೈಕ್​​ನ್ನು ವಶಪಡಿಸಿಕೊಂಡಿದ್ದಾರೆ. 

Bhadravathi Police Arrest Gold Snatchers Within 48 Hours

Bhadravathi Police Arrest Gold Snatchers Within 48 Hours
Bhadravathi Police Arrest Gold Snatchers Within 48 Hours

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Shivamogga crime news,ಆರೋಪಿಗಳ ಬಂಧನ,ಮಲೆನಾಡು ಟುಡೆ ನ್ಯೂಸ್

ಮುಂದಿನ ಸುದ್ದಿ ಒದಿ