ಏರ್‌ಟೆಲ್ ಗ್ರಾಹಕರಿಗೆ ಹಾಗೂ ಕಂಟೆಂಟ್​ ಕ್ರಿಯೇಟರ್​ ಗಳಿಗೆ ಇಲ್ಲಿದೆ ಬಂಪರ್ ಆಫರ್: 4,000 ಮೌಲ್ಯದ ಅಡೋಬ್ ಎಕ್ಸ್‌ಪ್ರೆಸ್ ಈಗ ಫ್ರೀ 

ಸಾಮಾನ್ಯವಾಗಿ ನಾವೆಲ್ಲರೂ ಏರ್‌ಟೆಲ್ ಸಿಮ್ ಬಳಸುತ್ತೇವೆ, ಆದರೆ ಕಂಪನಿ ನೀಡುವ ಹಲವು ಸೌಲತ್ತುಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ಇದೀಗ ಏರ್‌ಟೆಲ್ ತನ್ನ 360 ಮಿಲಿಯನ್ ಗ್ರಾಹಕರಿಗೆ ಒಂದು ಭರ್ಜರಿ ಸಿಹಿಸುದ್ದಿ ನೀಡಿದೆ.

ಶಿವಮೊಗ್ಗ ಸೋಗಾನೆ ಜೈಲಿನಲ್ಲಿ ಗೋಡೆ ಮೇಲಿಂದ ಹಾರಿಬಂತು 230 ಗ್ರಾಂ ಗಾಂಜಾ-ಮೊಬೈಲ್..?

ಏರ್‌ಟೆಲ್ ಕಂಪನಿ ಇದೀಗ ಅಡೋಬ್ ಎಕ್ಸ್‌ಪ್ರೆಸ್‌ ಎನ್ನುವಂತಹ ಅಪ್ಲಿಕೇಶನ್​ ಅನ್ನು ಬಿಡುಗಡೆಗೊಳಿಸಿದೆ. ಇದರ ಸಬ್​ಸ್ಕ್ರಿಪ್ಷನ್​ ಚಾರ್ಜ್ ವರ್ಷಕ್ಕೆ ​ 4 ಸಾವಿರ  ರೂಪಾಯಿಗಳಾಗಿದ್ದು, ಏರ್ಟೆಲ್​ ಗ್ರಾಹಕರಿಗೆ ಈ ಆಫರ್​ ಒಂದು ವರ್ಷಕ್ಕೆ ಉಚಿತವಾಗಿ ಸಿಗಲಿದೆ ಎಂಬುವುದು ವಿಶೇಷ, ಅದಕ್ಕೂ ಮೊದಲು ಈ ಅಡೋಬ್​ ಎಕ್ಸ್​​ಪ್ರೆಸ್ ಎಂದರೇನು ಅದು​ ಯಾವ ರೀತಿ ಕೆಲಸ ಮಾಡುತ್ತದೆ ಎಂದು ನೋಡುವುದಾದರೆ.

ಅಡೋಬ್ ಎಕ್ಸ್‌ಪ್ರೆಸ್ ಎಂದರೇನು?

ಇದು ಫೋಟೋ ಮತ್ತು ವಿಡಿಯೋಗಳನ್ನು ಸುಲಭವಾಗಿ ಎಡಿಟ್ ಮಾಡಲು ಬಳಸುವ ಅಪ್ಲಿಕೇಶನ್. ಗ್ರಾಫಿಕ್ ಡಿಸೈನಿಂಗ್ ಬಗ್ಗೆ ಏನೂ ತಿಳಿದಿಲ್ಲದ  ಸಾಮಾನ್ಯ ಜನರು ಕೂಡ ಉತ್ತಮವಾದ ಡಿಸೈನ್​ಗಳನ್ನು ಇದರಲ್ಲಿ ಕ್ರಿಯೇಟ್​ ಮಾಡಬಹುದು.

ಇದರ ಉಪಯೋಗಗಳೇನು?

ಇದು ಪ್ರಮುಖವಾಗಿ ಇನ್ಟಾಗ್ರಾಮ್​ ರೀಲ್ಸ್​, ಹಾಗು ಕಂಟೆಂಟ್​​ ಕ್ರಿಯೇಟರ್​ಗಳಿಗೆ ಬೆಸ್ಟ್​ ಅಪ್ಲಿಕೇಷನ್​ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್, ಫೇಸ್‌ಬುಕ್ ಪೋಸ್ಟ್ ಮತ್ತು ವಾಟ್ಸಾಪ್ ಸ್ಟೇಟಸ್‌ಗಳನ್ನು ಸುಲಭವಾಗಿ ಹಾಗು ವಿಭಿನ್ನವಾಗಿ ಡಿಸೈನ್​ ಮಾಡಬಹುದು, ಅಷ್ಡೇ ಅಲ್ಲದೆ ಯಾವರೀತಿ ಕಂಟೆಂಟ್​​ಗಳನ್ನು ಕ್ರಿಯೇಟ್​ ಮಾಡಬೇಕು ಎಂಬ ಮಾಹಿತಿಯನ್ನು ವಿಸ್ತಾರವಾಗಿ ನೀಡುತ್ತದೆ, ಅಷ್ಟೇ ಅಲ್ಲದೆ  ಮದುವೆ ಆಹ್ವಾನ ಪತ್ರಿಕೆ, ಹಬ್ಬದ ಶುಭಾಶಯಗಳು ಮತ್ತು ಲೋಗೋಗಳನ್ನು ಕ್ರಿಯೇಟ್ ಮಾಡುವ ಆಪ್ಷನ್​ ಇದರಲ್ಲಿದ್ದು, ಕೃತಕ ಬುದ್ಧಿಮತ್ತೆ ಬಳಸಿ ಫೋಟೋದ ಬ್ಯಾಗ್ರೌಂಡ್​ ಅನ್ನು ಒಂದೇ ಕ್ಲಿಕ್‌ನಲ್ಲಿ ತೆಗೆಯಬಹುದು. ಹಾಗೆಯೇ  ಲಕ್ಷಾಂತರ ರೆಡಿ ಟೆಂಪ್ಲೇಟ್ಸ್​ಗಳು ಇದರಲ್ಲಿ ಲಭ್ಯವಿದ್ದು 100 ಜಿಬಿ ಸ್ಟೋರೇಜ್​​ನ್ನು ಸಹ ನೀಡಿರುವುದು ವಿಶೇಷ.

Airtel Offer ಆಫರ್ ಪಡೆಯುವುದು ಹೇಗೆ?

ಈ ಆಫರ್ ಈಗಾಗಲೇ ಜನವರಿ 29, 2026 ರಿಂದ ಜಾರಿಗೆ ಬಂದಿದ್ದು, ಜನವರಿ 28, 2027 ರ ಒಳಗೆ ಕ್ಲೈಮ್ ಮಾಡಿಕೊಳ್ಳಬಹುದು.

ನಿಮ್ಮ ಫೋನ್‌ನಲ್ಲಿ Airtel Thanks App ಓಪನ್ ಮಾಡಿ.

Rewards ಅಥವಾ Discover Thanks ವಿಭಾಗಕ್ಕೆ ಹೋಗಿ.

Adobe Express Premium ಆಫರ್ ಮೇಲೆ ಕ್ಲಿಕ್ ಮಾಡಿ.

Activate Now ಒತ್ತಿ ಲಾಗಿನ್ ಆಗುವ ಮೂಲಕ ಉಚಿತ ಸೌಲಭ್ಯ ಪಡೆಯಿರಿ.

ಯಾರಿಗೆ ಲಭ್ಯ? ಏರ್‌ಟೆಲ್ ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್, ಎಕ್ಸ್‌ಸ್ಟ್ರೀಮ್ ಫೈಬರ್ ಮತ್ತು ಡಿಟಿಎಚ್ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ.

Airtel Offer Get Free Adobe Express Subscription

Airtel Offer Get Free Adobe Express Subscription
Airtel Offer Get Free Adobe Express Subscription
shivamogga car decor sun control house
shivamogga car decor sun control house
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು