ಕಾರ್ಯಕ್ರಮ ಮುಗಿಸಿ ಸಾಗರಕ್ಕೆ ಹೋಗುತ್ತಿದ್ದ ಸ್ನೇಹಿತದ್ದ ಬದುಕನ್ನೆ ಮುಗಿಸಿತು ಒಂದು ಘಟನೆ! ನಡೆಯಬಾರದಂತಹ ದುರಂತದಲ್ಲಿ ನಡೆದಿದ್ದು ಇದು!

Two Friends Die in Car-Canter Collision ಶಿವಮೊಗ್ಗ ಜಿಲ್ಲೆಸಾಗರ ತಾಲೂಕು, ಉಳ್ಳೂರು ಹತ್ತರ ಮೊನ್ನೆ ಭಾನುವಾರ ದಿನ ಅಪಘಾತವಾಗಿದೆ. ಮುಂಡಿಗೆಮಟ್ಟೆ ರಸ್ತೆಯ ತಿರುವಲ್ಲಿ ಕಳೆದ ಭಾನುವಾರ ರಾತ್ರಿ ಸಂಭವಿಸಿದ ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂದಪುರ ಕಡೆಯಿಂದ ಸಾಗರದತ್ತ ಪ್ರಯಾಣಿಸುತ್ತಿದ್ದ ಕಾರು ಮತ್ತು ಎದುರು ದಿಕ್ಕಿನಿಂದ ಅಂದರೆ ಸಾಗರದಿಂದ ಆನಂದಪುರದ ಕಡೆಗೆ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಆಗಿ ಆಕ್ಸಿಡೆಂಟ್ ಆಗಿತ್ತು. ಕಾರಿನಲ್ಲಿದ್ದ ಯುವಕ ಮತ್ತು ಯುವತಿ ಅಸುನೀಗಿದ್ದಾರೆ. ಘಟನೆಯಲ್ಲಿ ಕಾರು ಪೂರ್ತಿ ಜಖಂ ಆಗಿತ್ತು. 

Two Friends Die in Car-Canter Collision at Mundigematte
Two Friends Die in Car-Canter Collision at Mundigematte

ಶಿವಮೊಗ್ಗ ಸೋಗಾನೆ ಜೈಲಿನಲ್ಲಿ ಗೋಡೆ ಮೇಲಿಂದ ಹಾರಿಬಂತು 230 ಗ್ರಾಂ ಗಾಂಜಾ-ಮೊಬೈಲ್..?

ಮೃತಪಟ್ಟ ದುರ್ದೈವಿಗಳನ್ನು ಸೊರಬ ತಾಲೂಕಿನ ಮಳಲಗದ್ದೆ ಗ್ರಾಮದ ಚನ್ನಬಸವಪ್ಪ ಅವರ ಪುತ್ರಿ 25 ವರ್ಷದ ಪವಿತ್ರಾ ಹಾಗೂ ಸಾಗರ ತಾಲೂಕಿನ ತಡಗಳಲೆ ಗ್ರಾಮದ ಸತೀಶ್ ಅವರ ಪುತ್ರ 25 ವರ್ಷದ ವೀರೇಶ್ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮೃತರಿಬ್ಬರೂ ಆಪ್ತ ಸ್ನೇಹಿತರಾಗಿದ್ದು, ಭಾನುವಾರ ಸಂಜೆ ಆನಂದಪುರದಲ್ಲಿ ನಡೆದ ತಮ್ಮ ಸ್ನೇಹಿತರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ಸಾಗರಕ್ಕೆ ಕಾರಿನಲ್ಲಿ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಸಾಗರ ರಸ್ತೆ ಅಪಘಾತ: ಮುಂಡಿಗೆಮಟ್ಟೆ ತಿರುವಿನಲ್ಲಿ ಇಬ್ಬರು ಸ್ನೇಹಿತರ ದುರ್ಮರಣ Sagara Road Accident Two Friends Die in Car-Canter Collision at Mundigematte

ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ, ಕ್ಯಾಂಟರ್ ಚಾಲಕನ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯೇ ಈ ಅಪಘಾತಕ್ಕೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಆನಂದರಪುರ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿದೆ. 

Two Friends Die in Car-Canter Collision at Mundigematte
Two Friends Die in Car-Canter Collision at Mundigematte

ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ? ಪಟ್ಟಿ ಇಲ್ಲಿದೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

Two Friends Die in Car-Canter Collision at Mundigematte
Two Friends Die in Car-Canter Collision at Mundigematte

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು