Shivamogga | 03 February 2026 ಚಿನ್ನ ಮತ್ತು ಬೆಳ್ಳಿ ದರದಲ್ಲಿ ಸೂಪರ್ ಕುಸಿತ ಆಗ್ತಿದೆ. ನಿನ್ನೆ ದಿನ ಅಂದರೆ ಸೋಮವಾರ ಒಂದೇ ದಿನ, ಬೆಳ್ಳಿ ದರ ಪ್ರತಿ ಕೆಜಿಗೆ ಬರೋಬ್ಬರಿ 52,000 ರೂಪಾಯಿ ಕಡಿಮೆಯಾಗಿದೆ. ಅಂದರೆ ಮೂಲ ಬೆಲೆಗೆ ಹೋಲಿಸಿದರೆ 17 % ರಷ್ಟು ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 2.60 ಲಕ್ಷ ರೂಪಾಯಿನಷ್ಟಿದೆ.
ಚಿನ್ನದ ದರದಲ್ಲಿಯೂ ಸಹ ಭಾರೀ ಇಳಿಕೆ ದಾಖಲಾಗಿದೆ. ಶೇ. 99.9 ರ 10 ಗ್ರಾಂ ಚಿನ್ನದ ಬೆಲೆ 12,800 ರೂಪಾಯಿಗಳಷ್ಟು (ಶೇ. 7.73 ರಷ್ಟು) ಕುಸಿತ ಕಂಡಿದೆ.

ಶಿವಮೊಗ್ಗ ಸೋಗಾನೆ ಜೈಲಿನಲ್ಲಿ ಗೋಡೆ ಮೇಲಿಂದ ಹಾರಿಬಂತು 230 ಗ್ರಾಂ ಗಾಂಜಾ-ಮೊಬೈಲ್..?
ಪ್ರಸ್ತುತ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ 1,52,700 ರೂಪಾಯಿ ಇದೆ. ಏರಿಕೆಯ ಹಾದಿಯಲ್ಲಿದ್ದ ಬಂಗಾರದ ಬೆಲೆ ಇಳಿಕೆ ಕಂಡಿರುವುದು ಚಿನ್ನಾಭರಣ ಪ್ರಿಯರ ಗಮನ ಸೆಳೆದಿದೆ.
ಕಳೆದ ಮೂರು ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಸತತವಾಗಿ ಇಳಿಕೆ ಕಂಡುಬರುತ್ತಿದೆ. ಚಿನ್ನದ ಬೆಲೆಯಲ್ಲಿ ಒಟ್ಟಾರೆಯಾಗಿ 30,300 ರೂಪಾಯಿ (ಶೇ. 17 ರಷ್ಟು) ಕಡಿಮೆಯಾಗಿದೆ. ಇದೇ ಜನವರಿ 29 ರಂದು 1.83 ಲಕ್ಷ ರೂಪಾಯಿನಷ್ಟಿದ್ದ ಚಿನ್ನದ ದರ ಈಗ 1,52,700 ರಷ್ಟಿದೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಚಿನ್ನದ ದರ ಕುಸಿತ 03-02-2026: ಒಂದೇ ದಿನದಲ್ಲಿ 12,800 ರೂ. ಇಳಿಕೆ ಕಂಡ ಬಂಗಾರ Gold Rate Crash 03-02-2026: Gold Price Drops by Rs 12,800 in a Single Day
