Panchanga January 30 2026 Shivamogga | ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣದ ಶಿಶಿರ ಋತು ಮಾಘ ಮಾಸದ ಈ ದಿನ ಶುಕ್ಲ ಪಕ್ಷದ ದ್ವಾದಶಿ ತಿಥಿಯು ಬೆಳಿಗ್ಗೆ 9:55 ರವರೆಗೆ ಇರಲಿದ್ದು, ತದನಂತರ ತ್ರಯೋದಶಿ ತಿಥಿ ಆರಂಭವಾಗಲಿದೆ. ರಾತ್ರಿ 3:00 ಗಂಟೆಯವರೆಗೆ ಆರಿದ್ರ್ಯಾ ನಕ್ಷತ್ರವಿದ್ದು, ಆ ಬಳಿಕ ಪುನರ್ವಸು ನಕ್ಷತ್ರ ಪ್ರವೇಶಿಸಲಿದೆ. ಅಮೃತ ಕಾಲ ಸಂಜೆ 5:41 ರಿಂದ 7:30 ರವರೆಗೆ ಇರುತ್ತದೆ. ರಾಹುಕಾಲ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇದ್ದರೆ, ಯಮಗಂಡ ಕಾಲ ಮಧ್ಯಾಹ್ನ 3:00 ರಿಂದ 4:30 ರವರೆಗೆ ಇರಲಿದೆ.

Panchanga January 30 2026 /ಇವತ್ತಿನ ರಾಶಿಫಲ
ಮೇಷ | ಅತ್ಯಂತ ಶುಭದಾಯಕ ದಿನ. ಮಂಗಳಕರವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಬಾಕಿ ಉಳಿದಿದ್ದ ಹಣ ಕೈಸೇರುವುದುಮ, ಆರ್ಥಿಕವಾಗಿ ಸಮಾಧಾನ ಸಿಗಲಿದೆ. ವ್ಯಾಪಾರಸ್ಥರಿಗೆ ತಮ್ಮ ವ್ಯವಹಾರವನ್ನು ವಿಸ್ತರಿಸಲು ನಡೆಸುವ ಪ್ರಯತ್ನಗಳಿಗೆ ಫಲ ಸಿಗುವುದು. ಉದ್ಯೋಗಿಗಳಿಗೆ ಆಶಾದಾಯಕವಾದ ಬದಲಾವಣೆ ಎದುರಾಗುವುದು.
ವೃಷಭ | ಮಿಶ್ರಫಲ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಆರ್ಥಿಕವಾಗಿ ಮುಗ್ಗಟ್ಟು ಎದುರಾಗುವ ಸಾಧ್ಯತೆಗಳಿದ್ದು, ಹೊಸದಾಗಿ ಸಾಲ ಆಗಬಹುದು, ಕಿರಿಕಿರಿ ಉಂಟುಮಾಡುವ ಪ್ರಸಂಗ ಎದುರಾಗಬಹುದು. ವ್ಯಾಪಾರದಲ್ಲಿ ನಿರೀಕ್ಷಿತ ಮಟ್ಟದ ಲಾಭ ಉದ್ಯೋಗಸ್ಥರಿಗೆ ಅಡೆತಡೆ ಎದುರಾಗುವ ಸಂಭವವಿದೆ.
ಮಿಥುನ | ಅತ್ಯುತ್ತಮ ದಿನವಾಗಲಿದೆ. ಉತ್ತಮ ಪ್ರೋತ್ಸಾಹ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿಯು ಆಶಾದಾಯಕವಾಗಿರಲಿದ್ದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವರು. ವ್ಯಾಪಾರಸ್ಥರಿಗೆ ಹಾಗೂ ಉದ್ಯೋಗಿಗಳಿಗೆ ಇಂದು ಹೊಸ ಹುಮ್ಮಸ್ಸು ಮೂಡಲಿದೆ

ಕರ್ಕಾಟಕ | ಎಚ್ಚರಿಕೆಯ ದಿನ. ಸಂಬಂಧಿಕರೊಂದಿಗೆ ಮನಸ್ತಾಪ. ಅನಾವಶ್ಯಕ ಖರ್ಚು .ಆರ್ಥಿಕ ಹೊರೆ. ಕೆಲಸ ಕಾರ್ಯಗಳಲ್ಲಿ ಮಂದಗತಿ. ನಿರುತ್ಸಾಹ, ದೇವಾಲಯಗಳಿಗೆ ಭೇಟಿ. ವ್ಯಾಪಾರ ವ್ಯವಹಾರ ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳಿಗೆ ಕೆಲಸದೊತ್ತಡ.
ಸಿಂಹ | ಅದೃಷ್ಟದ ಬಾಗಿಲು ತೆರೆಯಲಿದೆ. ಅಂದುಕೊಂಡ ಕೆಲಸ ಅಡೆತಡೆಗಳಿಲ್ಲದೆ ಸುಗಮವಾಗಿ ಪೂರ್ಣಗೊಳ್ಳಲಿವೆ. ಆರ್ಥಿಕವಾಗಿ ಉತ್ತಮ ಪ್ರಗತಿ, ಹಳೆಯ ಸಾಲ ಬಾಧೆಗಳಿಂದ ಮುಕ್ತಿ. ಬೆಲೆಬಾಳುವ ವಸ್ತು ಮತ್ತು ವಸ್ತ್ರ ಲಾಭ. ದೈವ ದರ್ಶನ. ಉದ್ಯೋಗಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳಿಗೆ ಶುಭ ಸುದ್ದಿ, ವ್ಯವಹಾರ ವಿಸ್ತರಿಸಲಿದ್ದಾರೆ. ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ.
ಕನ್ಯಾ | ಯಶಸ್ಸಿನ ದಿನವಾಗಿದೆ. ಕೈಗೊಂಡ ವ್ಯವಹಾರಗಳಲ್ಲಿ ಗೆಲುವನ್ನು ಸಾಧಿಸಲಿದ್ದಾರೆ. ಶುಭ ಸುದ್ದಿಗಳನ್ನು ಕೇಳಲಿದ್ದಾರೆ. ಸಂದರ್ಶನಗಳಿಗೆ ಕರೆ ಬರುವ ಸಾಧ್ಯತೆ ಇದೆ. ಭವಿಷ್ಯಕ್ಕೆ ಸಂಬಂಧಿಸಿದಂತೆ ‘ತೀರ್ಮಾನಗಳನ್ನು ಇಂದು ತೆಗೆದುಕೊಳ್ಳಲಿದ್ದಾರೆ. ವ್ಯಾಪಾರದಲ್ಲಿ ಹೂಡಿಕೆ. ಉದ್ಯೋಗದಲ್ಲಿ ಉತ್ಸಾಹ ಹೆಚ್ಚಾಗಲಿದೆ.
ತುಲಾ| ಸವಾಲಿನ ದಿನ. ಸಾಲ ಮಾಡುವ ಸಂದರ್ಭ. ಮನಸ್ಸಿನಲ್ಲಿ ಆಲೋಚನೆಗಳು ಸ್ಥಿರವಾಗಿರದು, ಗೊಂದಲ ಉಂಟಾಗಬಹುದು. ಜವಾಬ್ದಾರಿಗಳು ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಬಹುದು. ಎಷ್ಟೇ ಕಷ್ಟಪಟ್ಟರೂ ಶ್ರಮ ತಪ್ಪಿದ್ದಲ್ಲ ಎನ್ನುವಂತಾಗಬಹುದು. ವ್ಯಾಪಾರ ಆಮೆಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳಿಗೆ ಕೆಲಸದ ಕಿರಿಕಿರಿ
ವೃಶ್ಚಿಕ | ಖರ್ಚು ವೆಚ್ಚ ಶ್ರಮದಾಯಕ ದಿನ. ಜವಾಬ್ದಾರಿಗಳ ಭಾರ, ಒತ್ತಡ ಹಾಗೂ ದೈಹಿಕ ಶ್ರಮದ ದಿನ. ದೂರದ ಊರುಗಳಿಗೆ ಪ್ರಯಾಣ. ದೇವಸ್ಥಾನಗಳಿಗೆ ಭೇಟಿ. ವ್ಯಾಪಾರ ತೀರಾ ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಕೆಲವೊಂದು ತೊಡಕು ಸಮಸ್ಯೆ ಎದುರಾಗಬಹುದು.

ಧನು | ಶುಭ ಸುದ್ದಿ ಕಾದಿದೆ. ಹೊಸ ಉದ್ಯೋಗ ದೊರೆಯುವ ಪ್ರಬಲ ಯೋಗವಿದೆ. ಬಾಲ್ಯ ಸ್ನೇಹಿತರಿಂದ ಆಹ್ವಾನ ಮನಸ್ಸಿಗೆ ಸಂತಸವಾಗಲಿದೆ. ವಿಹಾರ, ಔತಣಕೂಟಗಳಲ್ಲಿ ಭಾಗಿಯಾಗುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಅಂದುಕೊಂಡ ಕೆಲಸ ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಶುಭಲಾಭ ಉದ್ಯೋಗಿಗಳಲ್ಲಿ ಹೊಸ ಭರವಸೆಮೂಡಲಿವೆ.
ಮಕರ | ಅತ್ಯಂತ ಲಾಭದಾಯಕ ದಿನ. ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ. ಸಮಾಜದ ಗಣ್ಯರೊಂದಿಗೆ ಪರಿಚಯವಾಗುವ ಅವಕಾಶವಿದೆ. ಹೊಸ ಕೆಲಸಗಳಿಗೆ ಚಾಲನೆ. ಅನಿರೀಕ್ಷಿತವಾಗಿ ಧನಲಾಭ. ವ್ಯಾಪಾರದಲ್ಲಿ ಉತ್ತಮ ಲಾಭ. ಉದ್ಯೋಗಿಗಳಿಗೆ ಸೇವೆಗೆ ತಕ್ಕ ಮನ್ನಣೆ
ಕುಂಭ | ಮಿಶ್ರ ಫಲಿತಾಂಶ. ವ್ಯವಹಾರ ನಿರೀಕ್ಷಿತ ಫಲ. ಕಷ್ಟಪಟ್ಟು ದುಡಿದರೂ ಅದಕ್ಕೆ ತಕ್ಕ ಪ್ರತಿಫಲ. ಆಸ್ತಿಯ ವಿಚಾರದಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇದೆ. ಮನಸ್ಸು ಆಧ್ಯಾತ್ಮಿಕ ವಿಚಾರಗಳತ್ತ ಹರಿಯಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ. ವ್ಯಾಪಾರದಲ್ಲಿ ಏರಿಳಿತಗಳು. ಉದ್ಯೋಗಿಗಳಿಗೆ ಸ್ಥಾನ ಬದಲಾವಣೆ.
ಮೀನ| ಆರ್ಥಿಕ ಪರಿಸ್ಥಿತಿ ಚೇತರಿಕೆ. ಹತ್ತಿರದವರೊಂದಿಗೆ ಅಥವಾ ಆಪ್ತರೊಂದಿಗೆ ಮನಸ್ತಾಪ. ಆಸ್ತಿ ವಿಚಾರದಲ್ಲಿ ತಗಾದೆ. ಕೆಲವು ಕೆಲಸ ಅನಿವಾರ್ಯವಾಗಿ ಮುಂದೂಡಬೇಕಾಗಬಹುದು.. ವ್ಯಾಪಾರ ಸಾಧಾರಣ ಮಟ್ಟದಲ್ಲಿ ನಡೆಯಲಿವೆ. ಉದ್ಯೋಗಿಗಳಿಗೆ ವಿಶೇಷವಾದ ದಿನ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ: ಮಕರ ರಾಶಿಗೆ ಧನಲಾಭ, ದ್ವಾದಶ ರಾಶಿಗಳ ಫಲಾಫಲ – ಜನವರಿ 30, 2026 Today Horoscope and Panchanga January 30 2026: Daily Astrology Prediction for 12 Zodiac Signs