ಸಾಗರ: 33 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದ ವ್ಯಕ್ತಿ ಪೊಲೀಸರ ಬಲೆಗೆ. 

ಕೊನೆಯ ನವೀಕರಣ: 19 ಜನವರಿ 2026, 4:24 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
Sagara Police Arrest Absconding Accused After 33 Years
Sagara Police Arrest Absconding Accused After 33 Years

ಸಾಗರ: ಬರೋಬ್ಬರಿ 33 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನು ಕೊನೆಗೂ ಪತ್ತೆಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಾಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ರಂಗಾಯಣದಿಂದ ಶಿವಮೊಗ್ಗದಲ್ಲಿ ರಂಗ ಸಂಕ್ರಾಂತಿ | ಜನವರಿ 14 ರಿಂದ ಆರು ದಿನ ವಿಶೇಷ ನಾಟಕ! ಮಿಸ್ ಮಾಡಬೇಡಿ

ಪ್ರಕರಣದ ಹಿನ್ನೆಲೆ 

1985ರಲ್ಲಿ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗುನ್ನೆ ಸಂಖ್ಯೆ 29/1985, ಕಲಂ 448 (ಮನೆ ಅತಿಕ್ರಮಣ) ಮತ್ತು 323 (ಹಲ್ಲೆ) ಪ್ರಕರಣದ ಆರೋಪಿಯೊಬ್ಬ  (ಆಗ 18 ವರ್ಷ, ಈಗ 60 ವರ್ಷ), ಕಳೆದ ಮೂರು ದಶಕಗಳಿಂದಲೂ ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಾಗರದ ಜೆ.ಎಂ.ಎಫ್.ಸಿ ನ್ಯಾಯಾಲಯವು ಆರೋಪಿ ವಿರುದ್ಧ ದಸ್ತಗಿರಿ ವಾರೆಂಟ್ ಹೊರಡಿಸಿತ್ತು.

Sagara Police Arrest Absconding Accused After 33 Years
Sagara Police Arrest Absconding Accused After 33 Years

ಮೊಬೈಲ್ ಕಳೆದುಹೋಗಿದೆಯೇ? ಈಗ ರಪ್ಪಾ ಸಿಗ್ತದೆ ಫೋನ್​! ಹೀಗಿದೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆ

ಆರೋಪಿಯ ಪತ್ತೆಗಾಗಿ ಸಾಗರ ಉಪ ವಿಭಾಗದ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡದಲ್ಲಿ ಎಎಸ್ಐ ಪರಶುರಾಮ್, ಹೆಚ್‌ಸಿ ರತ್ನಾಕರ, ತಾರಾನಾಥ, ಶೇಕ್ ಫೈರೋಜ್ ಅಹಮದ್ ಹಾಗೂ ಪಿಸಿ ವಿಶ್ವನಾಥ, ರಾಮನಗೌಡ ಪಾಟೀಲ್ ಮತ್ತು ಜಗದೀಶ್ ಇದ್ದರು. ತಂಡವು ತಾಂತ್ರಿಕ ಮಾಹಿತಿ ಹಾಗೂ ಹಳೆಯ ದಾಖಲೆಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು .

ಪತ್ತೆಯಾದ ಕೆ.ಪಿ. ಮಯಡ್ಡಿಯನ್ನು ಸಾಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡ ಆರೋಪಿಯು ದಂಡವನ್ನು ಪಾವತಿಸಿದನು.

Sagara Police Arrest Absconding Accused After 33 Years
Sagara Police Arrest Absconding Accused After 33 Years
Sagara Police Arrest Absconding Accused After 33 Years
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor