ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ತೆರಳಿದ್ದ ಶಿವಮೊಗ್ಗದ ಮಹಿಳೆಗೆ ಪಕ್ಕದ ಮನೆಯಿಂದ ಬಂತೊಂದು ಶಾಕಿಂಗ್​ ಸುದ್ದಿ,,?

ಹಂಚಿಕೊಳ್ಳಿ
WhatsApp Facebook X Telegram
shivamogga doddapet police staiton
Shimoga Honda Activa Rowdy Sheeter Man Assaulted Shimoga Jewelry Stolen Burglary in Shivamogga Shimoga SIMS Hostel Shivamogga Bus Driver Assault Gold Robbery Scam Shivamogga crime news shivamogga doddapete caseshivamogga news today

ಶಿವಮೊಗ್ಗ :  ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ತೆರಳಿದ್ದಾಗ ಕಳ್ಳರು ಮಹಿಳೆಯೊಬ್ಬರ ಮನೆಗೆ ನುಗ್ಗಿ ಸಾವಿರಾರು ರೂಪಾಯಿ ಮೌಲ್ಯದ ಬಂಗಾರ ಹಾಗೂ ನಗದನ್ನು ದೋಚಿದ್ದಾರೆ. ಈ ಘಟನೆ ಶಿವಮೊಗ್ಗದ ಕುರುಬರು ಪಾಳ್ಯದ ಮನೆಯೊಂದರಲ್ಲಿ ನಡೆದಿದ್ದು, ಮಹಿಳೆ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಚಿಕಿತ್ಸೆ ಫಲಿಸದೆ ಕೇಂದ್ರ ಕಾರಾಗೃಹದ ಸಜಾ ಬಂಧಿ ಸಾವು

Burglary in Shivamogga ಪ್ರಕರಣದ ವಿವರ

ಕುರುಬರ ಪಾಳ್ಯದ ಮಹಿಳೆಯೊಬ್ಬರು ತಮ್ಮ ಬೀದಿಯ ಜನರ ಜೊತೆ ಕುಟುಂಬದೊಂದಿಗೆ ತಮಿಳು ನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಇರುವ ವೇಳೆ ಮುಂಜಾನೆ ಮಹಿಳೆಗೆ ಪಕ್ಕದ ಮನೆಯವರು ಫೊನ್​ ಮಾಡಿದ್ದು, ನಿಮ್ಮ ಮನೆಯ ಬಾಗಿಲಿನ ಬೀಗವನ್ನು ಯಾರೋ ಒಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೆ ಅಲ್ಲಿಂದ ಹೊರಟು ಮನೆಗೆ ಬಂದ ಮಹಿಳೆಗೆ ಶಾಕ್​ ಎದುರಾಗಿದೆ. ಬಾಗಿಲಿನ ಬೀಗವನ್ನು ಮುರಿದ ಒಳ ಹೊಕ್ಕಿದ್ದ ಕಳ್ಳರು 

ಹಾಲ್‌ನಲ್ಲಿದ್ದ ಬೀರುವಿನ  ಲಾಕ್ ಅನ್ನು ಮೀಟಿ ಮುರಿದಿದ್ದಾರೆ. ಅದರಲ್ಲಿದ್ದ ಬಂಗಾರ ನಗದು ಸೇರಿ ಒಟ್ಟು 71,000 ರೂಪಾಯಿ ಮೌಲ್ಯದ ಸೊತ್ತನ್ನು ದೋಚಿದ್ದಾರೆ.  ಘಟನೆ ಹಿನ್ನೆಲೆ ಮಹಿಳೆ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. 

Burglary in Shivamogga Gold and Cash Stolen

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor