ಭಾರತೀಪುರದಲ್ಲಿ ಬಸ್​,ಕಾರು ನಡುವೆ ಅಪಘಾತ: ಮೃತರ ಸಂಖೆ 4 ಕ್ಕೆ ಏರಿಕೆ, ಅಪಘಾತಕ್ಕೆ ಕಾರಣವೇನು..?

This Article Written by / Prathapa thirthahalli / ಜನವರಿ 14, 2026

Bharathipura Accident Death Toll Rises to 4

ತೀರ್ಥಹಳ್ಳಿ :  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಭಾರತೀಪುರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ನಿನ್ನೆ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಫಾತೀಮಾ(70), ರಿಹಾನ್(14), ರಾಹಿಲ್(9) ಹಾಗೂ ಜಯಾನ್ (14) ಮೃತರು ಎಂದು ತಿಳಿದು ಬಂದಿದೆ.

Bharathipura Accident Death Toll Rises to 4
Bharathipura Accident Death Toll Rises to 4

ರಂಗಾಯಣದಿಂದ ಶಿವಮೊಗ್ಗದಲ್ಲಿ ರಂಗ ಸಂಕ್ರಾಂತಿ | ಜನವರಿ 14 ರಿಂದ ಆರು ದಿನ ವಿಶೇಷ ನಾಟಕ! ಮಿಸ್ ಮಾಡಬೇಡಿ

ಮಂಗಳೂರಿನಿಂದ ರಾಯಚೂರಿಗೆ ತೆರಳುತ್ತಿದ್ದ ಸಾರಿಗೆ ಬಸ್‌ಗೆ ಎದುರಿನಿಂದ ಬಂದ ಕಾರು ಓವರ್‌ಟೇಕ್ ಮಾಡಲು ಹೋಗಿ ವೇಗವಾಗಿ ಡಿಕ್ಕಿ ಹೊಡೆದಿದ್ದೇ ಈ ದುರ್ಘಟನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಈ ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ 70 ವರ್ಷದ ಫಾತೀಮಾ ಬಿ ಹಾಗೂ 14 ವರ್ಷದ ರಿಹಾನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ 9 ವರ್ಷದ ರಾಹಿಲ್ ಮತ್ತು 12 ವರ್ಷದ ಝಯಾನ್ ಅವರನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರೆಲ್ಲರೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೇಣಸೇ ಗ್ರಾಮದ ನಿವಾಸಿಗಳಾಗಿದ್ದಾರೆ. ಕಾರಿನಲ್ಲಿದ್ದ ಇತರ ಪ್ರಯಾಣಿಕರಾದ 35 ವರ್ಷದ ಝರೀನಾ, 12 ವರ್ಷದ ರಿಹಾ ಹಾಗೂ ಕಾರು ಚಾಲಕ ಜಯಾನ್ ಅವರಿಗೂ ಗಾಯಗಳಾಗಿದ್ದು, ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಕಾರು ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿದೆ.

Bharathipura Accident Death Toll Rises to 4
Bharathipura Accident Death Toll Rises to 4

Bharathipura Accident Death Toll Rises to 4

 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Malenadu Today News.,Thirthahalli Accident

ಮುಂದಿನ ಸುದ್ದಿ ಒದಿ