ಶಿವಮೊಗ್ಗ: ಸಿಲಿಂಡರ್​ ಸ್ಪೋಟ, ಲಕ್ಷಾಂತರ ರೂಪಾಯಿ ವಸ್ತುಗಳು ಹಾನಿ

ಶಿವಮೊಗ್ಗ:  ಸಿದ್ದೇಶ್ವರ ನಗರದ 4 ನೇ ಅಡ್ಡರಸ್ತೆಯಲ್ಲಿರುವ ಮನೆಯೊಂದರಲ್ಲಿ ಸಿಲಿಂಡರ್​ ಸ್ಪೋಟಗೊಂಡು ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿರುವ ಘಟನೆ ನಿನ್ನೆ ಬೆಳಿಗ್ಗೆ ನಡೆದಿದೆ.

Cylinder Blast in Shivamogga's Siddeshwara Nagara 
Cylinder Blast in Shivamogga’s Siddeshwara Nagara 

ಎನ್​​ಐಎ ಅಧಿಕಾರಿಗಳ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ ಬಂತು ಫೋನ್, ನಂತರ ಏನಾಯ್ತು.? 

ನಿನ್ನೆ ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಧರ್ಮಪ್ಪ ಎಂಬುವವರ ಮನೆಯ ಸಿಲಿಂಡರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಸ್ಪೋಟಗೊಂಡಿದೆ. ಇದರ ಪರಿಣಾಮವಾಗಿ ಮನೆಯ ಮೇಲ್ಚಾವಣಿ ಹಾರಿ ಹೋಗಿ ತೀವ್ರವಾಗಿ ಹಾನಿ ಉಂಟಾಗಿದೆ. ಅದೃಷ್ಟವಶಾತ್​ ಧರ್ಮಪ್ಪ ಮನೆಯರ್ಯಾರು ಸಹ ಒಳಗೆ ಇಲ್ಲದೆ ಇದ್ದುದ್ದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ. 

ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಸಿಲಿಂಡರ್​ ಸ್ಪೊಟದಿಂದ ಲಕ್ಷಾಂತರ ರುಪಾಯಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.

Cylinder Blast in Shivamogga’s Siddeshwara Nagara 

Cylinder Blast in Shivamogga's Siddeshwara Nagara