ಎನ್​​ಐಎ ಅಧಿಕಾರಿಗಳ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿಗೆ ಬಂತು ಫೋನ್, ನಂತರ ಏನಾಯ್ತು.? 

ಹಂಚಿಕೊಳ್ಳಿ
WhatsApp Facebook X Telegram
Cyber Fraud in Shimoga Man Loses 2.5 Lakh
Cyber Fraud in Shimoga Man Loses 2.5 Lakh

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಯ ಪಿಡುಗು ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಅದರಲ್ಲಿಯೂ ಡಿಜಿಟಲ್ ಅರೆಸ್ಟ’ ನಂತಹ ವಂಚನೆಗಳು ಸಾರ್ವಜನಿಕರನ್ನು ತೀವ್ರ ಆತಂಕಕ್ಕೀಡು ಮಾಡುತ್ತಿವೆ.   ಇದರ ನಡುವೆ ಇದೀಗ ಶಿವಮೊಗ್ಗದಲ್ಲಿಯೂ ಸಹ ವ್ಯಕ್ತಿಯೊಬ್ಬರಿಗೆ ಬೆದರಿಸಿ ಡಿಜಿಟಲ್ ಅರೆಸ್ಟ್ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ದಾಖಲಾಗಿದೆ.

Cyber Fraud in Shimoga Man Loses 2.5 Lakh
Cyber Fraud in Shimoga Man Loses 2.5 Lakh

Cyber Fraud ಘಟನೆಯ ವಿವರ

ಶಿವಮೊಗ್ಗದ ವ್ಯಕ್ತಿಯೊಬ್ಬರು ಈ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಬಲಿಯಾಗಿದ್ದಾರೆ. ಡಿಸೆಂಬರ್ 23ರಂದು ದೂರುದಾರರಿಗೆ ಅಪರಿಚಿತ ನಂಬರ್‌ನಿಂದ ಫೋನ್ ಕರೆಗಳು ಬಂದಿವೆ. ಫೋನನ್ನು ರಿಸೀವ್ ಮಾಡಿ ಮಾತನಾಡಿದಾಗ, ವಂಚಕರು ಮೊದಲು ತಮ್ಮನ್ನು ಟೆರರಿಸ್ಟ್ ಸ್ಕ್ವಾಡ್ ಪೊಲೀಸ್’ ಎಂದು ಪರಿಚಯಿಸಿಕೊಂಡಿದ್ದಾರೆ.ನಂತರ ಎನ್.ಐ.ಎ (NIA) ಅಧಿಕಾರಿಗಳಂತೆ ನಟಿಸಿದ ವಂಚಕರು, ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬಳಸಿ ಭಯೋತ್ಪಾದಕರು 8 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದಾರೆ. ನೀವು ಭಯೋತ್ಪಾದಕ ಸಂಘಟನೆಗೆ ಸಹಕರಿಸಿ ಅವರಿಂದ 80 ಲಕ್ಷ ರೂಪಾಯಿಗಳನ್ನು ಕಮಿಷನ್ ರೂಪದಲ್ಲಿ ನಿಮ್ಮ ಖಾತೆಗೆ ಪಡೆದುಕೊಂಡಿದ್ದೀರಿ ಎಂದು ಹೆದರಿಸಿದ್ದಾರೆ.

ನಂತರ ದೂರುದಾರರಿಗೆ ನಕಲಿ ಅರೆಸ್ಟ್ ವಾರೆಂಟ್ ಕಳುಹಿಸಿ ಬೆದರಿಸಿದ ವಂಚಕರು, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆರ್.ಬಿ.ಐ (RBI) ಅಧಿಕಾರಿಗಳು ಪರಿಶೀಲಿಸಬೇಕಿದೆ” ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ದೂರುದಾರರಿಂದ ಹಂತಹಂತವಾಗಿ 2,50,000/ ರೂಪಾಯಿ ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಸಂತ್ರಸ್ತರು, ಕೂಡಲೇ ಶಿವಮೊಗ್ಗದ ಸಿ.ಇ.ಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Cyber Fraud in Shimoga Man Loses 2.5 Lakh

Cyber Fraud in Shimoga Man Loses 2.5 Lakh
Cyber Fraud in Shimoga Man Loses 2.5 Lakh

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor