ಸಚಿವನಾದರೆ ಶಿವಮೊಗ್ಗದ ಬದಲಾವಣೆಗೆ ಹೊಸ ಶಕ್ತಿ! ಆಯನೂರು ಮಂಜುನಾಥ್

ಹಂಚಿಕೊಳ್ಳಿ
WhatsApp Facebook X Telegram
Shimoga riots: Communal riots took place in Shivamogga city even before independence.

KARNATAKA NEWS/ ONLINE / Malenadu today/ May 4, 2023 GOOGLE NEWS

ಶಿವಮೊಗ್ಗ/ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರ್ ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡ್ತಾ ನಾನು ಪ್ರಸ್ತಾಪಿಸಿದ ಒಪಿಎಸ್, ಎನ್ಪಿಎಸ್, ಪೊಲೀಸ್, ಅತಿಥಿ ಉಪನ್ಯಾಸಕರ ವಿಷಯಕ್ಕೆ ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. 

ನಿನ್ನೆ ದಿನ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಬ್ರಾಹ್ಮಣ, ಮುಸ್ಲಿಂ ಹಾಗೂ ಇತರೆ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ ನ ಮುಖಂಡರು ಜೆಡಿಎಸ್ ಗೆ ಸೇರಿದ್ದಾರೆ. ನಿನ್ನೆಯ ಸಭೆ ಯಶಸ್ವಿಯಾಗಿದೆ. ನನ್ನ ಅರ್ಧ ಬೇಡಿಕೆ ಈಡೇರಿದೆ ಎಂದರು

ಶಿವಮೊಗ್ಗ ನಗರದಲ್ಲಿ ಸುಮಾರು 5 ಸಾವಿರ ನಿವೃತ್ತ ನೌಕರರಿಗೂ ಕುಮಾರಸ್ವಾಮಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ ಅವರು ಪೊಲೀಸ್ ಇಲಾಖೆಯಲ್ಲಿ ವೇತನ ತಾರತಮ್ಯವಿದ್ದು ಅದನ್ನು ನಿವಾರಿಸಬೇಕಿದೆ.

ಕಾರ್ಮಿಕರ ಕಲ್ಯಾಣಕ್ಕೂ ಸಾಕಷ್ಟು ಅವಕಾಶವಿದೆ.   ಶಿವಮೊಗ್ಗದ ಅವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸಬೇಕಿದೆ. ಈ ಎಲ್ಲಾ ಬೇಡಿಕೆಯ  ಬಗ್ಗೆ ಕುಮಾರಸ್ವಾಮಿ ಸಕಾರಾತ್ಮಕವಾಗಿ  ಸ್ಪಂದಿಸುತ್ತಿದ್ದಾರೆ.  ಹಾಗಾಗಿ ನನಗೆ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದರು

ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಆಯನೂರು ಮಂಜುನಾಥ್​ ಸಚಿವನಾದರೆ ಶಿವಮೊಗ್ಗದ ಬದಲಾವಣೆಗೆ ಶಕ್ತಿ ಸಿಗಲಿದೆ ಎಂದರು. 

 

ಇನ್ನೂ ಇದೇ ವೇಳೆ ಮಾಜಿ ಎಂಎಲ್​ಎ ಕೆಬಿ ಪ್ರಸನ್ನಕುಮಾರ್​ ಮಾತನಾಡಿ,  ನಿನ್ನೆ ಕುಮಾರಸ್ವಾಮಿ ಆಡಿದ ಮಾತು ಹಲವು ಸಮಾಜಕ್ಕೆ ಭರವಸೆ ತಂದುಕೊಡುವ ಮಾತನಾಡಿದ್ದಾರೆ. ಬ್ರಾಹ್ಮಣ ಸಮಾಜಕ್ಕೆ ಕುಮಾರಸ್ವಾಮಿ ಸಾಕಷ್ಟು ಕೊಡುಗೆ ನೀಡಿದ್ದಾರೆ.  ಮೊದಲ ಬಾರಿ ಕುಮಾರಸ್ವಾಮಿ ಸಿಎಂ ಬೆಂಗಳೂರಿನಲ್ಲಿ ಬ್ರಾಹ್ಮಣಕ್ಕೆ ದೊಡ್ಡ ನಿವೇಶನ ನೀಡಿದ್ದಾರೆ .ಎರಡನೇ ಬಾರಿ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿ ಅನುದಾನ ಒದಗಿಸಿದ್ದರು. ಆದರೆ ಬಿಜೆಪಿ ಸರ್ಕಾರ ನಿಗಮಕ್ಕೆ ಅನುದಾನ ನೀಡದೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ರು.  


ಶಿವಮೊಗ್ಗದಲ್ಲಿಯು ಕಿಚ್ಚ ಸುದೀಪ್​ ಪ್ರಚಾರ! ವಿಜಯೇಂದ್ರರ ಪರ ಕ್ಯಾಂಪೇನ್​ ! ಯಾವಾಗ! ಎಲ್ಲಿ? ವಿವರ ಇಲ್ಲಿದೆ 

ಶಿಕಾರಿಪುರ/ ಶಿವಮೊಗ್ಗ/ ನಟ ಕಿಚ್ಚ ಸುದೀಪ್  ಬಿಜೆಪಿಯ ನಾಯಕರ ಪರವಾಗಿ ಪ್ರಚಾರ ನಡೆಸ್ತಿರುವುದು ಗೊತ್ತೆ ಇದೆ. ಇದೀಗ ಶಿವಮೊಗ್ಗದಲ್ಲಿಯು ಅವರು ಪ್ರಚಾರ ನಡೆಸಲಿದ್ದಾರೆ. ಅದು ಕೂಡ ವಿಶೇಷವಾಗಿ ಶಿಕಾರಿಪುರದಲ್ಲಿ ಕಿಚ್ಚ ಸುದೀಪ್ ಪ್ರಚಾರ ನಡೆಸಲಿದ್ದಾರೆ. 

ಈಗಾಗಲೇ ಶಿಕಾರಿಪುರದಲ್ಲಿ ನಟಿ ಶೃತಿ, ತಾರಾ ಬಿ.ವೈ ವಿಜಯೇಂದ್ರರವರ ಪರವಾಗಿ ಪ್ರಚಾರ ನಡೆಸಿದ್ದಾರೆ. ಇದರ ಬೆನ್ನಲ್ಲೆ ಇದೀಗ ಕಿಚ್ಚ ಸುದೀಪ್​ ವಿಜಯೇಂದ್ರರವರ ಪರವಾಗಿ ಮತ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. 

8ಕ್ಕೆ ನಟ ಸುದೀಪ್ ಪ್ರಚಾರ

ಕಿಚ್ಚ ಸುದೀಪ್ ಅವರು ಚುನಾವಣಾ ಪ್ರಚಾರದ ಕೊನೆಯ ದಿನವಾದ ಮೇ 8 ರಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಪ್ರಚಾರ ಮಾಡಲಿದ್ಧಾರೆ. 

ಈ ಬಗ್ಗೆ ಮಾತನಾಡಿರುವ ವಿಜಯೇಂದ್ರರವರು  ಅಂದು ಬೆಳಗ್ಗೆ ಶಿಕಾರಿಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿರುವ ನಟ ಸುದೀಪ್​, ಮಧ್ಯಾಹ್ನದ ನಂತರ  ಶಿರಾಳಕೊಪ್ಪದಲ್ಲಿ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. 

Malenadutoday.com Social media

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor