ದೆಹಲಿಯಿಂದ ಮತ್ತೆ ದೊಡ್ಡವರ ಕರೆ ಇತ್ತ ಕಾರ್ಯಕರ್ತರಿಗೆ ಮೊಬೈಲ್‌ ಬೆದರಿಕೆ! ನಾಮಪತ್ರ ಸಲ್ಲಿಕೆಗೆ ಡೇಟ್‌ ಫಿಕ್ಸ್‌! ಗಂಡಸ್ತನಕ್ಕೆ ಈಶ್ವರಪ್ಪರಿಂದ ಶಕ್ತಿಪ್ರದರ್ಶನದ ಸವಾಲು

ಹಂಚಿಕೊಳ್ಳಿ
WhatsApp Facebook X Telegram

Shivamogga  Mar 26, 2024 ಶಿವಮೊಗ್ಗ ಲೋಕಸಭಾ ಚುನಾವಣೆ ಅಖಾಡ ರಂಗೇರುತ್ತಿದೆ. ಎಲ್ಲರಿಗಿಂತಲೂ ಮೊದಲಾಗಿ ನಾಮಪತ್ರ ಸಲ್ಲಿಕೆಯ ದಿನವನ್ನು ಬಂಡಾಯ ಅಭ್ಯರ್ಥಿ ಕೆಎಸ್‌ ಈಶ್ವರಪ್ಪ ಘೋಷಿಸಿದ್ದಾರೆ. ಅಲ್ಲದೆ ಈ ಸಲ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲುತ್ತೇನೆ ಎಂದಿದ್ದಾರೆ. ಈ ಸಂಬಂಧ ಅವರು ಹೇಳಿದ ಅಂಶಗಳನ್ನು ಗಮನಿಸುವುದಾದರೆ,

ಅನ್ಯಾಯಕ್ಕೆ ಉತ್ತರ

ಶಿವಮೊಗ್ಗದಲ್ಲಿ  ಬೂತ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭೆ ಕ್ಷೇತ್ರಕ್ಕೂ ಭೇಟಿ ನೀಡಿದ್ದೇನೆ. ಎಲ್ಲಾ ಕಡೆಗಳಲ್ಲಿಯು ಈಶ್ವರಪ್ಪ ಅವರಿಗೆ ಅನ್ಯಾಯ ಆಗಿದೆ. ಯಡಿಯೂರಪ್ಪ ಅನ್ಯಾಯ ಮಾಡಿದ್ದಾರೆ. ಅನ್ಯಾಯಕ್ಕೆ ಉತ್ತರ ಕೊಡ್ತೀವಿ ಅಂತಿದ್ದಾರೆ ಎಂದಿದ್ಧಾರೆ. 

ದೆಹಲಿಯಿಂದ ಫೋನ್‌ ಬಂದಿತ್ತು

ನಾನು ಚುನಾವಣೆಗೆ ಸ್ಪರ್ಧೆ ಮಾಡ್ತೀನಿ ಅಂದ ಮೇಲೆ ಪೋನ್ ಬರುತ್ತಿದೆ. ದೆಹಲಿಯಿಂದ ತಮ್ಮ ಮಗನಿಗೆ ಫೋನ್‌ ಬಂದಿದೆ ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ದಾರೆ. ಯಾರು ಏನೇ ಹೇಳಿದರೂ ಈ ಭಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದಿದ್ದಾರೆ. 

12 ನೇ ತಾರೀಖು ನಾಮಪತ್ರ ಸಲ್ಲಿಕೆ

ಕಾಂಗ್ರೆಸ್‌ ಪಕ್ಷ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದೆ. ಆದರೆ ನಾನು ಈ ಬಾರಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದಿರುವ ಈಶ್ವರಪ್ಪ ಇದೇ 12 ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ. 

 

ಸಚಿವ ಶಿವರಾಜ್ ತಂಗಡಗಿ ಅಯೋಗ್ಯ

ಸಚಿವ ಶಿವರಾಜ್ ತಂಗಡಗಿ ಅಯೋಗ್ಯ, ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕ, ಈಡಿ ದೇಶದ ಜನ ಮೋದಿ ಮೋದಿ ಅಂತಿದ್ದಾರೆ. ಶಿವರಾಜ್ ತಂಗಡಗಿ ರಾಜೀನಾಮೆ ಕೊಡಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ತಂಗಡಗಿಯನ್ನು ಕಿತ್ತು ಬಿಸಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಶಿಕಾರಿಪುರದಲ್ಲಿಯೇ ಹೆಚ್ಚು ಲೀಡ್‌ 

ಇಡೀ ಲೋಕಸಭಾ ಕ್ಷೇತ್ರದಲ್ಲಿ ರಾಘವೇಂದ್ರ ವಿರುದ್ಧ ಆಕ್ರೋಶ ವ್ಯಕ್ತ ಆಗಿದೆ. ಸಾಮಾನ್ಯ ಜನ ತಿರ್ಮಾನ ಮಾಡಿದ್ದಾರೆ ನನ್ನನ್ನು ಗೆಲ್ಲಿಸುತ್ತೇನೆ ಎಂದು. ನಾನು ಗೆದ್ದು ನಿಮ್ಮ ಋಣ ತೀರಿಸುತ್ತೇನೆ. ಶಿಕಾರಿಪುರದ ಜನರೇ ನನಗೆ ಹೇಳಿದ್ದು ಹೆಚ್ಚಿನ ಬಹುಮತವನ್ನು ಆ ಕ್ಷೇತ್ರದಿಂದ ನೀಡುವುದಾಗಿ ಹೇಳಿದ್ದಾರೆ. 

ಚುನಾವಣೆಯಲ್ಲಿ ಗೆದ್ದು ಗಂಡಸ್ತನ ತೋರಿಸಬೇಕು 

ವಿಧಾನಸಭಾ ಚುನಾವಣೆಯಲ್ಲಿ ವರುಣ,ಶಿಕಾರಿಪುರ ಹೊಂದಾಣಿಕೆ ಆಯ್ತು. ಈಗ ಕಾಂಗ್ರೆಸ್ ನಲ್ಲಿ ಶಕ್ತಿ ಇಲ್ಲದ ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಬಂದಿದ್ದಾರೆ. ಗಂಡಸುತನ ಇರೋ ವ್ಯಕ್ತಿ ಜೊತೆ ಮಧು ಬಂಗಾರಪ್ಪ ಹೊಂದಾಣಿಕೆ ಮಾಡಿಕೊಂಡರೆ ನಾನು ಎಲ್ಲಿಂದ ಟಿಕೆಟ್ ತರಲಿ? ಚುನಾವಣೆಯಲ್ಲಿ ಗೆದ್ದು ಗಂಡಸ್ತನ ತೋರಿಸಿಬೇಕು 

25 ಸಾವಿರ ಮಂದಿ ಮತ್ತು ಶಕ್ತಿ ಪ್ರದರ್ಶನ

ಕನಿಷ್ಠ 25 ಸಾವಿರ ಜನರ ಬೆಂಬಲದೊಂದಿಗೆ 12 ನೇ ತಾರೀಖು ನಾಮಪತ್ರ ಸಲ್ಲಿಸುತ್ತೇನೆ, ಬ್ರಹ್ಮ ಬಂದ್ರೂ ಚುನಾವಣೆಯಲ್ಲಿ ನಾನು ನಿಲ್ಲುವವನೇ. ಹಿಂದುತ್ವದ ಜಯಕ್ಕಾಗಿ 12ನೇ ತಾರೀಖು ದೊಡ್ಡ ಸಂಖ್ಯೆಯಲ್ಲಿ ಜನ ಬರಬೇಕು. ನನ್ನ ಜೊತೆ ಬರುವರು ಸ್ವಾಭಿಮಾನಿಗಳು. ಅವರ ಜೊತೆ ಹೋಗುವವರು ಕೂಲಿ ಕಾರ್ಮಿಕರು. 12 ನೇ ತಾರೀಖು ಶಕ್ತಿ ಪ್ರದರ್ಶನ ಮಾಡೋಣ ಎಂದಿದ್ದಾರೆ. 

ನಿಮಗೆ ಫೋನ್‌ ಬರಬಹುದು

ರಾಜ್ಯದಲ್ಲಿ ಬಿಜೆಪಿ ಪಕ್ಷ ಹಾಳಾಗುತ್ತಿದೆ .ಪಕ್ಷ ಕಟ್ಟಿದವರಿಗೆ ನೋವಾಗಿದೆ ಅದನ್ನು ಸರಿ ಮಾಡಲು ಸ್ಪರ್ಧೆ ಮಾಡುತ್ತಿದ್ದೇನೆ. 

ನೀವು ಮನೆಗೆ ಹೋದಾಗ ನಿಮಗೆ ಪೋನ್ ಬರಬಹುದು. ಬೇರೇ ಬೇರೆ ರೂಪದ ಭಯಗಳು ನಿಮಗೆ ಬರಬಹುದು .ಹೆದರುಕೊಂಡು ಕೆಲವರು ಮನೆಯಲ್ಲಿ ಇದ್ದಾರೆ. 

ಕಾಂಗ್ರೆಸ್‌ನವರೇ ಗೆಲ್ಲಿಸ್ತೀನಿ ಅಂತಿದ್ದಾರೆ 

ಇನ್ನೂ ಕೆಲವರು ನಮ್ಮ ಪ್ರಾಣ ಹೋದರು ನಿಮ್ಮನ್ನ ಗೆಲ್ಲಿಸುತ್ತೇವೆ ಅನ್ನುತ್ತಿದ್ದಾರೆ. ಕಾಂಗ್ರೆಸ್ ನವರು ನಮ್ಮ ಮನೆ ದೇವರಾಣೆಗೂ ಗೆಲ್ಲಿಸುತ್ತೇವೆ ಅನ್ನುತ್ತಿದ್ದಾರೆ ಎಂದು ಈಶ್ವರಪ್ಪ ಗುಡುಗಿದ್ದಾರೆ 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor