ಬುದ್ಧನಗರ, ಮಂಜುನಾಥ ನಗರ, ಅಣ್ಣನಗರ, ಅಶೋಕನಗರದಲ್ಲಿ ದೊಡ್ಡಪೇಟೆ ಪೊಲೀಸ್‌ !

ಹಂಚಿಕೊಳ್ಳಿ
WhatsApp Facebook X Telegram

shivamogga  Mar 26, 2024   ಲೋಕಸಭಾ ಚುನಾವಣೆ 2024 ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್‌ ಇಲಾಖೆ ಕಟ್ಟು ನಿಟ್ಟಿನ ಕ್ರಮಗಳ ಜೊತೆಗೆ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ನಗರದಲ್ಲಿ ಈಗಾಗಲೇ ಹಲವು ಸಲ ರೂಟ್‌ ಮಾರ್ಚ್‌ ನಡೆಸಲಾಗಿದ್ದು ಇದೀಗ ಮತ್ತೊಮ್ಮೆ ಪಠ ಸಂಚಲನ ನಡೆಸಿದೆ 

ಮುಂಬರುವ ಲೋಕಸಭಾ ಚುನಾವಣೆ – 2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರವಿ ಪಾಟೀಲ್ ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಜ್ಯೋತಿ,ಪೊಲೀಸ್ ನಿರೀಕ್ಷಕರು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಮಹಿಳಾ ತುಕಡಿ), ರವರ ನೇತೃತ್ವದಲ್ಲಿ ಕೇಂದ್ರೀಯ ಮೀಸಲು ಪಡೆ ಮತ್ತು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ದಿನಾಂಕಃ 25-03-2024 ರಂದು ಸಂಜೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥ ಸಂಚಲನವನ್ನು ( ರೂಟ್ ಮಾರ್ಚ್) ಹಮ್ಮಿಕೊಳ್ಳಲಾಗಿತ್ತು. 

ಈ  ಪಥಸಂಚಲನವನ್ನು ಶಿವಮೊಗ್ಗ ಬಸ್ ನಿಲ್ದಾಣದಿಂದ ಪ್ರಾರಂಭಿಸಿ, ಬುದ್ಧನಗರ, ಮಂಜುನಾಥ ನಗರ, ಅಣ್ಣನಗರ, ಅಶೋಕನಗರ, ಬಿಹೆಚ್ ರಸ್ತೆಯಿಂದ  ದೊಡ್ಡಪೇಟೆ ಪೊಲೀಸ್ ಠಾಣೆ ಹತ್ತಿರ ಬಂದು ಮುಕ್ತಾಯ ಮಾಡಲಾಗಿದೆ. ಈ ಶಿವಮೊಗ್ಗ ಪೊಲೀಸ್‌ ಇಲಾಖೆ ಪ್ರಕಟಣೆ ನೀಡಿದೆ. 

Doddapet police , Buddhanagar, Manjunathnagar, Anna Nagar, Ashoknagar

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor