ಸುದ್ದಿಯ ಸ್ಥಳ: Shivamogga district, Karnataka
Shivamogga Mar 20, 2024 ಎಲ್ಲಾ ಬ್ಯಾಂಕ್ಗಳು ಇದೇ ಮಾರ್ಚ್ 31 ರ ಭಾನುವಾರವೂ ಓಪನ್ ಇರಲಿದೆ. ಈ ಸಂಬಂಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆಯೊಂದನ್ನ ಹೊರಡಿಸಿದೆ.
ಇದಕ್ಕೆ ಕಾರಣ, ಈ ವರ್ಷದ ಆರ್ಥಿಕ ವಹಿವಾಟುಗಳು ಮಾರ್ಚ್ 31 ಕ್ಕೆ ಮುಕ್ತಾಯಗೊಳ್ಳಲಿದೆ. ಕೊನೆಯ ದಿನದ ವಹಿವಾಟಿನಲ್ಲಿ ಬಹಳಷ್ಟು ದುಡ್ಡು ಸರ್ಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆಗಳಿರುತ್ತದೆ. ಆದರೆ ಭಾನುವಾರ ಆದ್ದರಿಂದ ಬ್ಯಾಂಕ್ಗಳು ಸಹಜವಾಗಿಯೇ ಕ್ಲೋಸ್ ಇರುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗುವುದನ್ನ ತಪ್ಪಿಸುವ ಸಲುವಾಗಿ ಆರ್ಬಿಐ ಈ ಸೂಚನೆಯನ್ನ ಹೊರಡಿಸಿದೆ.
ಆರ್ಬಿಐ ಸೂಚನೆಯಲ್ಲಿ ಏನಿದೆ.
ಎಲ್ಲಾ ಏಜೆನ್ಸಿ ಬ್ಯಾಂಕ್ಗಳು ಮಾರ್ಚ್ 31, 2024 ರಂದು (ಭಾನುವಾರ) ಸಾರ್ವಜನಿಕರಿಗೆ ತೆರೆದಿರುತ್ತವೆ
FY 2023 ಆರ್ಥಿಕ ವರ್ಶದ ರಶೀದಿಗಳು ಮತ್ತು ಪಾವತಿಗಳಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ವಹಿವಾಟುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೂ ಮಾರ್ಚ್ 31, 2024 (ಭಾನುವಾರ) ರಂದು ಬ್ಯಾಂಕ್ಗಳು ಮುಕ್ತವಾಗಿ ಗ್ರಾಹಕರಿಗೆ ತೆರೆದಿರುವಂತೆ ಮನವಿ ಮಾಡಿದ್ದು, ಈ ಸಂಬಂಧ ಎಲ್ಲಾ ಬ್ಯಾಂಕ್ಗಳು ತಮ್ಮ ಬ್ರಾಂಚ್ಗಳನ್ನು ಮಾರ್ಚ್ 31, 2024 ರಂದು (ಭಾನುವಾರ) ತೆರೆದಿಡಲು ಸೂಚಿಸಲಾಗಿದೆ. 2. ಈ ದಿನದಂದು ಮೇಲಿನ ಬ್ಯಾಂಕಿಂಗ್ ಸೇವೆಗಳ ಲಭ್ಯತೆಯ ಬಗ್ಗೆ ಬ್ಯಾಂಕುಗಳು ಸರಿಯಾದ ಪ್ರಚಾರವನ್ನು ನೀಡಬೇಕು ಎಂದು ಸೂಚಿಸಲಾಗಿದೆ.