ಇವತ್ತು ಶಿವಮೊಗ್ಗಕ್ಕೆ ಗೀತಾ ಶಿವರಾಜ್‌ ಕುಮಾರ್!‌? ಅಭ್ಯರ್ಥಿ ಸ್ವಾಗತಕ್ಕೆ ಕಾಂಗ್ರೆಸ್‌ ತಯಾರಿ ಹೇಗಿದೆ ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram

Shivamogga Mar 20, 2024 Geetha Shivarajkumar   ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರಾಜಕಾರಣ ರಂಗೇರುತ್ತಿದೆ. ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಕ್ಷೇತ್ರಕ್ಕೆ ಆಗಮಿಸುವುದಕ್ಕೂ ಮೊದಲೇ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಬಂದು ಬಿವೈ ರಾಘವೇಂದ್ರರವರ ಪರವಾಗಿ ಮತ ಕೇಳಿ ವಾಪಸ್‌ ಆಗಿದ್ದಾರೆ. ಹೀಗೋಂದು ಟೀಕೆಯನ್ನ ಕೇಳಿದ ಬೆನ್ನಲ್ಲೆ ಇದೀಗ ಗೀತಾ ಶಿವರಾಜ್‌ ಕುಮಾರ್‌ ಶಿವಮೊಗ್ಗಕ್ಕೆ ಇವತ್ತು ಪ್ರವೇಶ ಮಾಡುತ್ತಿದ್ದು, ಅವರ ಸ್ವಾಗತಕ್ಕೆ ಅದ್ದೂರಿ ಸಿದ್ಧತೆ ಮಾಡಿಕೊಂಡಿದೆ. 

ಗೀತಾ ಶಿವರಾಜ್‌ಕುಮಾರ್ ಇವತ್ತು ಬೆಳಿಗ್ಗೆ 10.30ಕ್ಕೆ ಭದ್ರಾವತಿಯ ಬಾರಂದೂರಿನ ಮೂಲಕ ಕ್ಷೇತ್ರ ಪ್ರವೇಶ ಮಾಡಲಿದ್ದಾರೆ. ಅಲ್ಲಿಂದಲೇ ಅವರ ಸ್ವಾಗತಕ್ಕೆ ಜಿಲ್ಲಾ ಕಾಂಗ್ರೆಸ್‌ ಸಿದ್ಧತೆ ಮಾಡಿಕೊಂಡಿದೆ. ಶಾಸಕ ಬಿ.ಕೆ. ಸಂಗಮೇಶ್ವರ್‌ ನೇತೃತ್ವದಲ್ಲಿ ಗೀತಾರನ್ನು ಸ್ವಾಗತಿಸಿ ಕಾರೇಹಳ್ಳಿ- ಕೆಂಪೇಗೌಡ ನಗರ- ಬಾರಂದೂರು- ಮಸರಹಳ್ಳಿ- ಮಾರುತಿ ನಗರ- ಶಿವನಿ ಕ್ರಾಸ್- ಸಾದತ್ ಕಾಲೋನಿ- ಗಾಂಧಿ ವೃತ್ತ, ಒ.ಎಸ್.ಎಂ. ರಸ್ತೆ (ಶಾಸಕರ ಮನೆ ಮುಂಭಾಗ), ರಂಗಪ್ಪ ವೃತ್ತ -ಸಿ.ಎನ್ ರೋಡ್- ಮಾಧವಚಾರ್‌ವೃತ್ತ ಬಿ.ಎಚ್. ರಸ್ತೆ ಮಾರ್ಗವಾಗಿ ಅಂಡರ್‌ಬ್ರಿಡ್ಜ್ ಉಂಬ್ಳೆ ಬೈಲು ರಸ್ತೆ ಮಾರ್ಗವಾಗಿ ಜಯಶ್ರೀ ವೃತ್ತ – ಜನ್ನಾಪುರ- ಸಿದ್ದಾಪುರ-ಬೈಪಾಸ್‌ ರಸ್ತೆವರೆಗೆ ಬೈಕ್‌ ರ್ಯಾಲಿ ನಡೆಸಲಿದ್ದಾರೆ. 

ಅಲ್ಲಿಂದ ಶಿವಮೊಗ್ಗಕ್ಕೆ ಗೀತಾ ಶಿವರಾಜ್‌ ಕುಮಾರ್‌ ಆಗಮಿಸಲಿದ್ದಾರೆ.  ಶಿವಮೊಗ್ಗದ ಎಂಆರ್‌ಎಸ್ ಸರ್ಕಲ್‌  ಅವರನ್ನು ಬೃಹತ್ ರ್ಯಾಲಿಯೊಂದಿಗೆ ಲಗಾನ್ ಕಲ್ಯಾಣ ಮಂದಿರಕ್ಕೆ ಕರೆತರಲಾಗುತ್ತೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸುಂದರೇಶ್‌ ತಿಳಿಸಿದ್ದಾರೆ. 

ಇನ್ನೂ ರ್ಯಾಲಿ ಬಳಿಕ  ಶಿವಮೊಗ್ಗ ನಗರದ  ಲಗಾನ್ ಕಲ್ಯಾಣ ಮಂದಿರದಲ್ಲಿ ಬೆಳಿಗ್ಗೆ 11.30ಕ್ಕೆ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಚಿವ ಮಧುಬಂಗಾರಪ್ಪ, ಶಾಸಕರಾದ ಸಂಗಮೇಶ್‌, ಗೋಪಾಲಕೃಷ್ಣ ಬೇಳೂರು ಸೇರಿದಂತೆ ಜಿಲ್ಲೆಯ ಎಲ್ಲಾ ಮುಖಂಡರು ಜಿಲ್ಲಾ ಮಟ್ಟದ ಕಾರ್ಯಕರ್ತರು, ವಿವಿಧ ಘಟಕಗಳ ಮುಖ್ಯಸ್ಥರು,ಕಾಂಗ್ರೆಸ್ ಪಕ್ಷದಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor