shivamogga Mar 13, 2024 rameshwaram cafe blast accused ಬೆಂಗಳೂರು ರಾಮೇಶ್ವರಂ ಕಫೆ ಯಲ್ಲಿ ನಡೆದ ಬಾಂಬ್ ಸ್ಫೋಟ ಸಂಬಂಧ ಎನ್ಐಎ ತನ್ನ ತನಿಖೆಯನ್ನ ತೀವ್ರಗೊಳಿಸಿದೆ. ಈ ಮಧ್ಯೆ ಆರೋಪಿಯ ಸುಳಿವು ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಸಂಬಂಧ ರಾಜ್ಯದ ಮಾಧ್ಯಮಗಳು ತನಿಖಾ ವರದಿಗಳನ್ನ ಬಿತ್ತರಿಸುತ್ತಿದೆ. ಅದರ ನಡುವೆ ಆರೋಪಿ ಮಲೆನಾಡಿನವನು , ತೀರ್ಥಹಳ್ಳಿಯವನು, ಶಿವಮೊಗ್ಗ ಐಸಿಸ್ ಮಾಡ್ಯುಲ್ನ ತಂಡದವನು ಎಂಬೆಲ್ಲಾ ಸುದ್ದಿಗಳನ್ನ ಬಣ್ಣಕಟ್ಟಿ ಹರಿಬಿಡಲಾಗುತ್ತಿದೆ.
ಆದರೆ ಈ ಬಗ್ಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ಇಂತಹ ವರದಿಗಳ ಬಗ್ಗೆ ನಾನು ಸಹ ಆಲಿಸಿದ್ದೇನೆ. ಆದರೆ ಆತನ ಬಂಧನವಾದ ಮೇಲೆಷ್ಟೆ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ ಎಂದಿದ್ದಾರೆ. ಸ್ಪೆಕಿಲೇಷನ್ ಮಾಡುತ್ತಿದ್ದಾರೆ. ಆತ ಕರ್ನಾಟಕದವನು, ಅಲ್ಲಿಯವನು, ಇಲ್ಲಿಯವನು ಎಂದು ಜೀರೋಡೌನ್ ಮಾಡೋದಕ್ಕೆ ಮಾಡುತ್ತಿದ್ದಾರೆ. ಈ ಬಗ್ಗೆ ಮೀಡಿಯಾದಲ್ಲಿ ಗಮನಿಸಿದ್ದೇನೆ. ಆದರೆ ಈ ಬಗ್ಗೆ ಗ್ಯಾರಂಟಿಯಾಗಬೇಕಿದೆ. ಆತನನ್ನು ಹಿಡಿದ ಮೇಲೆಯೇ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ ಎಂದಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದು ಪ್ರಕರಣ ಶಿವಮೊಗ್ಗ ಐಸಿಸಿ ಮಾಡ್ಯಲ್ನ ಭಾಗವಾಗಿದ್ದು, ಆ ಸಂಬಂಧ ಪ್ರಕರಣದ ಆರೋಪಿಯು ಧರಿಸಿದ್ದ ಕ್ಯಾಪ್ನಲ್ಲಿ ಸಿಕ್ಕ ಕೂದಲಿನ ಮೂಲಕ ಡಿಎನ್ಎ ಟೆಸ್ಟ್ ಗೆ ಒಳಪಡಿಸಿದೆ. ಅದರ ಡಿಎನ್ಎ ಹಾಗೂ ಸಸ್ಪೆಕ್ಟ್ ಆರೋಪಿಯ ಕುಟುಂಬದ ಡಿಎನ್ಎ ಮೂಲಕ ಆರೋಪಿಯನ್ನು ಪತ್ತೆ ಮಾಡುವ ತನಿಖೆಯು ನಡೆಯುತ್ತಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಆದಾಗ್ಯು ರಾಜ್ಯದ ಗೃಹಮಂತ್ರಿ ಆರೋಪಿ ಅರೆಸ್ಟ್ ಆದ ಬಳಿಕ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ ಎಂದಿದ್ದಾರೆ.