shivamogga Mar 13, 2024 Shimoga Lokayukta ಶಿವಮೊಗ್ಗ ಲೋಕಾಯುಕ್ತ ಪೊಲೀಸರು ತಮ್ಮ ಬೇಟೆಯನ್ನು ಮುಂದುವರಿದಿಸಿದ್ಧಾರೆ. ಇದಕ್ಕೆ ಪೂರಕವಾಗಿ ವಾಹನದ ಇನ್ಸುರೆನ್ಸ್ ಪ್ರೈಮ್ ಮಾಡಲು ಬೇಕಾದ ಅಗ್ನಿಶಾಮಕ ದಳದ ವರದಿಗೆ ಲಂಚದ ಬೇಡಿಕೆ ಇಟ್ಟ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
2023 ಸೆಪ್ಟೆಂಬರ್‌ನಲ್ಲಿ ಮಂಡಗದ್ದೆಯ 15ನೇ ಮೈಲಿಗಲ್ಲಿನ ಬಳಿ ಕೆಎ 32 ಡಿ 8547 ಕ್ರಮ ಸಂಖ್ಯೆಯ ಫೋರ್ಡ್ ಕಂಪನಿ ಕಾರು ಬೆಂಕಿಗೆ ಆಹುತಿಯಾಗಿತ್ತು. ಕಾರು ಗೋಪಿಶೆಟ್ಟಿ ಕೊಪ್ಪದ ನಿವಾಸಿ ಇರ್ಫಾನ್ ಎಂಬುವರಿಗೆ ಸೇರಿತ್ತು. ಕಾರನ್ನು ಇರ್ಫಾನ್ ಸ್ನೇಹಿತ ಗುರುಮೂರ್ತಿ ಎಂಬುವರಿಗೆ ಕೆಲಸದ ನಿಮಿತ್ತ ನೀಡಿದ್ದರು. ಗುರುಮೂರ್ತಿ ಮಂಡಗದ್ದೆಯಿಂದ ಶಿವಮೊಗ್ಗಕ್ಕೆ ವಾಪಾಸಾಗುತ್ತಿದ್ದ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಮಹಾಲಿಂಗಪ್ಪ ಕರಕಲಾಗಿತ್ತು.

ಈ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇನ್ಸುರೆನ್ಸ್ ಕ್ರೈಮ್ ಮಾಡಿಕೊಳ್ಳಲು ಇರ್ಫಾನ್ ಮುಂದಾದಾಗ ಅಗ್ನಿಶಾಮಕ ದಳದ ವರದಿ ಯುನೈಟೆಡ್ ಇನ್ಸುರೆನ್ಸ್ ಸಂಸ್ಥೆ ಕೇಳಿತ್ತು. ಅದಕ್ಕಾಗಿ ಇರ್ಫಾನ್ ಶಿವಮೊಗ್ಗ ಅಗ್ನಿ ಶಾಮಕದಳಕ್ಕೆ ಬಂದು ವರದಿ ಕೇಳಿದಾಗ ಇಲ್ಲಿನ ಅಧಿಕಾರಿ ಮಹಾಲಿಂಗಪ್ಪ 5000 ರು. ಹಣದ ಬೇಡಿಕೆ ಇಟ್ಟಿದ್ದಾರೆ.
ಬೇಸತ್ತ ಇರ್ಫಾನ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮಂಗಳವಾರ ಇರ್ಫಾನ್ 5 ಸಾವಿರ ರು. ಹಣ ಲಂಚ ನೀಡುವಾಗ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್‌ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಿ ಅಗ್ನಿಶಾಮಕದಳ ಮಹಾಲಿಂಗಪ್ಪರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಪ್ರಕಟಣೆ
ಪಿರಾದುದಾರರಾದ ಶ್ರೀ ಇರ್ಷಾದ್ ಬಿನ್. ಅನ್ವರ್, ವೆಲ್ಡಿಂಗ್ ಕೆಲಸ, ಸಿದ್ದೇಶ್ವರ ಸರ್ಕಲ್ ಹತ್ತಿರ, ಅಂತರ ಘಟ್ಟಮ್ಮ ದೇವಸ್ಥಾನದ ಹಿಂಭಾಗ, ಗೋಪಿಶೆಟ್ಟಿ ಕೊಪ್ಪ, ಶಿವಮೊಗ್ಗ ಇವರು ಕೆಎ-32 ಡಿ-8547 ನಂಬರಿನ ಫೋರ್ಡ್ ಕಂಪನಿಯ ಕಾರ್ ಹೊಂದಿದ್ದು, ಸದರಿ ಕಾರ್‌ನಲ್ಲಿ ಅವರ ಸ್ನೇಹಿತ ಗುರುಮೂರ್ತಿ ಇವರು ದಿ:25-09-2023ರಂದು ಮಂಡಗದ್ದೆಯಿಂದ ವಾಪಸ್ಸು ಶಿವಮೊಗ್ಗಕ್ಕೆ ಬರುತಿದ್ದ ಸಮಯದಲ್ಲಿ ತಿರ್ಥಹಳ್ಳಿ ರಸ್ತೆಯ 15ನೇ ಮೈಲಿಗಲ್ಲು ಹತ್ತಿರ ರಾತ್ರಿ ಸುಮಾರು 11.30 ಗಂಟೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸದರಿ ಕಾರ್‌ಗೆ ಬೆಂಕಿ ಹತ್ತಿದ್ದು, ಶಿವಮೊಗ್ಗದ ಅಗ್ನಿ ಶಾಮಕ ಠಾಣೆಯಿಂದ ಬಂದು ಬೆಂಕಿಯನ್ನು ನಂದಿಸಿರುತ್ತಾರೆ. ಈ ಕುರಿತು ಫಿರ್ಯಾದುದಾರರ ಸ್ನೇಹಿತ ಗುರುಮೂರ್ತಿ ಇವರು ದಿ: 26-09-2023ರಂದು ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಾಗಿರುತ್ತದೆ. ಫಿರ್ಯಾದಿಯು ತನ್ನ ಕಾರ್‌ಗೆ ಯುನೈಟೆಡ್ ಇನ್ಸೂರೆನ್ಸ್ ಕಂಪನಿಯಲ್ಲಿ ಇನ್ಸೂರೆನ್ಸ್ ಮಾಡಿಸಿದ್ದು, ಕಾರ್‌ಗೆ ಶಾರ್ಟ್ ಸರ್ಕ್ಯೂಟ್ಯಿಂದ ಬೆಂಕಿ ಹತ್ತಿದ್ದರಿಂದ ಇನ್ಸೂರೆನ್ಸ್ ಕ್ಲೀಮು ಮಾಡಲು ಸದರಿ ಇನ್ಸೂರೆನ್ಸ್ ಕಂಪನಿಗೆ ಹೋಗಿ ವಿಚಾರಿಸಿದಾಗ ಅವರು ಆ ಬಗ್ಗೆ ಫೈರ್ ರಿಪೋರ್ಟ್ ಬೇಕು ಎಂದು ಸೂಚಿಸಿರುತ್ತಾರೆ. ಅದರಂತೆ ter : 11-03-20240 완주 김 2.30 in B f i en ಅಲ್ಲಿನ ಕಛೇರಿಯಲ್ಲಿದ್ದ ಮಂಜು ಎನ್ನುವವರನ್ನು ವಿಚಾರಿಸಲಾಗಿ, ಅವರು ತಿಳಿಸಿದಂತೆ ರೂ. 4,000/-ಗಳ ಚಲನ್‌ನ್ನು ಎಸ್.ಬಿ.ಐ. ಬ್ಯಾಂಕ್‌ನಲ್ಲಿ ಕಟ್ಟಿ, ಬಾಂಡ್ ಪೇಪರ್‌ನಲ್ಲಿ ತನ್ನ ಕಾರು ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಹೋಗಿರುತ್ತದೆಂದು ಪ್ರಮಾಣ ಪತ್ರ ಮಾಡಿಸಿಕೊಂಡು ಮರಳಿ ಮಧ್ಯಾಹ್ನ 3.30 ಗಂಟೆಗೆ ತನ್ನ ತಂದೆಯವರೊಂದಿಗೆ ಶಿವಮೊಗ್ಗದ ಜಿಲ್ಲಾ ಅಗ್ನಿ ಶಾಮಕ ಠಾಣೆಗೆ ಹೋಗಿ ಅಲ್ಲಿನ ಅಗ್ನಿ ಶಾಮಕ ಅಧಿಕಾರಿ ಶ್ರೀ ಜಿ. ಮಹಾಲಿಂಗಪ್ಪ ಬಿನ್. ಲೇಟ್ ಗುಡ್ಡಪ್ಪ ಇವರನ್ನು ವಿಚಾರಿಸಿದಾಗ ಅವರು ಫೈರ್ ರಿಪೋರ್ಟ್ ನೀಡಲು ಫಿರ್ಯಾದಿಗೆ ರೂ. 5,000/- ಗಳ ಲಂಚದ ಹಣಕ್ಕೆ ಬೇಡಿಕೆಯಿಟ್ಟಿರುತ್ತಾರೆ. ಆಕಸ್ಮಿಕ ಬೆಂಕಿ ದುರಂತದಲ್ಲಿ ಸುಟ್ಟು ಹೋದ ತನ್ನ ಕಾರಿಗೆ ಇನ್ಸೂರೆನ್ಸ್ ಕ್ಷೇಮು ಮಾಡುವ ಸಂಬಂಧ ಅಗತ್ಯವಿರುವ ಫೈರ್ ರಿಪೋರ್ಟ್‌ನ್ನು ಪಡೆಯಲು ರೂ. 5,000/-ಗಳ ಲಂಚದ ಹಣವನ್ನು ಶ್ರೀ ಜಿ. ಮಹಾಲಿಂಗಪ್ಪ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ, ಜಿಲ್ಲಾ ಅಗ್ನಿ ಶಾಮಕ ಠಾಣೆ, ಶಿವಮೊಗ್ಗ ಇವರಿಗೆ ಕೊಡಲು ಇಷ್ಟವಿರದ ಫಿರ್ಯಾದಿ ಶ್ರೀ ಇರ್ಷಾದ್ ಇವರು ಶಿವಮೊಗ್ಗ ಲೋಕಾಯುಕ್ತ ಕಛೇರಿಗೆ ದೂರು ಕೊಟ್ಟ ಮೇರೆಗೆ ಶ್ರೀ ಉಮೇಶ ಈಶ್ವರ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಕ.ಲೋ., ಶಿವಮೊಗ್ಗ ಇವರು ಇಂದು ದಿ: 12-03-2024ರಂದು ಗುನ್ನೆ ನಂ 04/2024, ಕಲಂ 7(ಎ), ಪಿ.ಸಿ. ಆ್ಯಕ್ಟ್ 1988 (ತಿದ್ದುಪಡಿ ಕಾಯ್ದೆ 2018)ರ ಪ್ರಕಾರ ಪ್ರಕರಣ ದಾಖಲಿಸಿರುತ್ತಾರೆ.
ಅದರಂತೆ ಇಂದು ದಿ:12-03-2024ರಂದು ಶ್ರೀ ಜಿ. ಮಹಾಲಿಂಗಪ್ಪ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ, ಜಿಲ್ಲಾ ಅಗ್ನಿ ಶಾಮಕ ಠಾಣೆ, ಶಿವಮೊಗ್ಗ ಇವರು ಲಂಚದ ಹಣ ರೂ. 5,000/- ಫಿರ್ಯಾದಿಯಿಂದ ಪಡೆಯುವಾಗ ನಮ್ಮ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಅವರಿಂದ ರೂ.5,000/-ಗಳ ಲಂಚದ ಹಣವನ್ನು ಜಪ್ತಿಪಡಿಸಿಕೊಂಡು ಅವರನ್ನು ಬಂಧಿಸಿದ್ದು, ಮುಂದಿನ ತನಿಖೆಯನ್ನು ಶ್ರೀ ಪ್ರಕಾಶ್, ಪೊಲೀಸ್ ನಿರೀಕ್ಷಕರು-2, ಕ.ಲೋ., ಶಿವಮೊಗ್ಗ ಇವರು ಕೈಗೊಂಡಿದ್ದು ಇರುತ್ತದೆ. ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ವಾಸುದೇವರಾಮ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಶ್ರೀ ಉಮೇಶ ಈಶ್ವರ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಕ.ಲೋ., ಶಿವಮೊಗ್ಗ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ನಿರೀಕ್ಷಕರಾದ ಶ್ರೀ ಹೆಚ್.ಎಸ್. ಸುರೇಶ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಶ್ರೀ ಮಹಂತೇಶ, ಸಿ.ಹೆಚ್.ಸಿ., ಶ್ರೀ ಸುರೇಂದ್ರ, ಸಿ.ಹೆಚ್.ಸಿ., ಶ್ರೀ ಯೋಗೀಶ್, ಸಿ.ಹೆಚ್.ಸಿ., ಶ್ರೀ ಬಿ.ಟಿ. ಚನ್ನೇಶ, ಸಿಪಿಸಿ, ಶ್ರೀ ಪ್ರಶಾಂತ್‌ಕುಮಾರ್, ಸಿಪಿಸಿ, ಶ್ರೀ ಅರುಣ್‌ಕುಮಾರ್, ಸಿಪಿಸಿ, ಶ್ರೀ ದೇವರಾಜ, ಸಿ.ಪಿ.ಸಿ., ಶ್ರೀ ರಘುನಾಯ್ಕ, ಸಿ.ಪಿ.ಸಿ., ಶ್ರೀಮತಿ ಪುಟ್ಟಮ್ಮ, ಮಪಿಸಿ, ಶ್ರೀ ಕೆ.ಸಿ. ಜಯಂತ, ಎಪಿಸಿ, ಮತ್ತು ಶ್ರೀ ಪ್ರದೀಪ್ ಕುಮಾರ್, ಎಪಿಸಿ, ಇವರುಗಳು ಹಾಜರಿದ್ದು, ಕರ್ತವ್ಯ ನಿರ್ವಹಿಸುತ್ತಾರೆ.