ಯೂಟ್ಯೂಬ್​ನಲ್ಲಿ ಮಂಗ ಓಡಿಸುವ ತಂತ್ರಗಾರಿಕೆ ಕಲಿತು ನಳಿಕೆಗೆ ಗರ್ನಲ್​ ಇಟ್ಟಾಗ ಆಯ್ತು ಯಡವಟ್ಟು! ಯುವಕ ಆಸ್ಪತ್ರೆಗೆ ದಾಖಲು!

ಹಂಚಿಕೊಳ್ಳಿ
WhatsApp Facebook X Telegram

Shivamogga Mar 11, 2024 monkeys  ಯೂಟ್ಯೂಬ್​ನಲ್ಲಿ ಮಂಗನನ್ನ ಓಡಿಸುವ ತಂತ್ರಗಾರಿಕೆಯನ್ನ ನೋಡಿ, ತಾನು ಸಹ ಮಾಡಲು ಹೋದ ಯುವಕನೊಬ್ಬ ಗರ್ನಲ್ ಸಿಡಿದು ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಸಂಭವಿಸಿದೆ,. 

ಘಟನೆಯ ವಿವರ ನೋಡುವುದಾದರೆ ಕೋಣಂದೂರು ಸಮೀಪದ ಯುವಕನೊಬ್ಬ ಯೂಟ್ಯೂಬ್​ನಲ್ಲಿ ಊದ್ದದ ನಳಿಕೆ ಬಳಸಿ ಅದರ ಮೂಲಕ ಪಟಾಕಿ ಸಿಡಿಸಿ ಮಂಗಗಳನ್ನು ಓಡಿಸುವ ವಿಡಿಯೋ ನೋಡಿದ್ದಾನೆ. ಅದರಂತೆ ಮಾಡಲು ತಯಾರಿ ಮಾಡಿದ್ದ ಆತ ಬೇಕಾದ ಉಪಕರಣಗಳನ್ನ ಸಹ ರೆಡಿಮಾಡಿಕೊಂಡಿದ್ದ. ಅಲ್ಲದೆ ನಳಿಕೆ ತುದಿಯಲ್ಲಿ ಸಣ್ಣ ಪಟಾಕಿ ಬದಲು ಗರ್ನಲ್ ಇಟ್ಟು ಬೆಂಕಿ ಕೊಟ್ಟಿದ್ದಾನೆ. ಅದು ಉರಿಯದಿರುವುದನ್ನ ನೋಡಿ ನಳಿಕೆ ತುದಿಗೆ ಕೈ ಹಾಕಿದಾಗ ಗರ್ನಲ್ ಸ್ಫೋಟಗೊಂಡಿದೆ ಎಂಬುದು ಮಾಹಿತಿ. 

ಘಟನೆಯಲ್ಲಿ ಯುವಕನ ಕೈಗೆ ಗಂಭೀರವಾಗಿ ಪೆಟ್ಟಾಗಿದ್ದು ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor