ವಾಹನ ಸವಾರರ ಗಮನಕ್ಕೆ ! ನಾಳೆ ಶಿವಮೊಗ್ಗ-ತೀರ್ಥಹಳ್ಳಿ ವಾಹನ ಸಂಚಾರ ಮಾರ್ಗ ಬದಲಾವಣೆ! ಯಾವ ರೂಟ್​ ನಲ್ಲಿ ಸಂಚರಿಸಬೇಕು?ವಿವರ ಓದಿ

ಹಂಚಿಕೊಳ್ಳಿ
WhatsApp Facebook X Telegram

Shivamogga Mar 7, 2024  ನಾಳೆ ಶಿವರಾತ್ರಿ ಈ ಹಿನ್ನಲೆಯಲ್ಲಿ ಹರಕೆರೆ ಶ್ರೀರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ಸಾವಿರಾರು ಜನರು ಬೆಳಗ್ಗೆಯಿಂದಲೂ ಪೂಜೆ ಸಲ್ಲಿಸಲು ದಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ  ಮಾರ್ಗವನ್ನು ಬದಲಾಯಿಸಲಾಗಿದೆ. ವಾಹನ ಸವಾರರು ಇದನ್ನ ಗಮನಿಸಬೇಕು

ಜಿಲ್ಲಾಡಳಿತದ ಪ್ರಕಟಣೆಯಲ್ಲಿ ಏನಿದೆ

ಮಾ.8 ಮತ್ತು 09 ರಂದು ಶಿವಮೊಗ್ಗ ನಗರದಲ್ಲಿ ಹರಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ನಿಮತ್ತ ಜಾತ್ರೆ ನಡೆಯಲಿದೆ.  ಮಾ.08 ರ ಬೆಳಗ್ಗಿನ ಜಾವ 4 ರಿಂದ 09 ರ ಬೆಳಗಿನ ಜಾವದವರೆಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬಂದು ಹೋಗುವ ನಿರೀಕ್ಷೆಯಿದೆ. 

ಈ  ಕಾರಣ ಹಾಗೂ ಸೂಳೆಬೈಲು ಬೆಟ್ಟದ ಮಲ್ಲೇಶ್ವರ ದೇವಾಲಯಕ್ಕೂ ಭಕ್ತಾದಿಗಳು ಆಗಮಿಸುವುದರಿಂದ ಈ ಕೆಳಗಿನಂತೆ ತಾತ್ಕಾಲಿಕವಾಗಿ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಸೂಚನೆ ಹೊರಡಿಸಿ ಆದೇಶ ನೀಡಿದ್ದಾರೆ.

ಮಾರ್ಗ ಬದಲಾವಣೆ

ತೀರ್ಥಹಳ್ಳಿ ಮಾರ್ಗವಾಗಿ ಓಡಾಡುವ ವಾಹನಗಳನ್ನು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ವಾಹನಗಳು ಗಜಾನನ ಗ್ಯಾರೇಜ್ ಪಕ್ಕದ ರಸ್ತೆಯಲ್ಲಿ ಹೋಗಿ ರಾಮಿನಕೊಪ್ಪ ಚಾನಲ್ ಮಾರ್ಗವಾಗಿ ಎನ್ ಹೆಚ್ ಆಸ್ಪತ್ರೆ ಪಕ್ಕದ ರಸ್ತೆಗೆ ಬಂದು ಸೇರುವುದು.

ತೀರ್ಥಹಳ್ಳಿಯಿಂದ ಬರುವ ಎಲ್ಲಾ ವಾಹನಗಳು ಎನ್ ಹೆಚ್ ರಸ್ತೆಯ ಪಕ್ಕದ ರಸ್ತೆಯ ಮೂಲಕ ರಾಮಿನಕೊಪ್ಪ ಚಾನಲ್ ಕ್ರಾಸ್ ನಿಂದ ಗಜಾನನ ಗ್ಯಾರೇಜ್ ಮೂಲಕ ಬಂದು ಶಿವಮೊಗ್ಗ ಸೇರಬಹುದು ಎಂದು ತಿಳಿಸಲಾಗಿದೆ. .

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor