ನಾಳೆ  ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧ

ಹಂಚಿಕೊಳ್ಳಿ
WhatsApp Facebook X Telegram

Shivamogga Mar 7, 2024   ಮಾಂಸ ಮಾರಾಟ ನಿಷೇಧ

ಮಾರ್ಚ್ 08 ರಂದು ಅಂದರೆ ನಾಳೆ  ಮಹಾ ಶಿವರಾತ್ರಿ ಹಬ್ಬದ  ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. 

ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. 

ಮಾ. 15 ರಂದು ಡಾಕ್ ಅದಾಲತ್

ಶಿವಮೊಗ್ಗ ಅಂಚೆ ವಿಭಾಗವು ಮಾ. 15 ರಂದು ಬೆಳಗ್ಗೆ 11.00ಕ್ಕೆ ಅಂಚೆ ಅಧೀಕ್ಷಕರ ಕಚೇರಿ, ಕೋಟೆ ರಸ್ತೆ, ಶಿವಮೊಗ್ಗ ಅಂಚೆ ವಿಭಾಗದಲ್ಲಿ ಡಾಕ್ ಅದಾಲತ್ ಹಮ್ಮಿಕೊಂಡಿದೆ. ಸಾರ್ವಜನಿಕರು ಅಂಚೆ ಇಲಾಖೆಯ ಕುಂದುಕೊರತೆಗಳನ್ನು ಅಥವಾ ಸಲಹೆ-ಸೂಚನೆಗಳನ್ನು ಮಾ.12 ರೊಳಗಾಗಿ ಸಲ್ಲಿಸಿ, ಡಾಕ್ ಅದಾಲತ್‍ನಲ್ಲಿ  ಭಾಗವಹಿಸುವಂತೆ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor