ಮತ್ತಿನಲ್ಲಿ ಎಂಎಲ್​ಎ ಮನೆ ಸಮೀಪ ಮೆಡಿಕಲ್​ ವಿದ್ಯಾರ್ಥಿಯ ಱಶ್​ ಡ್ರೈವಿಂಗ್! ಹಲವರಿಗೆ ಡಿಕ್ಕಿ! ಜನರಿಂದ ಧರ್ಮದೇಟು

ಹಂಚಿಕೊಳ್ಳಿ
WhatsApp Facebook X Telegram
ಮತ್ತಿನಲ್ಲಿ ಎಂಎಲ್​ಎ ಮನೆ ಸಮೀಪ ಮೆಡಿಕಲ್​ ವಿದ್ಯಾರ್ಥಿಯ ಱಶ್​ ಡ್ರೈವಿಂಗ್! ಹಲವರಿಗೆ ಡಿಕ್ಕಿ! ಜನರಿಂದ ಧರ್ಮದೇಟು

Shivamogga | Feb 2, 2024 |  ಮೆಡಿಕಲ್ ವಿದ್ಯಾರ್ಥಿಯೊಬ್ಬ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಐವರಿಗೂ ಹೆಚ್ಚು ಮಂದಿಯನ್ನ ಗಾಯಗೊಳಿಸಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ಹೊಳೆಹೊನ್ನೂರು ರಸ್ತೆಯಲ್ಲಿ ಈ ಘಟನೆ ಕಳೆದ ಬುಧವಾರ ರಾತ್ರಿ ಸಂಭವಿಸಿದೆ. ಈ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಯನ್ನು ಧೃಡಿಕರಿಸಿರುವ ಅವರು ವಿದ್ಯಾರ್ಥಿಯು ಯಾವ ನಶೆಯಲ್ಲಿದ್ದ ಎಂಬದನ್ನ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. 

ಪೂರ್ವ ಸಂಚಾರಿ ಪೊಲೀಸ್ ಸ್ಟೇಷನ್

ಸದ್ಯ ಘಟನೆ ಸಂಬಂಧ ಒಂದೇ ಒಂದು ಎಫ್ಐಆರ್ ಆಗಿದೆ, ಐಪಿಸಿ ಸೆಕ್ಷನ್ 279,337 ರ ಅಡಿಯಲ್ಲಿ ಅಷ್ಟೆ ಕೇಸ್ ದಾಖಲಾಗಿದೆ. ನಶೆಯ ಹಿನ್ನೆಲೆಯನ್ನು ಮುಚ್ಚಿಡಲಾಗುತ್ತಿದೆ ಎಂಬ ಆರೋಪವೂ ಪ್ರಕರಣದಲ್ಲಿದೆ. ಈ ಬಗ್ಗೆ ಪೊಲೀಸ್ ಇಲಾಖೆಯು ಮೌನ ತಾಳಿದೆ. 

ಹೊಳೆಹೊನ್ನೂರು ರಸ್ತೆ 

ಇನ್ನೂ ದಾಖಲಾದ ಎಫ್​ಐಆರ್ ಹಾಗೂ ಸ್ಥಳೀಯರು ನೀಡಿದ ಮಾಹಿತಿಯನ್ನು ನೋಡುವುದಾದರೆ ಹೊಳೆಹೊನ್ನೂರು ರಸ್ತೆ ಯಿಂದ ಶಿವಮೊಗ್ಗದ ಕಡೆಗೆ ಕಾರಿನಲ್ಲಿ ಬರುತ್ತಿದ್ದ ಮೆಡಿಕಲ್ ವಿದ್ಯಾರ್ಥಿ ಜಾವಳ್ಳಿಯಿಂದ ಹಲವು ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಬಂದಿದ್ದಾನೆ ಎಂಬುದು ಸ್ಥಳೀಯರ ಆರೋಪ. ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಾ ರಸ್ತೆಯಲ್ಲಿ ಬರುತ್ತಿರುವ ವಾಹನಗಳಿಗೆ ತೊಂದರೆ ನೀಡಿದ್ದಾತ ಎಂಎಲ್​ಎ ಚನ್ನಬಸಪ್ಪರವರ ಮನೆ ಸಮೀಪ ಭದ್ರಾವತಿ ಮೂಲದ ದಂಪತಿಯೊಬ್ಬರ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಈ ಸಂಬಂಧ ಗಾಯಗೊಂಡ ಮಹಿಳೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. 

ಕಾರು ಚಾಲಕನಿಗೆ ಪೆಟ್ಟು

ಇನ್ನೂ ಅಪಘಾತ ಪಡಿಸಿಯು ಅಲ್ಲಿ ನಿಲ್ಲದ ವಿದ್ಯಾರ್ಥಿಯನ್ನು ಸ್ಥಳೀಯರು ಹಿಂಬಾಲಿಸಿ ಕಾರು ಅಡ್ಡಗಟ್ಟಿ ಆತನನ್ನ ತರಾಟೆತೆಗೆದುಕೊಂಡು ಪೆಟ್ಟು ಸಹ ನೀಡಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ಮೆಗ್ಗಾನ್​ಗೆ ರವಾನೆ ಮಾಡಿದ್ದಾರೆ. ಅಲ್ಲಿಂದ ವಿದ್ಯಾರ್ಥಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. 

ವೈದ್ಯಕೀಯ ಮಾದಕ ಲೋಕ

ಶಿವಮೊಗ್ಗದಲ್ಲಿ ಎಲ್​ಆ್ಯಂಡ್​ಓ ವೀಕ್ ಆಗ್ತಿದೆ ಎಂಬ ಅನುಮಾನಗಳಿಗೆ ಈ ಪ್ರಕರಣವೂ ಸಹ ಸಾಕ್ಷಿ ಹೇಳುತ್ತಿದೆ. ಸಿಟಿಯಲ್ಲಿ ಮಾದಕ ವಸ್ತುಗಳ ಸರಭರಾಜು ಹೆಚ್ಚಾಗುತ್ತಿರುವದಕ್ಕೆ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ. ಅದರಲ್ಲಿಯು ಮೆಡಿಕಲ್ ಕ್ಷೇತ್ರದಲ್ಲಿ ಮಾದಕತೆಯ ಚಟ ಭೀಕರವಾಗಿ ವ್ಯಾಪಿಸಿದ್ದು ಮನೆಯಲ್ಲಿಯೇ ಗಾಂಜಾ ಕೃಷಿ ಮಾಡಿದಂತಹ ಉದಾಹರಣೆಗಳನ್ನು ಶಿವಮೊಗ್ಗ ಪೊಲೀಸ್ ಇಲಾಖೆ ಈ ಹಿಂದೆ ಕಂಡಿದೆ. ಬುಧವಾರದ ಘಟನೆಯು ನಶೆಯ ಮತ್ತಿಗೆ ಸಂಬಂಧಿಸಿದ್ದಾಗಿದೆ/ ಪ್ರಕರಣಕ್ಕಷ್ಟೆ ಸೀಮಿತವಾಗದೇ ಖಾಕಿ ಇಲಾಖೆ ಮಾದಕತೆಯ ಜಾಲದ ಬೆನ್ನಟಲಿ ಎಂಬುದಷ್ಟೆ ನಿರೀಕ್ಷೆ. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor