ಮಹಿಳೆಗೆ ಪದೇಪದೇ ಕಿರುಕುಳ! ಆರು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್! ಹುಷಾರ್!

ಹಂಚಿಕೊಳ್ಳಿ
WhatsApp Facebook X Telegram

Shivamogga | Feb 2, 2024 |   Sagar Taluk Court ವಿವಾಹಿತೆಗೆ ಕಿರುಕುಳ ಆರೋಪವೊಂದು ಸಾಬೀತಾದ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕು ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಅಪರಾಧಿಯೊಬ್ಬರಿಗೆ ಆರು ವರ್ಷ ಜೈಲುಶಿಕ್ಷೆ ವಿಧಿಸಿದೆ. 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು  ಸಿರಿವಾಳ ಗ್ರಾಮದ ರತನ್‌ಕುಮಾರ್‌ಎಂಬಾತ ವಿವಾಹಿತ ಮಹಿಳೆಗೆ 2013ರಿಂದ ನಿರಂತರ ಫೋನ್ ಮಾಡಿ, ಕಿರುಕುಳ ನೀಡುತ್ತಿದ್ದ ಆರೋಪ ಎದುರಿಸಿದ್ದ. ಈತ 2021ರಲ್ಲಿ ಸಾಗರದಲ್ಲಿ ಮಹಿಳೆಯನ್ನ ಅಡ್ಡಗಟ್ಟಿ ಹಲ್ಲೆಯನ್ನೂ ನಡೆಸಿದ್ದ

ಸಾಗರ ಪೇಟೆ ಪೊಲೀಸ್ ಸ್ಟೇಷನ್

ಈ ಸಂಬಂಧ ಮಹಿಳೆ ನೀಡಿದ ದೂರಿನ ಹಿನ್ನೆಲೆ ಸಾಗರ ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ಸಂದರ್ಭದಲ್ಲಿಯೂ ಆರೋಪಿ ರತನ್‌ಕುಮಾರ್ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಇದು ನ್ಯಾಯಾಲಯದ ಗಮನಕ್ಕೆ ಬಂದು ಜಾಮೀನು ರದ್ದಾಗಿತ್ತು. ಪುನಃ ರತನ್‌ಕುಮಾರ್‌ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ. 

ಕಳೆದ ಬುಧವಾರ ಪ್ರಕರಣದ ವಿಚಾರಣೆ ಮುಗಿಸಿದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಶೈಲ ಭೀಮಸೇನ ಬಗಾಡಿ ಅವರು ರತನ್‌ಕುಮಾ‌ರ್ ಗೆ 6 ವರ್ಷ ಜೈಲುಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚಿನ ಶಿಕ್ಷೆ ಅನುಭವಿಸಲು ತೀರ್ಪಿನಲ್ಲಿ ಆದೇಶಿಸಿದ್ದಾರೆ. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor