ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA |  Dec 20, 2023  |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿವಾಸಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬಗ್ಗೆ ವರದಿಯಾಗಿದೆ. ಇಲ್ಲಿನ ರಿಪ್ಪನ್​ ಪೇಟೆ ಸಮೀಪದ ತೀರ್ಥಹಳ್ಳಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. 

ಮೃತರನ್ನು 24 ವರ್ಷದ ಕವನಾ ಎಂಧುರ ಗುರುತಿಸಲಾಗಿದೆ. ಇಲ್ಲಿನ ಹಳೆಯ ಚಿತ್ರಮಂದಿರ ಸಮೀಪ ಬಾಡಿಗೆ ಮನೆಯಲ್ಲಿ ಇವರು ವಾಸವಾಗಿದ್ದರು. ಶಾಪಿಂಗ್ ಮಾಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಶಿಕಾರಿಪುರ ಮೂಲದ ವ್ಯಕ್ತಿಯೊಬ್ಬರನ್ನ ಮದುವೆಯಾಗಿದ್ದರು. ಇವರಿಗೆ ಐದು ವರ್ಷದ ಮಗನಿದ್ದು ಆತನನ್ನ ತಮ್ಮ ತಾಯಿಯೊಂದಿಗೆ ಬಿಟ್ಟಿದ್ದರು. 

READ :ಶಿವಮೊಗ್ಗ -ಗೋವಾ ವಿಮಾನ ಹಾರಾಟ ರದ್ದು! ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರ ಸಿಡಿಮಿಡಿ!

ಕಳೆದ ಮಂಗಳವಾರ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದ್ದು, ಪರಿಚಯಸ್ಥರು ಫೋನ್ ಮಾಡಿದ್ದ ಸಂದರ್ಭದಲ್ಲಿ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಅನುಮಾನ ಮೂಡಿದೆ. ಹೀಗಾಗಿ ಮನೆ ಬಳಿಗೆ ವಿಚಾರಿಸಲು ಬಂದವರಿಗೆ ಗೃಹಿಣಿ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಇನ್ನೂ ಘಟನೆ ಸಂಬಂಧ ರಿಪ್ಪನ್​ ಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ. 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor