SHIVAMOGGA NEWS / ONLINE / Malenadu today/ Nov 24, 2023 NEWS KANNADA
Shivamogga | Malnenadutoday.com ಮಲಗಿದ್ದ ವ್ಯಕ್ತಿಯ ಮೇಲೆ ಟಿಪ್ಪರ್ ಹರಿದು ಆತ ಸಾವನ್ನಪ್ಪಿರುವ ಘಟನೆ ಹೆಬ್ರಿಯಲ್ಲಿ ನಡೆದಿದೆ. ಇಲ್ಲಿನ ಸೋಮೇಶ್ವರದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಘಟನೆ ಸಂಭವಿಸಿದೆ. ಮತ್ತು ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೇಗಾಯ್ತು ಘಟನೆ
ಇಲ್ಲಿರುವ ಪೆಟ್ರೋಲ್ ಬಂಕ್ ಟಿಪ್ಪರ್ ಒಂದು ಬಂದಿದೆ. ಇಂಧನ ತುಂಬಿಸಿಕೊಂಡು ವಾಪಸ್ ಹೋಗುವಾಗ ಟಿಪ್ಪರ್ ಚಾಲಕನಿಗೆ ಅಲ್ಲಿ ಮಲಗಿದ್ದ ಕಾರ್ಮಿಕನ ಇರುವಿಕೆ ಕಾಣಲಿಲ್ಲ. ಹೀಗಾಗಿ ಏಕಾಯೇಕಿ ಟಿಪ್ಪರ್ ತಿರುಗಿಸಿಕೊಂಡು ಆತ ಮುಂದಕ್ಕೆ ಹೋಗಿದ್ದಾನೆ.
ಪರಿಣಾಮ ಟಿಪ್ಪರ್ ಚಕ್ರಕ್ಕೆ ಸಿಲುಕಿ ಕಾರ್ಮಿಕ ಶಿವರಾಜ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಬೆಳಗಿನ ಜಾವ ಈ ಘಟನೆ ನಡೆದಿದ್ದು, ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರಯಾಗಿದೆ.
ಇನ್ನೂ ಮೃತ ಕಾರ್ಮಿಕನನ್ನ ಸಾಗರ ತಾಲ್ಲೂಕಿನ ಕೊರ್ಲಿ ಕೊಪ್ಪ ನಿವಾಸಿ ಎಂದು ಗುರುತಿಸಲಾಗಿದೆ





