ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ಸ್ಟಾರ್​ ಏರ್​ ಲೈನ್ಸ್ ಹಾರಾಟ ಆರಂಭ! ವಿವರ ಇಲ್ಲಿದೆ !

SHIVAMOGGA NEWS / ONLINE / Malenadu today/ Nov 21, 2023 NEWS KANNADA

Shivamogga  |  Malnenadutoday.com |  ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ‘ಸ್ಟಾರ್’ ವಿಮಾನ ಸೇವೆ ಇಂದಿನಿಂದ ಆರಂಭಗೊಳ್ಳಲಿದೆ. 

ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣ ದಿಂದ ಇಂಡಿಗೋ ಬಳಿಕ ಇದೀಗ ಸ್ಟಾರ್ ಏರ್ ಸಂಸ್ಥೆಯಿಂ ದಲೂ ವಿಮಾನ ಸೇವೆ ಆರಂಭವಾಗಲಿದೆ. ಶಿವಮೊಗ್ಗದಿಂದ ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ವಾರದಲ್ಲಿ ಸ್ಟಾ‌ರ್ ಏರ್‌ನಿಂದ ನಾಲ್ಕು ದಿನ ವಿಮಾನ ಹಾರಾಟ ಆರಂಭಗೊಳ್ಳಲಿದೆ.

ಶಿವಮೊಗ್ಗ- ಗೋವಾ, ಹೈದರಾಬಾದ್ ಮತ್ತು ತಿರುಪತಿ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯ ಇರುತ್ತದೆ.

READ : ತಿರುಪತಿ-ಚೆನ್ನೈಗೆ ಹೋಗಲು ಇನ್ನಷ್ಟು ಅನುಕೂಲ! ಶಿವಮೊಗ್ಗ- ಎಂಜಿಆರ್​ ಚನ್ನೈ ಸೆಂಟ್ರಲ್​ ಟ್ರೈನ್​ಗೆ ಮತ್ತಷ್ಟು ಅವಕಾಶ! ಡಿಟೇಲ್ಸ್ ಓದಿ

ಯಾವಾಗ? ಎಲ್ಲಿಗೆ? ಎಷ್ಟೊತ್ತಿಗೆ

(Hyderabad) ಹೈದ್ರಾಬಾದ್ ನಿಂದ ಶಿವಮೊಗ್ಗ: ಬೆಳಗ್ಗೆ 9.30 ಗಂಟೆಗೆ ಹೊರಟು 10.35 ಕ್ಕೆ ಶಿವಮೊಗ್ಗ ತಲುಪಲಿದೆ, 

ವಾರದಲ್ಲಿ ಎಷ್ಟುದಿನ ?(ಮಂಗಳವಾರ, ಬುಧವಾರ, ಗುರುವಾರ, ಶನಿವಾರ) ಮಾತ್ರ ಸಂಚಾರ

ಶಿವಮೊಗ್ಗ ದಿಂದ ಹೈದ್ರಾಬಾದ್: ಸಂಜೆ 4.30 ಗಂಟೆಗೆ ಶಿವಮೊಗ್ಗದಿಂದ ಹೊರಟು ಸಂಜೆ 5.30ಕ್ಕೆ ಹೈದರಾಬಾದ್ ತಲುಪಲಿದೆ

ವಾರದಲ್ಲಿ ಎಷ್ಟುದಿನ ?(ಮಂಗಳವಾರ, ಬುಧವಾರ, ಗುರುವಾರ, ಶನಿವಾರ) ಮಾತ್ರ ಸಂಚಾರ 

ಶಿವಮೊಗ್ಗದಿಂದ ಗೋವಾ: ಮಧ್ಯಾಹ್ನ 1.55 ಗಂಟೆಗೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಗೋವಾ ತಲುಪಲಿದೆ.

ವಾರದಲ್ಲಿ ಎಷ್ಟುದಿನ ? :  (ಮಂಗಳವಾರ, ಗುರುವಾರ, ಶನಿವಾರ) ಸಂಚರಿಸಲಿದೆ. ಬುಧವಾರದಂದು ಮಾತ್ರ ಬೆಳಗ್ಗೆ 11 ಗಂಟೆಗೆ ಹೊರಟು 11.50ಕ್ಕೆ ಗೋವಾ ತಲುಪಲಿದೆ

(Goa) ಗೋವಾದಿಂದ ಶಿವಮೊಗ್ಗ: ಗೋವಾದಿಂದ ಮಧ್ಯಾಹ್ನ 3.15 ಗಂಟೆಗೆ ಹೊರಟು ಸಂಜೆ 4.05 ಗಂಟೆಗೆ ಶಿವಮೊಗ್ಗ ತಲುಪಲಿದೆ.

ವಾರದಲ್ಲಿ ಎಷ್ಟುದಿನ ? (ಮಂಗಳವಾರ, ಗುರುವಾರ, ಶನಿವಾರ) ಸಂಚರಿಸಲಿದೆ. ಬುಧವಾರದಂದು ಗೋವಾದಿಂದ 12.20 ಗಂಟೆಗೆ ಹೊರಟು 1.10ಕ್ಕೆ ಶಿವಮೊಗ್ಗ ತಲುಪಲಿದೆ.

READ : ಬೆಂಗಳೂರು, ಗೋವಾ, ಹೈದ್ರಾಬಾದ್ , ತಿರುಪತಿ ಬೆನ್ನಲ್ಲೆ ಮತ್ತೊಂದು ಮಹಾನಗರಿಗೆ ಶಿವಮೊಗ್ಗದಿಂದ ವಿಮಾನಯಾನ? | ಸಂಸದರು ನೀಡಿದ್ರು ಹೊಸ ಸುದ್ದಿ?

ಶಿವಮೊಗ್ಗ- ತಿರುಪತಿ: ಶಿವಮೊಗ್ಗದಿಂದ ಬೆಳಗ್ಗೆ 11 ಗಂಟೆಗೆ ಹೊರಟು ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪಲಿದೆ.

ವಾರದಲ್ಲಿ ಎಷ್ಟುದಿನ ?(ಮಂಗಳವಾರ, ಗುರುವಾರ, ಶನಿವಾರ) ಲಭ್ಯ ಇರಲಿದೆ. ಬುಧವಾರದದಂದು ಶಿವಮೊಗ್ಗದಿಂದ ತಿರುಪತಿಗೆ ಮಧ್ಯಾಹ್ನ 1.40ಕ್ಕೆ ಹೊರಟು 2.35 ಗಂಟೆಗೆ ತಲುಪಲಿದೆ. 

(Tirupati) ತಿರುಪತಿಯಿಂದ ಶಿವಮೊಗ್ಗ: ತಿರುಪತಿಯಿಂದ ಮಧ್ಯಾಹ್ನ 12.35 ಗಂಟೆಗೆ ಹೊರಡಲಿದೆ. ಮಧ್ಯಾಹ್ನ 1.40 ಗಂಟೆಗೆ ಶಿವಮೊಗ್ಗಕ್ಕೆ ತಲುಪುವುದು.

ವಾರದಲ್ಲಿ ಎಷ್ಟುದಿನ ? (ಮಂಗಳವಾರ, ಗುರುವಾರ, ಶನಿವಾರ) ಲಭ್ಯ ಇರಲಿದೆ. ಬುಧವಾರ ಮಾತ್ರ ಸಂಜೆ 3.05 ಗಂಟೆಗೆ ಹೊರಟು 4.55ಕ್ಕೆ ಶಿವಮೊಗ್ಗ ತಲುಪಲಿದೆ.


Leave a Comment