ಶಿವಮೊಗ್ಗದಲ್ಲಿ ಸರ್ಕಾರದಿಂದಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ? ವಿವರ ಇಲ್ಲಿದೆ !

KARNATAKA NEWS/ ONLINE / Malenadu today/ Nov 9, 2023 SHIVAMOGGA NEWS

Shivamogga |  ಶಿವಮೊಗ್ಗ ನಗರ ಆಸ್ಪತ್ರೆಗಳ ಹಬ್​ ಆಗಿ ಮಾರ್ಪಟ್ಟಿದೆ. ಆದಾಗ್ಯ ಬಡ-ಮಧ್ಯಮವರ್ಗದವರಿಗೆ ಸುಲಭವಾಗಿ ಹಾಗೂ ಸಸ್ತಾದರದಲ್ಲಿ ಚಿಕಿತ್ಸೆ ಸಿಗುವಂತೆ ಮಾಡುವ ನಿಟ್ಟಿನ್ಲಲಿ ಶಿವಮೊಗ್ಗ  ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ಯನ್ನು  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಮೊದಲ ಪ್ರಯತ್ನಕ್ಕೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮುಂದಾಗಿದ್ದಾರೆ. 

ಈ ನಿಟ್ಟಿನಲ್ಲಿ ಮೊದಲ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ. ಸಿಮ್ಸ್‌ನ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಅತ್ಯಂತ ಕಡಿಮೆ ದರ ಹಾಗೂ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.  ಹೃದಯ, ಕಿಡ್ನಿ, ಮಿದುಳು ಮುಂತಾದ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಜನಸಾಮಾನ್ಯರು ಖರ್ಚುಗಳಿಗೆ ಹೆದರುತ್ತಿದ್ದಾರೆ. 

READ : ಬಾನುಮತಿ ಆನೆ ಬಾಲ ಕಟ್ ಮಾಡಿದ್ದು ಯಾರು? ಸತ್ಯ ಹೊರಬಿತ್ತು! ಏನಿದು ರಿಪೋರ್ಟ್!

ಅಂತಹವರಿಗೆ ಸುಲಭವಾಗಿ ಚಿಕಿತ್ಸೆ ನೀಡುವ ಸಲುವಾಗಿ ಸಿಮ್ಸ್​ನ್ನ ಮೇಲ್ದರ್ಜೆಗೆ ಏರಿಸುವ ಪ್ರಯತ್ನ ಕೈಗೊಳ್ಳುವುದು ಎಂದು ತಿಳಿಸಿದರು. ಈ ಸಂಬಂಧ ಅಗತ್ಯ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.  

 


Leave a Comment