ಕೆರೆ ಬೇಟೆ ಶುರುವಾಯ್ತು | ಏನಿದು ಗೊತ್ತಾ ಮಲೆನಾಡಿಗರ ವಿಶೇಷ ?

ಹಂಚಿಕೊಳ್ಳಿ
WhatsApp Facebook X Telegram
ಕೆರೆ ಬೇಟೆ ಶುರುವಾಯ್ತು |  ಏನಿದು ಗೊತ್ತಾ  ಮಲೆನಾಡಿಗರ ವಿಶೇಷ ?

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SHIVAMOGGA |   ಶಿವಮೊಗ್ಗದವರಿಗೆ ಕರೆಬೇಟೆ ಅಂದರೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಆದರೆ ಸದ್ಯದಲ್ಲಿಯೇ ರಾಜ್ಯದಲ್ಲೆಡೆ ಕೆರೆ ಬೇಟೆ ಶುರುವಾಗಲಿದೆ. ಹೀಗಂತಾ ಸಿನಿಮಾ ತಂಡವೊಂದು ಅದ್ದೂರಿಯಾಗಿ ಹೇಳಿಕೊಳ್ತಿದೆ. 

ಹೌದು, ಮಲೆನಾಡಿನ ಬದುಕನ್ನ ಕೆರೆಬೇಟೆ (Kere bete) ಮೂಲಕ ತೋರಿಸಲು ಹೊಸ ಚಿತ್ರತಂಡವೊಂದು ಮುಂದಾಗಿದೆ. ಅದರ ಸ್ಯಾಂಪಲ್ ಎಂಬಂತೆ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಚಿತ್ರ ತಂಡದ ಹೆಸರಿನ ಟೈಟಲ್​ ಕಾರ್ಡ್​ನೊಂದಿಗೆ ಹೊರಬಿದ್ದಿರುವ ಮೋಷನ್​ ಪೋಸ್ಟರ್​ನಲ್ಲಿ ಮಲ್ನಾಡಿನ ಜನರ ಸಂಭ್ರಮದ ಕೂಗು ಬಿಜಿಎಂ ರೂಪದಲ್ಲಿ ಕೇಳಿಬರುತ್ತಿದೆ. ಇನ್ನೂ ಕೆರಿ ಬ್ಯಾಟಿ ಶುರುವಾಯ್ತು ಎಂಬ ಟೈಟಲ್​ ಕಾರ್ಡ್​ ಇಂಟ್ರಡಕ್ಷನ್​ ಸಾಲು ಸಖತ್​ ಆಗಿದೆ.. 

Malenadu Today Shivamogga

READ : ರಾಗಿಗುಡ್ಡ ಕೇಸ್​ | PI ಅಭಯ್ ಪ್ರಕಾಶ್​ ಸೋಮನಾಳ್​ ಅಮಾನತು ಆದೇಶ ರದ್ದು! ಚಿಕ್ಕಮಗಳೂರಿಗೆ ವರ್ಗ!

ಮೀನು ಬೇಟೆಯ ಮೂಲಕ ಮಲ್ನಾಡಿನ ಬದುಕಿನ ಶೈಲಿಯನ್ನ ತೆರೆಮೇಲೆ ತರುತ್ತಿದ್ದಾರೆ ನಿರ್ದೇಶಕ ರಾಜ್‌ಗುರು. ಈ ಚಿತ್ರದಲ್ಲಿ  ನಾಯಕನಾಗಿ ಗೌರಿಶಂಕರ್ ಎಸ್‌ಆರ್‌ಜಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಎರಡು ಸಿನಿಮಾಗಳನ್ನು ಮಾಡಿರುವ ಗೌರಿಶಂಕರ್ ಇದೀಗ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಇನ್ನೂ  ನಿರ್ದೇಶಕ ರಾಜ್‌ಗುರುರವರದ್ದು ಮೊದಲ ಸ್ವತಂತ್ರ ಪ್ರಯತ್ನ. ಈ ಮೊದಲು ಅವರ ಸಹ ನಿರ್ದೇಶಕರಾಗಿದ್ದರು.  ಪವನ್ ಒಡೆಯರ್ ಜೊತೆ ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ, ಜೆಸ್ಸಿ, ರೆಮೋ ಹಾಗೂ ಇನ್ನು ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿರುವ ಅವರು, ಕೆರೆಬೇಟೆ ಮೂಲಕ ತಮ್ಮ ಭವಿಷ್ಯ ಬರೆಯಲು ಹೊರಟಿದ್ದಾರೆ. ಮಲ್ನಾಡಿಗರ ಈ ಪ್ರಯತ್ನಕ್ಕೆ ಯಶಸ್ಸು ಸಿಗಬೇಕಿದೆ. 

 ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದ್ದು ಇದೀಗ ಕೆರೆಬೇಟೆ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ ರಾಜ್‌ಗುರು. ಮಲೆನಾಡಿನವರೇ ಆದ ರಾಜ್‌ಗುರು ಚಿಕ್ಕವಯಸ್ಸಿನಿಂದ ಕೆರೆಬೇಟೆ ನೋಡುತ್ತಾ, ಆಡುತ್ತಾ ಬೆಳೆದವರು. ಅದನ್ನೇ ಇಟ್ಟುಕೊಂಡು ಈಗ ಸಿನಿಮಾ ಮಾಡಿರುವುದು ವಿಶೇಷ. ಮಲೆನಾಡಿನ ಜೀವನ ಶೈಲಿಯನ್ನು ಅಷ್ಟೆ ನೈಜ್ಯವಾಗಿ ಕಟ್ಟಿಕೊಡುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ.

READ : KSRTC ಬಸ್​ಸ್ಟ್ಯಾಂಡ್​ ಲೇಡಿಗೆ ಶಾಕ್​ ಕೊಟ್ಟ ದೊಡ್ಡಪೇಟೆ ಪೊಲೀಸರು! ಬಯಲಾಯ್ತು ಕೇಸ್​!

 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor