KARNATAKA NEWS/ ONLINE / Malenadu today/ Oct 31, 2023 SHIVAMOGGA NEWS
SHIVAMOGGA | ಶಿವಮೊಗ್ಗದ ರಾಗಿಗುಡ್ಡ ದಲ್ಲಿ ನಡೆದ ಗಲಾಟೆ ಪ್ರಕರಣದ ಕಂಪನಗಳು ಇವತ್ತಿಗೂ ಕೇಳಿಬರುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ, ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದಡಿಯಲ್ಲಿ ಅಮಾನತುಗೊಂಡಿದ್ದ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್ರನ್ನ ಮತ್ತೆ ಸೇವೆಗೆ ನಿಯುಕ್ತಿಗೊಳಿಸಲಾಗಿದೆ.
ಶಿವಮೊಗ್ಗದ ಕ್ರೈಂ ವಿಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಅಭಯ್ ಪ್ರಕಾಶ್ ಸೋಮನಾಳ್ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೂಡ ಆಗಿದ್ದರು. ಅದೇ ವ್ಯಾಪ್ತಿಯಲ್ಲಿ ಬರುವ ರಾಗಿಗುಡ್ಡದಲ್ಲಿ ನಡೆದ ಗಲಾಟೆಯ ಪ್ರಕರಣದಲ್ಲಿ ಅವರನ್ನ ಸಸ್ಪೆಂಡ್ ಮಾಡಲಾಗಿತ್ತು.
READ : !ರಾಗಿಗುಡ್ಡ ಘಟನೆ ಸಂಬಂಧ ಅಭಯ್ ಪ್ರಕಾಶ್ ಸೋಮನಾಳ್ ಸೇರಿ ನಾಲ್ವರು ಸಸ್ಪೆಂಡ್! ಕಾರಣ ಕೇಳಬೇಡಿ! ಹೆಚ್ಚಿದ ಅನುಮಾನ!?
ಈ ಆದೇಶದ ವಿರುದ್ಧವಾಗಿ ಸಾಕಷ್ಟು ಟೀಕೆಗಳು ಸಹ ಕೇಳಿಬಂದಿತ್ತು. ಇದರ ಬೆನ್ನಲ್ಲೆ ಇದೀಗ 20 ದಿನಗಳ ನಂತರ ಅವರ ಸಸ್ಪೆಂಡ್ನ್ನ ರದ್ದುಗೊಳಿಸಲಾಗಿದೆ. ಅವರನ್ನ ಚಿಕ್ಕಮಗಳೂರು ಜಿಲ್ಲೆಯ ಡಿಎಸ್ಬಿ ವಿಭಾಗದ ಇನ್ಸ್ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ.
READ : KSRTC ಬಸ್ಸ್ಟ್ಯಾಂಡ್ ಲೇಡಿಗೆ ಶಾಕ್ ಕೊಟ್ಟ ದೊಡ್ಡಪೇಟೆ ಪೊಲೀಸರು! ಬಯಲಾಯ್ತು ಕೇಸ್!