ಅಮೆರಿಕಾದಿಂದ ಶಿವಮೊಗ್ಗ ಸಿಇಎನ್ ಠಾಣೆಗೆ ಬಂತು ಈ ಕೇಸ್! ತಪ್ಪಿ ತಪ್ಪು ಮಾಡ್ಬೇಡಿ! ಹುಷಾರ್!?

ಹಂಚಿಕೊಳ್ಳಿ
WhatsApp Facebook X Telegram
ಅಮೆರಿಕಾದಿಂದ ಶಿವಮೊಗ್ಗ ಸಿಇಎನ್ ಠಾಣೆಗೆ ಬಂತು ಈ ಕೇಸ್! ತಪ್ಪಿ ತಪ್ಪು ಮಾಡ್ಬೇಡಿ! ಹುಷಾರ್!?

KARNATAKA NEWS/ ONLINE / Malenadu today/ Oct 27, 2023 SHIVAMOGGA NEWS

ಶಿವಮೊಗ್ಗದ CEN ಕ್ರೈಂ ಪೊಲೀಸ್ ಸ್ಟೇಷನ್​ನಲ್ಲಿ INFORMATION TECHNOLOGY ACT 2000 (U/s-67(B)); PROTECTION OF CHILDREN FROM SEXUAL OFFENCES ACT 2012 (U/s-15) ಆ್ಯಕ್ಟ್ ಅಡಿಯ್ಲಲಿ  Sue-moto  ಕೇಸ್​ ದಾಖಲಾಗಿದೆ. 

READ | BREAKING NEWS | India Cyber Cop Award ಪ್ರಶಸ್ತಿ ಪಟ್ಟಿಯಲ್ಲಿ ಶಿವಮೊಗ್ಗದ ಸೈಬರ್​ ಕ್ರೈಂ ಪೊಲೀಸ್​ ಠಾಣೆ ಕೇಸ್​ & ತನಿಖಾಧಿಕಾರಿ ಕೆ.ಟಿ ಗುರುರಾಜ್

ಕೆಲ ವರ್ಷಗಳ ಹಿಂದೇ ಇದೇ ರೀತಿಯ ಕೇಸ್ ದಾಖಲಾಗಿ, ಆ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ್ದ ತನಿಖಾಧಿಕಾರಿ ಅಪರಾಧಿಗೆ ಶಿಕ್ಷೆಯಾಗುವಂತೆ ಶ್ರಮವಹಿಸಿದ್ದರು. ಬಳಿಕ ಅದೇ ವಿಚಾರದಲ್ಲಿ ಉತ್ತಮ ತನಿಖಾಧಿಕಾರಿ ಎಂಬ ಪ್ರಶಸ್ತಿಗೆ ಅಂದಿನ ಸಿಇಎನ್ ಠಾಣೆ ಇನ್​ಸ್ಪೆಕ್ಟರ್ ಪಾತ್ರರಾಗಿದ್ರು. 

Malenadu Today Shivamogga

ಇದೀಗ ಮತ್ತೆ ಅಂತಹುದ್ದೆ ಕೇಸ್​ವೊಂದು ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್​ಗೆ ಬಂದಿದೆ. ಆನ್​ಲೈನ್​ನಲ್ಲಿ ಅಪ್ರಾಪ್ತ ವಯಸ್ಸಿನವರ ಫೋಟೋ ವಿಡಿಯೋಗಳನ್ನು ಹರಿಬಿಡುವ ಹಾಗೂ ಬೇರೆಯವರಿಗೆ ವರ್ಗಾಯಿಸುವ , ಅಪ್​ಲೋಡ್​ ಮತ್ತು ಡೌನ್​ಲೋಡ್ ಮಾಡುವವರ ಮೇಲೆ ಸೈಬರ್ ಟಿಪ್ ಎನ್ನುವ ಖಾಸಗಿ ಸಂಸ್ಥೆಯು ಕಣ್ಣಿಡುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿ ಇಂತಹ ಕೆಲಸ ಮಾಡಿದರೆ,ಆ ಸಂಸ್ಥೆಗೆ ತಿಳಿಯುತ್ತದೆ. ಅಲ್ಲದೆ ಕೆಲವರು ನೇರವಾಗಿ ಸೈಬರ್ ಟಿಪ್​ ಸಂಸ್ಥೆಗೆ ದೂರು ನೀಡುತ್ತಾರೆ. ಅಂತಹ ಪ್ರಕರಣಗಳಲ್ಲಿ ಆಡಿಯೋ, ವಿಡಿಯೋ ಇತ್ಯಾದಿ ತಾಂತ್ರಿಕ ಸಾಕ್ಷ್ಯಗಳ ಜೊತೆಗೆ ಸೈಬರ್​ ಟಿಪ್ ಸಂಸ್ಥೆ, ಸಂಬಂಧ ಪಟ್ಟ ತನಿಖಾ ಸಂಸ್ಥೆಗೆ ವಿವರ ರವಾನಿಸುತ್ತದೆ. ಹೀಗೆ ರವಾನೆಯಾದ ವಿವರವು ಸಿಐಡಿ ಘಟಕದಿಂದ ಶಿವಮೊಗ್ಗ ಎಸ್​ಪಿ ಕಚೇರಿಗೆ ರವಾನೆಯಾಗಿದೆ. ಅಲ್ಲಿಂದ ಸಿಇಎನ್​ ಠಾಣೆಗೆ ರವಾನೆಯಾಗಿದ್ದು, ಅಲ್ಲಿ ಸು ಮೋಟೋ ಕೇಸ್ ಆಗಿ ದಾಖಲಾಗಿದೆ. 

Malenadu Today Shivamogga

ಏನಿದು ಪ್ರಕರಣ? 

ಶಿವಮೊಗ್ಗ ಜಿಲ್ಲೆ ಆರೋಪಿ ಒಬ್ಬ, ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋ ಮತ್ತು ಭಾವಚಿತ್ರಗಳನ್ನು ಸಂಗ್ರಹಿಸಿ ರವಾನಿಸಿರುವ ಬಗ್ಗೆ ಆರೋಪ ಕೇಳಿಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಟೆಕ್ನಿಕಲ್ ಎವಿಡೆನ್ಸ್​ ಅಡಿಯಲ್ಲಿ  ಸ್ವಯಂ ದೂರು ತಯಾರಿಸಿ ಇದರೊಂದಿಗೆ ಮಾಹಿತಿ ಪತ್ರ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವ 02 ಪ್ರತಿಗಳು, Cyber Tipline  02 ಸಿಡಿಗಳು, 65(ಬಿ) ಇಂಡಿಯನ್ ಎವಿಡೆನ್ಸ್ ಆಕ್ಟ್-1872 ರೀತಾ ನೀಡಲಾದ 02 ಪ್ರಮಾಣ ಪತ್ರಗಳನ್ನು ಒಳಗೊಂಡು ಎಫ್ಐಆರ್ ದಾಖಲಿಸಲಾಗಿದೆ  


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor