ಶಿವಮೊಗ್ಗಕ್ಕೆ ಬರಲಿದೆ ನಮೋ ಬೈಕ್​ ಯಾತ್ರೆ!? ಏನಿದು ಜನ-ಗಣ-ಮನ ಬೆಸಯೋಣ ರ್ಯಾಲಿ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS

ಕರ್ನಾಟಕದಾದ್ಯಂತ ನಮೋಬ್ರಿಗೇಡ್‌ ಜನ-ಗಣ-ಮನ-ಬೆಸೆಯೋಣ ಎಂಬ ಟ್ಯಾಗ್​ ಲೈನ್​ ಅಡಿಯಲ್ಲಿ ಬೈಕ್‌ ಯಾತ್ರೆಯನ್ನು ಹಮ್ಮಿಕೊಂಡಿದೆ. 

ಈ ಯಾತ್ರೆ ಕಳೆದ ಸಪ್ಟೆಂಬರ್ 28ಕ್ಕೆ ಕೋಲಾರದಿಂದ ಆರಂಭಗೊಂಡಿದೆ.  ಈ ಬೈಕ್‌ ಯಾತ್ರೆ ದಕ್ಷಿಣ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ  ಸಂಚರಿಸಿ ಉತ್ತರ ಕರ್ನಾಟಕದತ್ತ ಸಾಗಿದೆ. ಸದ್ಯ ಬೈಕ್​ ಯಾತ್ರೆಯು ಶಿವಮೊಗ್ಗಕ್ಕೆ ಬರಲಿದೆ. 

ಇದೇ  ಅಕ್ಟೋಬರ್ 12ರಂದು ದಾವಣಗೆರೆ-ಹೊನ್ನಾಳಿ-ನ್ಯಾಮತಿ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸುತ್ತಿದೆ. ಶಿವಮೊಗ್ಗದಲ್ಲಿ ಅದ್ದೂರಿಯಾಗಿ ರ್ಯಾಲಿಯನ್ನು ಸ್ವಾಗತಿಸಲು  ಇಲ್ಲಿನ ನಮೋಬ್ರಿಗೇಡ್ ತಂಡ ತಯಾರಿ ಮಾಡಿಕೊಂಢಿದೆ. 

ಬೈಕ್ ಯಾತ್ರೆ ಸವಳಂಗ ರಸ್ತೆ, ವಿನೋಬ ನಗರ, ನೆಹರೂ ಸ್ಟೇಡೀಯಂ, ಮಹಾವೀರ ವೃತ್ತ, ಗೋಪಿ ವೃತ್ತ, ಗಾಂಧಿಬಜಾರ್ ಮಾರ್ಗವಾಗಿ ಕೆ.ಆರ್.ಪುರಂನ ಅಂಜನ ಪಟೇಲ್ ಭವನದಲ್ಲಿ ಸೇರಿಕೊಳ್ಳಲಿದೆ ಎಂದು ಮಾಹಿತಿ ನೀಡಲಾಗಿದೆ. 

 


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor