ತೀರ್ಥಹಳ್ಳಿ ಬೆಂಕಿ ಕೇಸ್​ PART-3 | ಸಜೀವ ದಹನದ ರಹಸ್ಯ ಹಾಗೆಯೇ ಕಮರಿ ಹೋಯ್ತಾ. 307 ಕೇಸ್ ಆಗಬೇಕಿದ್ದ ಪ್ರಕರಣವು 174ಸಿ ಯಲ್ಲಿ ಅಂತ್ಯ ಕಾಣಲಿದೆಯಾ..JP ಬರೆಯುತ್ತಾರೆ

KARNATAKA NEWS/ ONLINE / Malenadu today/ Oct 11, 2023 SHIVAMOGGA NEWS

 ಕರಾಳ ರಾತ್ರಿಯ ಸಜೀವ ದಹನದ ರಹಸ್ಯ ಹಾಗೆಯೇ ಕಮರಿ ಹೋಯ್ತಾ. 307 ಕೇಸ್ ಆಗಬೇಕಿದ್ದ ಪ್ರಕರಣವು 174ಸಿ ಯಲ್ಲಿ ಅಂತ್ಯ ಕಾಣಲಿದೆಯಾ..

ತೀರ್ಥಹಳ್ಳಿ ತಾಲೂಕಿನ ಅರಳು ಸುರಳಿ ಬಳಿಯ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡು ಸಾವನ್ನಪ್ಪಿದ ಧಾರುಣ ಘಟನೆ 08-010-23 ರ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ.  ಆರ್ ಎಸ್ ಎಸ್ ಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಆ ಕುಟುಂಬದ ಸದಸ್ಯರೆಲ್ಲರೂ ಸಜೀವ ದಹನ ಮಾಡಿಕೊಳ್ಳುವಂತ ಕಠೋರ ನಿಲುವು ತಳೆದಿದ್ದಾರು ಏಕೆ ಎನ್ನುವ ಅನುಮಾನ ಈಗಲೂ ಎಲ್ಲರನ್ನ ಕಾಡುತ್ತಿದೆ.  ಸಧ್ಯಕ್ಕೆ ಇದಕ್ಕೆ ಉತ್ತರವಿಲ್ಲ. 

Malenadu Today Shivamogga

ಅರಳು ಸುರಳಿಯ ಕೆಕೋಡ್  ಗ್ರಾಮದಲ್ಲಿ ಒಂದು ಕುಟುಂಬದ ಮೂವರು ಸಜೀವ ದಹನಗೊಂಡಿರುವ ಘಟನೆಯಲ್ಲಿ  ಹಲವು ಪ್ರಶ್ನೆಗಳು ಕಾಡುತ್ತಿವೆ.  ಈ ಬೆಂಕಿ ದುರಂತದಲ್ಲಿ ಪತಿ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ಬೆಂಕಿಗೆ ಆಹುತಿಯಾಗಿದ್ದಾರೆ. ಇನ್ನೋರ್ವ ಪುತ್ರ ಭರತ್ (28) ಗಂಭೀರವಾಗಿ ಗಾಯಗೊಂಡಿದ್ದು ವಿಕ್ಟೋರಿಯ ಆಸ್ಪತ್ರೆಯಲ್ಲಿ ಕೊನೆ ಉಸಿರೆಳಿದಿದ್ದಾರೆ.ಒಂದು ಕುಟುಂಬವೇ ಸಾವಿನ ಮನೆ ಕದ ತಟ್ಟಿದೆ ಎಂದರೆ ಅವರಿಗಾಗಿರುವ ಮಾನಸಿಕ ಹಿಂಸೆ ನೋವು ಎಂತದ್ದು ಇರಬೇಕು..ಯಾರು ಇವರನ್ನು ಸಾವಿನ ಮನೆಗೆ ನೂಕುವಷ್ಟು ಪ್ರಚೋಧಿಸಿದ್ರು ಎಂಬುದು ಪ್ರಶ್ನೆಯಾಗಿ ಉಳಿದಿದೆ. 

Malenadu Today Shivamogga

ಘಟನೆ ನಡೆಯುವ ಮುನ್ನ ರಾತ್ರಿಯೆಲ್ಲಾ ಆ ಮನೆ ಬಳಿ ನಾಯಿಗಳು ಕೂಗುತ್ತಿದ್ದವು ಎಂದರೆ..ಆ ಮನೆಯ ಕುಟುಂಬದಲ್ಲಿ ಆಗುತ್ತಿದ್ದ ಜಗಳವಾದ್ರೂ ಏನು.? .ಯಾರಾದ್ರೂ ಆ ರಾತ್ರಿ ಮನೆಗೆ ಬಂದು ಕುಟುಂಬಸ್ಥರಿಗೆ ಅವಾಜ್ ಹಾಕಿದ್ರಾ? .ಇದರಿಂದ ಮಾನಸಿಕವಾಗಿ ನೊಂದು ನಾಗರತ್ನ ಹೃದಯಾಘಾತಕ್ಕೆ ಒಳಗಾದ್ರ? ಪತ್ನಿಯ ಸಾವನ್ನು ಕಣ್ಣಾರೆ ಕಂಡ  ಪತಿ ರಾಘವೇಂದ್ರ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ರಾ ? .ತಂದೆ ತಾಯಿ ಇಲ್ಲದೆ ಮೇಲೆ ನಾವೇಕೆ ಬದುಕಬೇಕು ಎಂದು ಪುತ್ರರಾದ ಶ್ರೀರಾಮ್ ಮತ್ತು ಭರತ್ ಸಾಯುವ ನಿರ್ಧಾರ ಮಾಡಿದ್ರಾ? ಅದರಂತೆ ಮನೆ ಪಕ್ಕದ ಕೋಣೆಯಲ್ಲಿ ತಂದೆ ತಾಯಿ ಶವ ಇಟ್ಟು ಸುತ್ತಲೂ ಕಟ್ಟಿಗೆ ಹಾಸಿಗೆ ಪೇಪರ್ ಹಾಕಿದ್ರಾ.? ತಂದೆ ತಾಯಿ ಸನಿಹವೇ ಶ್ರೀರಾಮ್ ನೇಣು ಹಾಕಿಕೊಂಡನಾ..? .ಮೂವರು ಸಾವನ್ನಪ್ಪಿದ ನಂತ್ರ ಭರತ ಬೆಂಕಿ ಹಚ್ಚಿ ತಾನು ಸಾಯಲು ಮುಂದಾದನಾ? ..ಬೆಂಕಿಯ ಕೆನ್ನಾಲಿಗೆಗೆ ಮೈಕೈ ಕಾಲು ಮುಖಕ್ಕೆ ಬೆಂಕಿ ತಗುಲಿದ್ದರಿಂದ ಹೆದರಿ ಓಡಿ ಬಂದನಾ? ಪ್ರಶ್ನೆಗಳಿಗೆ ಉತ್ತರ ಸ್ಪಷ್ಟವಾಗುತ್ತಿಲ್ಲ 

Malenadu Today Shivamogga

ಮೂಲಗಳ ಪ್ರಕಾರ ರಾಘವೇಂದ್ರ ಮತ್ತು ನಾಗರತ್ನ ದಂಪತಿ ಬೆಂಕಿಗೆ ಆಹುತಿಯಾಗುವ ಮೊದಲೇ ಸಾವನ್ನಪ್ಪಿದ್ದಾರೆ ಎಂಬುದು ವೈಜ್ಞಾನಿಕ ತನಿಖೆಯಿಂದ ಗೊತ್ತಾಗಿದೆ. ಇಬ್ಬರ ದೇಹದಲ್ಲೂ ಕಾರ್ಬನ್ ಮೊನಾಕ್ಸೈಡ್ ಅಂಶ ಕಂಡು ಬಂದಿಲ್ಲ. ಹಾಗಾದ್ರೆ ನಿಜಕ್ಕೂ ರಾಘವೇಂದ್ರ ಮತ್ತು ನಾಗರತ್ನ ದಂಪತಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ರಾ..ಅಥವಾ ಸಾವಿಗೆ ಬೇರೆ ಕಾರಣವಿದೆಯಾ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ. 

Malenadu Today Shivamogga

ಮೇಲ್ನೋಟಕ್ಕೆ  ರಾಘವೇಂದ್ರ ಸಹೋದರರ ನಡುವಿನ ಆಸ್ತಿಯ ವಿಚಾರ ಕುಟುಂಬದಲ್ಲಿ ಸಂಘರ್ಷ ಹುಟ್ಟು ಹಾಕಿದ್ದು ಸುಳ್ಳಲ್ಲ. ರಾಘವೇಂದ್ರ ಕುಟುಂಬದ ಸಾವಿಗೆ ಕಾರಣ ಯಾರು ಎಂಬುದು ಮಾತ್ರ ನಿಗೂಢ ರಹಸ್ಯವಾಗಿಯೇ ಉಳಿಯಲಿದೆಯಾ..ಪ್ರಭಾವಿ ಕುಟುಂಬದ ಸದಸ್ಯರ ಬೆನ್ನಿಗೆ ರಾಜಕೀಯ ಶಕ್ತಿಗಳು ಕೈ ಜೋಡಿಸಿದರೆ..ರಾಘವೇಂದ್ರ ಕುಟುಂಬದ ಸಾಮೂಹಿಕ ಆತ್ಮಹತ್ಯೆಗೆ ನಿಜಕ್ಕೂ ನ್ಯಾಯ ಸಿಗಲು ಸಾಧ್ಯವೇ..ಎಸ್ಪಿ ಮಿಥುನ್ ಕುಮಾರ್ ಈ ನಿಟ್ಟಿನಲ್ಲಿ ಪಾರದರ್ಶಕ ತನಿಖೆ ನಡೆಸುವ ವಿಶ್ವಾಸ ಮಲೆನಾಡ ಜನರಿಗಿದೆ

 

Malenadu Today Shivamogga


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Leave a Comment