KARNATAKA NEWS/ ONLINE / Malenadu today/ Sep 23, 2023 SHIVAMOGGA NEWS’
ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶೋತ್ಸವ ಬಂದೋಬಸ್ತ್ ಹೇಗಿದೆ. ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸರು ಕೈಗೊಂಡಿರುವ ಕ್ರಮಗಳೇನು? ಹೇಗೆ ಸಾಗಿ ಬಂತು ಇಲ್ಲಿಯವರೆಗಿನ ಗಣಪತಿ ಮೆರವಣಿಗೆಗಳು ಹೇಗೆ ಸಾಗಿ ಬಂದಿದೆ ಎಂಬಿತ್ಯಾದಿ ವಿಚಾರದ ಬಗ್ಗೆ ಶಿವಮೊಗ್ಗ ಜಿಲ್ಲೆ ಎಸ್ಪಿ ಮಿಥುನ್ ಕುಮಾರ್ ರವರು ಮಾತನಾಡಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಬಂದೋಬಸ್ತ್ ಬಗ್ಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇದುವರೆಗೂ ಶಾಂತಿಯುತವಾದ ಮೆರವಣಿಗೆಗಳು ನಡೆದಿದೆ. ಎರಡು ತಿಂಗಳಿನಿಂದ ಪೊಲೀಸ್ ಇಲಾಖೆ ಬಂದೋಬಸ್ತ್ ಗಾಗಿ ತಯಾರಿ ಮಾಡಿಕೊಂಡಿದೆ. ಶಾಂತಿಯುತ ಮೆರವಣಿಗಳಿಗಾಗಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಗಿಗುಡ್ಡದಲ್ಲಿ ನಾಳೆ 14 ಗಣಪತಿಗಳನ್ನು ವಿಸರ್ಜನೆ ಮಾಡಲಾಗುತ್ತಿದೆ. ರಿಪ್ಪನ್ ಪೇಟೆಯಲ್ಲಿ 28 ,ಸಾಗರದಲ್ಲಿ 28 29 ಭದ್ರಾವತಿಯಲ್ಲಿ 26 ಶಿವಮೊಗ್ಗದಲ್ಲಿ 28 ರಂದು ಮತ್ತು ಸೆಪ್ಟೆಂಬರ್ 30 ಗಣಪತಿ ವಿಸರ್ಜನೆಗಳಿವೆ.
ಇನ್ನೂ ಈದ್ ಮಿಲಾದ್ ಮೆರವಣಿಗೆಗಳು ಸಹ ಇದ್ದು, ಅಕ್ಟೋಬರ್ 1 ರಂದು ಶಿವಮೊಗ್ಗ ಭದ್ರಾವತಿಯಲ್ಲಿ ಸಾಗರದಲ್ಲಿ 2 ರಂದು ಹಾಗೂ ಶಿರಾಳಕೊಪ್ಪ 28 ತೀರ್ಥಹಳ್ಳಿ 28 ರಂದು ಮೆರವಣಿಗೆ ನಡೆಯಲಿದೆ.
ಗಣಪತಿ ವಿಸರ್ಜನೆ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆಗಳು ಹಿನ್ನೆಲೆಯಲ್ಲಿ ಈಗಾಗಲೇ ಸ್ಥಳೀಯ ಮುಖಂಡರ ವಿಶ್ವಾಸವನ್ನು ಗಳಿಸಲಾಗಿದ್ದು, ಶಾಂತಿಯುತ ಮೆರವಣಿಗೆಗಾಗಿ ಶಾಂತಿ ಸಭೆಯನ್ನ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಇದೇ ವೇಳೆ ಕಿಡಿಗೇಡಿಗಳಿಗೆ ಬಿಗಿಮಾಡುವ ಕ್ರಮ ಕೈಗೊಳ್ಳಲಾಗಿದೆ ಎಂದ ಎಸ್ಪಿ ವಾರಂಟ್ ಪೆಂಡಿಗ್ ಇದ್ದವರಿಗೆ ಜಾರಿ ಮಾಡಿದೆ, ಪ್ರಿವೆಂಟೀಸ್ ಕೇಸ್ಗಳನ್ನು ಹಾಕಲಾಗಿದೆ. ಕೆಲವರು ಜೈಲಿನಲ್ಲಿದ್ದಾರೆ, ಉಳಿದವರ ವಿರುದ್ಧ ಬೇರೆ ಬೇರೆ ಕ್ರಮ ಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳು
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?