ಬಳ್ಳಾರಿ ಜೈಲಿನಿಂದ ಲೋಕಿ ಬೆದರಿಕೆ ಕರೆ ಮತ್ತು ರೌಡಿ ಹಾವಳಿ! ADGP ಆರ್ ಹಿತೇಂದ್ರ ಹೇಳಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ ರೌಡಿಸಂ ಚಟುವಟಿಕೆಗಳ ಬಗ್ಗೆ ಎಡಿಜಿಪಿ ಆರ್ ಹಿತೇಂದ್ರರವರು ಮಾತನಾಡಿದ್ದಾರೆ. ಶಿವಮೊಗ್ಗ ಸೂಕ್ಷ್ಮ ಪ್ರದೇಶವಾಗಿದ್ದು, ರೌಡಿಸಂ ಇಲ್ಲಿ ಬಹಳ ವರ್ಷದಿಂದ ಸಕ್ರಿಯವಾಗಿದ್ದು, ಪ್ರತಿದಿನ ರೌಡಿ ನಿಗ್ರಹದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ನಿಗಾ ವಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

ಬಳ್ಳಾರಿ ಜೈಲಿನಿಂದ ರೌಡಿಯೊಬ್ಬ ಕರೆ ಮಾಡಿ ಬೆದರಿಕೆ ಸಂಬಂಧ ಮಲೆನಾಡು ಟುಡೆ ಸುದ್ದಿ ಮಾಡಿತ್ತು, (ಮಾರ್ಕೆಟ್ ಲೋಕಿ ಬೆದರಿಕೆ ಕರೆಗೆ ಮತ್ತೆ ಟ್ವಿಸ್ಟ್! ಹೊರಬಿತ್ತು ‘FACE ಮಾಡ್ತೀಯಾ’ ಆಡಿಯೋ! TT ತುಂಬಾ ಹುಡುಗರನ್ನ ಕಳುಹಿಸಿ ಹೆದರಿಸಿದ ದೃಶ್ಯ ) ಈ ವಿಚಾರದಲ್ಲಿ ಪೊಲೀಸ್ ಇಲಾಖೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿತ್ತು. ಇವತ್ತು ಇದರ ಬಗ್ಗೆ ಮಾತನಾಡಿದ ಆರ್ ಹಿತೇಂದ್ರರವರು, ಈ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೆಚ್ಚಿನ ಗಮನವನ್ನು ಹರಿಸಿದ್ದಾರೆ. ಅಲ್ಲದೆ ರೌಡಿ ಚಟುವಟಿಕೆಗೆ ಬಗ್ಗೆ ನಿರಂತರ ನಿಗಾವಹಿಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ. 

ಎನ್​ಐಐ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗಿದ್ದು, ವಿದೇಶದಿಂದ ಬಂದಿದ್ದ ಶಂಕಿತರನ್ನ ಬಂಧಿಸಿದ್ದರವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅಲ್ಲಿ ನಡೆದ ಮಾತುಕತೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗದು. ಆದರೆ ಎನ್​ಐಎ ಜೊತೆಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.  


ಇನ್ನಷ್ಟು ಸುದ್ದಿಗಳು 

 


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor