ಲಕ್ಷ್ಮೀದೇವಿ ವಿಗ್ರಹ ತೆಗೆದು ನಿಧಿಶೋಧ! ಇಬ್ಬರು ಆರೆಸ್ಟ್ ! ಏನಿದು ಪ್ರಕರಣ!

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಿಧಿಶೋಧಕ್ಕಾಗಿ ದೇವಿ ವಿಗ್ರಹವನ್ನು ಹಾನಿ ಮಾಡಿ ಭೂಮಿ ಅಗೆದ ಪ್ರಕರಣವೊಂದು ದಾಖಲಾಗಿದೆ. 

ಇಲ್ಲಿನ ಬೆಳಂದೂರಿನಲ್ಲಿ ನಡೆದ ಘಟನೆ ಇದಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. 

ನಡೆದಿದ್ದೇನು?

ಬೆಳಂದೂರು ಗ್ರಾಮದಲ್ಲಿ ಕಳೆದ ಮಂಗಳವಾರ ಈ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿರುವ ಲಕ್ಷ್ಮೀ ದೇವರ ಮೂರ್ತಿಯನ್ನು ಹಾನಿ ಮಾಡಿದ್ದ ಆರೋಪಿಗಳು ಭೂಮಿಯನ್ನು ಅಗೆದು ನಿಧಿಶೋಧ ನಡೆಸಿದ್ದರು. ಈ ಸಂಬಂಧ ಗ್ರಾಮ ಸುಧಾರಣೆ ಸಮಿತಿ ಪ್ರಮುಖರು ಆನಂದಪುರಂ ಪೊಲೀಸ್ ಸ್ಟೇಷನ್ಗೆ ದೂರು ನೀಡಿದ್ದರು. 

ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು,  ಕೇಶವ, ಸಾಜು, ಅಂತೋನಿ, ಜನಾರ್ಧನ, ಸೋಮಶೇಖರ ಎಂಬುವವರ ವಿರುದ್ಧ  ಕೇಸ್​  ದಾಖಲಿಸಿ , ಈ ಪೈಕಿ ಕೇಶವ, ಅಂತೋನಿಯನ್ನು  ಬಂಧಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

 


 

Leave a Comment