ಕೋರ್ಟ್​ನಲ್ಲಿ ಆದೇಶಕಾರರು, ಜವಾನರ ಹುದ್ದೆಗಳಿಗೆ ಅರ್ಜಿ ಆಹ್ವಾನ! SSLC ಓದಿದವರಿಗೂ ಇದೇ ಉದ್ಯೋವಕಾಶ!

This Article Written by / Malenadu Today / ಸೆಪ್ಟೆಂಬರ್ 21, 2023

ಕೋರ್ಟ್​ನಲ್ಲಿ ಆದೇಶಕಾರರು, ಜವಾನರ ಹುದ್ದೆಗಳಿಗೆ ಅರ್ಜಿ ಆಹ್ವಾನ! SSLC  ಓದಿದವರಿಗೂ ಇದೇ ಉದ್ಯೋವಕಾಶ!

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಹಾಸನ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ 11ಆದೇಶ – ಜಾರಿಕಾರರು ಹಾಗೂ ಜವಾರರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ . ಅರ್ಜಿಗಳನ್ನ ಹಾಸನ ಜಿಲ್ಲಾನ್ಯಾಯಾಲಯದ ವೆಬ್‌ಸೈಟ್ https://hassan.dcourts.gov.in/notice-category/recruitments/ ಸಲ್ಲಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆನ್‌ಲೈನ್‌ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕಃ03.10.2023 . ಅಭ್ಯರ್ಥಿಗಳು ಅರ್ಜಿಯಲ್ಲಿ ಚಾಲ್ತಿಯಲ್ಲಿರುವ ತಮ್ಮ ದೂರವಾಣಿ ಸಂಖ್ಯೆ ಹಾಗೂ ಇ- ಮೇಲ್‌ವಿರವನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಲಾಗಿದೆ. 

ಒಟ್ಟು ಆದೇಶಕಾರರು 11 ಹಾಗೂ 32 ಜವಾನರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಾಹನ ಚಾಲನಾ ಪರವಾನಗಿ ಇರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಮತ್ತು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಗರಿಷ್ಠ ವಯಸ್ಸನ್ನು ಮೀರಿರಕೂಡದು.

ನಿಗದಿತ ಶುಲ್ಕವನ್ನು ನ್ಯಾಯಾಲಯದ ವೆಬ್‌ಸೈಟ್ https://hassan.dcourts.gov.in/notice- category/recruitments/ನ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ State Bank Collect ಮೂಲಕ Online Payment through Net-Banking Credit-Card/Debit-Card/ Challan Download ಮೂಲಕ ಪಾವತಿಸತಕ್ಕದ್ದು. 

ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಲು ಇಚ್ಚಿ ಸದ ಅಭ್ಯರ್ಥಿಗಳು ಚಲನ್ ಪ್ರತಿಯನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಅದರ Print out ಅನ್ನು ಪಡೆದುಕೊಂಡು ಎಸ್.ಬಿ.ಐ ನ ಯಾವುದೇ ಶಾಖೆಗೆ ಹಾಜರುಪಡಿಸಿ ಶುಲ್ಕವನ್ನು ಪಾವತಿಸತಕ್ಕದ್ದು, 

ಇದನ್ನು ಹೊರತುಪಡಿಸಿ ಯಾವುದೇ ಡಿಮ್ಯಾಂಡ್ ಡ್ರಾಫ್ಟ್ ಪೋಸ್ಟಲ್ ಆರ್ಡರ್ ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ.

ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳು ON-LINE ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳತಕ್ಕದ್ದು ಎಂದು ತಿಳಿಸಲಾಗಿದೆ. ಪೂರ್ತಿ ವಿವರಗಳಿಗಾಗಿ ಪ್ರಕಟಣೆಯ ವಿವರ ಇಲ್ಲಿದೆನೋಡಿ

Malenadu Today Shivamogga

Malenadu Today Shivamogga

Malenadu Today Shivamogga

Malenadu Today Shivamogga

Malenadu Today Shivamogga

Malenadu Today Shivamogga

Malenadu Today Shivamogga

Malenadu Today Shivamogga

Malenadu Today Shivamogga

Malenadu Today Shivamogga

Malenadu Today Shivamogga

Malenadu Today Shivamogga


ಇನ್ನಷ್ಟು ಸುದ್ದಿಗಳು 

 


 

ಮುಂದಿನ ಸುದ್ದಿ ಒದಿ

Leave a Comment