KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’
ಹಬ್ಬಗಳ ಬಂದೋಬಸ್ತ್ ಶಿವಮೊಗ್ಗ ನಗರದಲ್ಲಿ ಟೈಟಾಗಿದೆ. ಎಲ್ಲೆಡೆ ಪೊಲೀಸರು ಡ್ಯೂಟಿ ಮಾಡುತ್ತಿದ್ದಾರೆ. ಇದರ ನಡುವೆ ಕಳ್ಳರು ಕೈಚಳಕ ತೋರುತ್ತಿದ್ದಾರೆ. ಪೂರಕವೆಂಬಂತೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟಷನ್ (Doddapete Police Station) ವ್ಯಾಪ್ತಿಯಲ್ಲಿ ಸರಗಳ್ಳನ ನಡೆದಿದೆ.
ಕಳೆದ 18 ನೇ ತಾರೀಖು ನಡೆದ ಘಟನೆ ಬಗ್ಗೆ ತಡವಾಗಿ ದೂರು ದಾಖಲಾಗಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಘಟನೆ ನಡೆದ ದಿನ ನಗರದ ದುರ್ಗಿಗುಡಿಯಲ್ಲಿ ಮಹಿಳೆಯೊಬ್ಬರು ಗಣೇಶ ಹಬ್ಬದ ಗಡಿಬಿಡಿಯಲ್ಲಿದ್ದರು. ಹಬ್ಬದ ದಿನ ಗಣೇಶನನ್ನ ಪ್ರತಿಷ್ಟಾಪನೆ ಮಾಡಿದ್ದ ಪರಿಚಯಸ್ಥರ ಮನೆಯೊಂದಕ್ಕೆ ಅರಶಿನ ಕುಂಕುಮಕ್ಕಾಗಿ ಹೋಗಿ ವಾಪಸ್ ಮನೆಗೆ ಬರುತ್ತಿದ್ದರು. ಈ ವೇಳೆ ಎದುರುಬದಿಯಿಂದ ನಡೆದುಕೊಂಡ ಬಂದ ವ್ಯಕ್ತಿಯೊಬ್ಬ ಕುತ್ತಿಗೆಗೆ ಕೈಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಅಲ್ಲಿಯೇ ಇದ್ದ ಕನ್ಸರ್ ವೆನ್ಸಿಯಿಂದ ಓಡಿ ಪರಾರಿಯಾಗಿದ್ದಾನೆ.
ಈ ಘಟನೆಯಲ್ಲಿ ಮಹಿಳೆಯ ಒಂದು ಲಕ್ಷದ 20 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ. ಬೈಕ್ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದವರ ನಡುವೆ , ನಡೆದುಕೊಂಡು ಬಂದು ಸರಕದ್ದು ವ್ಯಕ್ತಿಯೊಬ್ಬ ಪರಾರಿಯಾಗಿರುವುದು ಪ್ರಕರಣ ವಿಭಿನ್ನವಾಗಿ ಕಾಣುವಂತೆ ಮಾಡಿದೆ.
ಇನ್ನಷ್ಟು ಸುದ್ದಿಗಳು
ಹಬ್ಬದ ದಿನ ತವರು ಮನೆಯಿಂದ ಗಂಡನ ಮನೆಗೆ ಹೋದ ಬೆನ್ನಲ್ಲೆ ಯುವತಿ ಸಾವು! ಮದುವೆಯಾಗಿ ಏಳು ತಿಂಗಳಿನಲ್ಲಿ ನಡೆದಿದ್ದೇನು?
ಚೈತ್ರಾ ಕುಂದಾಪುರ ವಿರುದ್ಧ ಟಿಕೆಟ್ ಡೀಲ್ ಕೇಸ್/ ಶಿವಮೊಗ್ಗ ನಗರದಲ್ಲಿ ಆರೋಪಿ ಮಹಜರ್! ಯಾರೆಲ್ಲಾ ಬಂದಿದ್ರು!?