KARNATAKA NEWS/ ONLINE / Malenadu today/ Sep 18, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿದೆ. ಭಧ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಸುಮಾರು 30 ವರ್ಷದ ರೂಪ ಮೃತ ಮಹಿಳೆ, ಈಕೆ ಚಿತ್ರುದರ್ಗ ಜಿಲ್ಲೆ ಭರಮಸಾಗರದ ನಿವಾಸಿ ಎಂದು ತಿಳಿದುಬಂದಿದೆ. ಭದ್ರಾವತಿಯಲ್ಲಿ ನೀಲಿಗಿರಿ ಮರಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದ ಈಕೆಯ ಪತಿಯು ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದ.
ಈ ನಡುವೆ ಭದ್ರಾವತಿಯ ವ್ಯಕ್ತಿಯ ಜೊತೆ ಲೀವಿಂಗ್ ರಿಲೆಷನ್ನಲ್ಲಿದ್ದಳು. ಆತನಿಗೂ ಮದುವೆಯಾಗಿತ್ತು. ಆತನ ಪತ್ನಿ ಕೆಲವರ್ಷಗಳ ಹಿಂದೆ ಸಾವನ್ನಪ್ಪಿದ್ದಳು.
ಚೆನ್ನಾಗಿ ಇದ್ದ ಇಬ್ಬರ ನಡುವೆ ನಿನ್ನೆ ರಾತ್ರಿ ಜಗಳವಾಗಿದ್ದು ಹೊಡೆದಾಟವಾಗಿದೆ. ಈ ವೇಳೆ ಆರೋಪಿ ಕಾಲಿನಿಂದ ಒದ್ದು ರೂಪಾಳ ಕತ್ತುಹಿಸುಕಿ ಕೊಲೆ ಮಾಡಿದ್ದಾರೆ.
ಪ್ರಕರಣ ಸಂಬಂಧ ಕೇಸ್ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ಕೊಲೆ ಮಾಡಿರುವುದನ್ನ ಒಪ್ಪಿಕೊಂಡಿದ್ದಾನೆ.
ಇನ್ನಷ್ಟು ಸುದ್ದಿಗಳು
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ