KARNATAKA NEWS/ ONLINE / Malenadu today/ Sep 11, 2023 SHIVAMOGGA NEWS
ರಸ್ತೆಯಲ್ಲಿ ಸಾಗುತ್ತಿದ್ದ ಡಸ್ಟರ್ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬಗ್ಗೆ ನಿನ್ನೆ ವರದಿಯಾಗಿದೆ. ಶಿವಮೊಗ್ಗ ಸಿಟಿಯ (Shivamogga news) ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ.
ಎನಾಯ್ತು?
ನಿನ್ನೆ ಮಧ್ಯಾಹ್ನದ ಹೊತ್ತಿಗೆ ಭದ್ರಾವತಿ ತಾಲ್ಲೂಕಿನ ಸಿದ್ದಾಪುರ ಮೂಲದ ಕಿರಣ್ ಕುಮಾರ್ ಎಂಬವರು ಮುದ್ದಿನಕೊಪ್ಪದ ಬಳಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅವರ ಕಾರಿನ ಇಂಜಿನ್ ಭಾಗದಲ್ಲಿ ಹೊಗೆ ಕಾಣಿಸಿದೆ. ತಕ್ಷಣವೇ ಕಾರು ಬದಿಗೆ ನಿಲ್ಲಿಸಿ ಬ್ಯಾನೆಟ್ ಓಪನ್ ಮಾಡಿ ನೋಡಿದ್ದಾರೆ.
ಬ್ಯಾನೆಟ್ ಓಪನ್ ಆಗುತ್ತಲೇ ಇಂಜಿನ್ ಭಾಗದಲ್ಲಿ ಬೆಂಕಿ ಭುಗಿಲೆದ್ದಿದೆ. ಅಲ್ಲದೆ ಇಡೀ ಕಾರನ್ನು ಬೆಂಕಿ ಆವರಿಸಿ ಕಾರು ಸುಟ್ಟು ಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ (Shivamogga Today Live News) ಬೆಂಕಿಯನ್ನು ನಂದಿಸಿದರು. ಅಷ್ಟರಲ್ಲಿ ಕಾರಿನ ಬಹುಭಾಗ ಸುಟ್ಟು ಕರಕಲಾಗಿತ್ತು.
ಇನ್ನಷ್ಟು ಸುದ್ದಿಗಳು
ಬಾರ್ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್ ರೋಡ್ನಲ್ಲಿ ನಿನ್ನೆ ನಡೆದಿದ್ದೇನು?
ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!