ಪೋಷಕರೇ ಎಚ್ಚರ! ಮಕ್ಕಳ ತಪ್ಪಿಗೆ ಕಟ್ಟಬೇಕಾಗುತ್ತದೆ 25 ಸಾವಿರ ರೂಪಾಯಿ ದಂಡ! ತಪ್ಪಿದ್ರೆ 3 ವರ್ಷ ಶಿಕ್ಷೆ ! ಶಿವಮೊಗ್ಗದಲ್ಲಿಯೇ ಹೆಚ್ಚು ಈ ಪ್ರಕರಣ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 9, 2023 SHIVAMOGGA NEWS  

ಮಕ್ಕಳ ಕೈಗೆ ಬೈಕ್​ ಓಡಿಸಲು ಅವಕಾಶವಿಲ್ಲ. ಹಾಗಿದ್ರೂ ಶಿವಮೊಗ್ಗದಲ್ಲಿ ಮಕ್ಕಳು ಬೈಕ್​ ಓಡಿಸುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದರ ಪರಿಣಾಮವಾಗಿ ತಂದೆ ತಾಯಿಗೆ ಪೊಲೀಸ್ ಇಲಾಖೆಯಿಂದ ದಂಡ ವಿಧಿಸುವ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಸಾಕ್ಷಿ ಎಂಬಂತೆ, ಶಿವಮೊಗ್ಗ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಬಳಿಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಬೈಕ್ ಚಲಾಯಿಸಿದ ಪರಿಣಾಮವಾಗಿ ಅವರ ತಂದೆಗೆ ಕೋರ್ಟ್​ 25 ಸಾವಿರ ರೂಪಾಯಿ ಫೈನ್ ಹಾಕಿದೆ. 

ಏನಿದು ಪ್ರಕರಣ

17 ವರ್ಷದ ಬಾಲಕನ ತಂದೆಗೆ ಶಿವಮೊಗ್ಗ ಜೆಎಂಎಫ್‌ಸಿ ನ್ಯಾಯಾಲಯದ  (Shimoga JMFC Court)4ನೇ ಎಸಿಜೆ ನ್ಯಾಯಾಧೀಶರು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

ಕಳೆದ ಆಗಸ್ಟ್​ 12ರಂದು ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಪಶ್ಚಿಮ ಠಾಣೆ ಪಿಎಸ್‌ಐ ತಿರುಮಲೇಶ್  ವಾಹನಗಳ ತಪಾಸಣೆ ಕೈಗೊಂಡಿದ್ದರು. ಈ  ವೇಳೆ ಅಪ್ರಾಪ್ತ ಬೈಕ್‌ ಚಲಾಯಿಸುತ್ತಿರುವುದನ್ನು ಗಮನಿಸಿದ್ದಾರೆ. ಆತನ ಬೈಕ್​ ತಡೆದು ಪರಿಶೀಲನೆ ನಡೆಸಿದ್ದಾರೆ. ಆತನ ಬಳಿ ಯಾವುದೇ ದಾಖಲೆ ಇಲ್ಲದಿದ್ದನ್ನು ಗಮನಿಸಿದ ಪೊಲೀಸರು ಇನ್ನಷ್ಟು ವಿವರಗಳನ್ನು ಪಡೆದಾಗ, ಬೈಕ್​ ಓಡಿಸುತ್ತಿದ್ದವನು ಅಪ್ರಾಪ್ತ ವಯಸ್ಸಿನವನು ಎಂಬುದು ಗೊತ್ತಾಗಿದೆ.  

ಅಪ್ರಾಪ್ತನಿಗೆ ಬೈಕ್ ಓಡಿಸಲು ಅವಕಾಶ ನೀಡಿದ ಆತನ ತಂದೆ ವಿರುದ್ಧ ಪಶ್ಚಿಮ ಸಂಚಾರ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿ, ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದರು.  ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು. ಕಾನೂನಿನ ಪ್ರಕಾರ ಅಪ್ರಾಪ್ತರಿಗೆ ದ್ವಿಚಕ್ರ ವಾಹನ  ಚಾಲನೆ ಮಾಡಲು ಅವಕಾಶ ನೀಡಿರುವುದು ತಪ್ಪು ಎಂದು ತೀರ್ಪು ನೀಡಿ, ಅಪ್ರಾಪ್ತನ ತಂದೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. 

ಕಾನೂನು ಏನು ಹೇಳುತ್ತದೆ

ಕಾನೂನಿನ ಪ್ರಕಾರ,18  ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬೈಕ್ ಚಾಲನೆ ಮಾಡಲು ಅವಕಾಶ ನೀಡುವುದು ತಪ್ಪು, ಇದಕ್ಕಾಗಿ ಅಂತಹ ಬಾಲಕರ ತಂದೆ-ತಾಯಿಗೆ 25 ಸಾವಿರ ರೂಪಾಯಿ ದಂಡ ವಿಧಿಸಬಹುದು ಹಾಗೂ  ದಂಡ ಕಟ್ಟಲು ತಪ್ಪಿದಲ್ಲಿ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದು 

ಇನ್ನಷ್ಟು ಸುದ್ದಿಗಳು 

Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor