KARNATAKA NEWS/ ONLINE / Malenadu today/ Sep 3, 2023 SHIVAMOGGA NEWS
ಶಿಕಾರಿಗೆ ತಂದಿದ್ದ ಸ್ಪೋಟಕ ವಶ
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೆಚ್ ಕೆ ಜಂಕ್ಷನ್ ಬಳಿ ಸ್ಫೋಟಕ ಸಿದ್ದಪಡಿಸಿ ಶಿಕಾರಿಗೆ ಸಿದ್ದತೆ ನಡೆಸಿದ್ದರ ಸಂಬಂಧ ಸುಮೋಟೋ ಕೇಸ್ವೊಂದು ದಾಖಲಾಗಿದೆ. ಆ. 30 ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿದ್ದು, ಗಸ್ತು ತಿರುಗುತ್ತಿದ್ದ ವೇಳೆ ಪ್ರಕರಣ ಬಯಲಾಗಿದೆ. ಹೆಚ್ಕೆ ಜಂಕ್ಷನ್ ಬಳಿಯಲ್ಲಿ ಪೊಲೀಸರ ವೆಹಿಕಲ್ ನೋಡುತ್ತಿದ್ದ ಇಬ್ಬರು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಅನುಮಾನಗೊಂಡು ಅವರನ್ನ ಬೆನ್ನಟ್ಟಿ ಒರ್ವರನ್ನ ಹಿಡಿದ ಪೊಲೀಸರಿಗೆ ಅವರು ಶಿಕಾರಿಗೆ ಹೊರಟ್ಟಿದ್ದು ತಿಳಿದುಬಂದಿದೆ. ಆತನನ್ನು ಬಂಧಿಸಿದ ಆತನ ಬಳಿಯಲ್ಲಿದ್ದ ಸ್ಫೋಟಕವನ್ನು ವಶಕ್ಕೆ ಪಡೆದಿದ್ದಾರೆ.
6 ವರ್ಷದ ಬಾಲಕಿ ಮೇಲೆ ನಾಯಿ ದಾಳಿ
ಶಿವಮೊಗ್ಗ ಜಿಲ್ಲೆ ಬಿ. ಬೀರನಹಳ್ಳಿ ಪಂಚಾಯ್ತಿಯ ಹೊಳೆಬೆಳಗಲು ಗ್ರಾಮದಲ್ಲಿ ಆರುವರ್ಷದ ಪುಟ್ಟ ಮಗುವಿನ ಮೇಲೆ ಹುಚ್ಚು ನಾಯಿ ದಾಳಿ ನಡೆಸಿ ಗಾಯಗೊಳಿಸಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಸ್ಥಳಿಯ ನಿವಾಸಿ ಸಾಕಿದ್ದ ನಾಯಿಯೊಂದು ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಲು ಆರಂಭಿಸಿದೆ. ಒಟ್ಟು ಐವರ ಮೇಲೆ ದಾಳಿ ನಡೆಸಿದೆ. ಇನ್ನೂ ಸ್ಕೂಲ್ವ್ಯಾನ್ನಿಂದ ಇಳಿದು ಮನೆಗೆ ಹೋಗುತ್ತಿದ್ದಾಗ, ಬಾಲಕಿ ನಾಯಿಯ ದಾಳಿಗೆ ತುತ್ತಾಗಿದ್ದಾಳೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಗುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇನ್ನಷ್ಟು ಸುದ್ದಿಗಳು
SHIVAMOGGA AIRPORT ನಿಂದ ವಿಮಾನಯಾನ! ಪ್ರತಿ ಟಿಕೆಟ್ಗೆ 500 ರೂಪಾಯಿ ಸಬ್ಸಿಡಿ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಇಂಡಿಗೋ ಪ್ಲೈಟ್