KARNATAKA NEWS/ ONLINE / Malenadu today/ Aug 28, 2023 SHIVAMOGGA NEWS
ಶಿವಮೊಗ್ಗದ ಪ್ರೀಡಂ ಪಾರ್ಕ್ ಬಳಿಯಲ್ಲಿ ಆತ್ಮಹತ್ಯೆಗೆ ಯತ್ನಿಸ್ತಿದ್ದ ಯುವತಿಯ ಜೀವವನ್ನು ಇಬ್ಬರು ಪೊಲೀಸ್ ಸಿಬ್ಬಂದಿ ಉಳಿಸಿದ್ದಾರೆ.
ನಡೆದಿದ್ದೇನು?
ಇವತ್ತ ಅಂದರೆ, ದಿನಾಂಕಃ 28-08-2023 ರಂದು ಮಧ್ಯಾಹ್ನ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ERSS ವಾಹನದ ಸಿಬ್ಬಂಧಿಗಳಾದ ರಾಘವೇಂದ್ರ, ಚನ್ನಕೇಶವ ERV ವಾಹನದಲ್ಲಿ ಪ್ರೀಡಂಪಾರ್ಕ್ ಬಳಿಯಲ್ಲಿ ಗಸ್ತು ನಡೆಸ್ತಿದ್ರು. ಈ ವೇಳೇ ಅಲ್ಲಿ ಅಪ್ರಾಪ್ತೆಯೊಬ್ಬಳು ಗಾಜಿನಿಂದ ಕೈಯನ್ನು ಕೊಯ್ದುಕೊಳ್ಳುವುದನ್ನ ಕಂಡಿದ್ದಾರೆ. ತಕ್ಷಣವೇ ಆಕೆಯನ್ನು ತಡೆದು ರಕ್ಷಿಸಿದ ಸಿಬ್ಬಂದಿ ತಮ್ಮ ಇಆರ್ವಿ ವಾಹನದಲ್ಲಿಯೇ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು, ಸೂಕ್ತ ಚಿಕಿತ್ಸೆ ಕೊಡಿಸಿದ್ಧಾರೆ.
ಅಪ್ರಾಪ್ತೆಯು ಯಾವುದೋ ಒಂದು ಕಾರಣಕ್ಕೆ ಒಡೆದ ಗಾಜಿನ ಚೂರಿನಿಂದ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಅದೇ ಸಮಯಕ್ಕೆ ಅಲ್ಲಿದ್ದ ಸಿಬ್ಬಂದಿ ಆಕೆಯ ಜೀವ ಉಳಿಸಿದ್ಧಾರೆ. ERSS ಸಿಬ್ಬಂಧಿಗಳ ಈ ಮಾನವೀಯ ಕೆಲಸಕ್ಕೆ ಎಸ್ಪಿ ಮಿಥುನ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿ ಇಬ್ಬರು ಸಿಬ್ಬಂದಿಯನ್ನು ಅಭಿನಂದಿಸಿದ್ಧಾರೆ.
ಇನ್ನಷ್ಟು ಸುದ್ದಿಗಳು
ಪ್ರೀತಿ ಪೆಟ್ಟು ಹುಷಾರು! ಪ್ರೇಮಿಸಿದ ಯುವಕನನ್ನ ಕೂಡಿ ಹಾಕಿ ಹೊಡೆದ ಹುಡುಗಿ ಕಡೆಯವರು! ದಾಖಲಾಯ್ತು ಎಫ್ಐಆರ್!
ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?