ಸೊಂಡಿಲಿಲ್ಲದ ಆನೆ ಪ್ರತ್ಯಕ್ಷ! ಹಾವಿಗೆ ಮುತ್ತಿಕ್ಕಿ ನೆಕ್ಕಿದ ಹಸು! ಅಂಗಡಿಗೆ ಬಾಗಿಲು ಒಡೆದು ಬಾಳೆಗೊನೆ ಕದ್ದ ಸಲಗ! ಪ್ರಾಣಿ ವೈಚಿತ್ರ್ಯದ ವೈರಲ್​ ವಿಡಿಯೋ!

Malenadu Today

KARNATAKA NEWS/ ONLINE / Malenadu today/ Aug 5, 2023 SHIVAMOGGA NEWS 

ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಎರಡು ದಿನಗಳಲ್ಲಿ  ಮೂರು ವಿಶಿಷ್ಟ ವಿಡಿಯೋಗಳು ಹರಿದಾಡುತ್ತಿದ್ದು ವೈರಲ್ ಆಗುತ್ತಿದೆ. ಈ ಪೈಕಿ ಒಂದು ವಿಡಿಯೋ ಆನೆಮರಿಯೊಂದಕ್ಕೆ ಸಂಬಂಧಿಸಿದ್ದಾಗಿದೆ. ಕೇರಳದಲ್ಲಿ ಅಚ್ಚರಿ ಎಂಬಂತೆ ಸೊಂಡಿಲಿಲ್ಲದ ಆನೆಮರಿಯೊಂದು ಪತ್ತೆಯಾಗಿದೆ  ಅತಿರಪ್ಪಿಳ್ಳಿಯ ದಟ್ಟ ಅರಣ್ಯದಲ್ಲಿ ಇಂತಹದ್ದೊಂದು ಆನೆ ಮರಿ ಆನೆಗಳ ಹಿಂಡಿನ ನಡುವೆ ಕಾಣಿಸಿದೆ ಎಂಬುದಾಗಿ ವರದಿಯಾಗಿದೆ. ರಾಷ್ಟ್ರೀಯ ಮಾಧ್ಯಮಗಳೇ ಈ ಬಗ್ಗೆ ವರದಿ ಮಾಡಿವೆ.  ಕೇರಳ ಮತ್ತು ತಮಿಳುನಾಡು ನಡುವೆ ಸಂಚರಿಸುವ ಆನೆಗಳ ಹಿಂಡಿನ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳು ಈ ಅಪೂರ್ವ ದೃಶ್ಯ ಕಂಡು ಬೆಚ್ಚಿಬಿದ್ದಿದ್ಧಾರೆ. 

ಮೊಸಳೆ ದಾಳಿಯಿಂದ ಅಥವಾ ಲೋಹದ ತಂತಿಗಳಿಂದ ಹಾನಿಗೊಳಗಾಗಿ  ಆನೆಮರಿಯ ಸೊಂಡಿಲು ಕಟ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಸೊಂಡಿಲು ಇಲ್ಲದೆ ಬದುಕುಳಿದ ಮೊದಲ ಆನೆ ಇದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.  ಆನೆಗಳು ತಿನ್ನಲು, ನೀರು ಕುಡಿಯಲು ಮತ್ತು ಇತರೇ ಆನೆಗಳೊಂದಿಗೆ ಬೆರೆಯಲು ಪ್ರಮುಖವಾದ ಸೊಂಡಿಲು ಇಲ್ಲದಿರುವುದು ಮರಿಯಾನೆಯ  ಉಳಿವಿನ ಬಗ್ಗೆ ಆತಂಕವನ್ನು ಉಂಟುಮಾಡುತ್ತಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ಧಾರೆ. ಆದರೆ, ಮರಿಯಾನೆ ತನ್ನ ವಯಸ್ಸಿಗೆ ಆರೋಗ್ಯವಾಗಿ ಕಾಣಿಸಿಕೊಂಡಿದೆ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯ ಕಳೆದ ಎಪ್ರಿಲ್​ನಲ್ಲಿ ವರದಿಯಾಗಿದ್ದ ಈ ಸುದ್ದಿಯು, ಇದೀಗ ರಾಷ್ಟ್ರೀ ಮಾಧ್ಯಮವೊಂದರ ವರದಿ ಬೆನ್ನಲ್ಲೆ ವೈರಲ್ ಆಗಿದೆ

ಹಾವಿಗೆ ಮುತ್ತುಕೊಟ್ಟು ಮುಖ ನೆಕ್ಕಿದ ಹಸು

ಹೌದು ಹಸುವೊಂದು ಹಾವೊಂದನ್ನ ಪ್ರೀತಿಯಿಂದ ಮುತ್ತಿಕ್ಕಿ, ಮುಖ ನೆಕ್ಕಿದ ವಿಡಿಯೋ ಟ್ವಿಟ್ಟರ್ ಮೀಡಿಯಾದಲ್ಲಿ ವೈರಲ್​ ಆಗಿದೆ. ವಿಡಿಯೊವನ್ನ ಐಎಫ್​ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಟ್ವಿಟ್ಟರ್​ನಲ್ಲಿ ಷೇರ್ ಮಾಡಿದ್ದು, ನಂಬಿಕಯನ್ನ ಗಳಿಸುವುದು ಸುಲಭದ ವಿಷಯವಲ್ಲ ಎಂದಿದ್ದಾರೆ. ವಿಡಿಯೋದಲ್ಲಿ ಹಾವನ್ನೆ ದಿಟ್ಟಿಸಿ ನೋಡುವ ಹಸುವು, ನಂತರ ಹಾವಿನ ನೆತ್ತಿಗೆ ಮುತ್ತಿಕ್ಕುತ್ತಿದೆ. ಆನಂತರ ಹಾವಿನ ಮುಖ ನೆಕ್ಕುತ್ತದೆ. ಹಾವು ಏನನ್ನು ಸಹ ಮಾಡುವುದಿಲ್ಲ. ಈ ದೃಶ್ಯ ಇದೀಗ ವೈರಲ್ ಆಗಿದೆ. 

ಅಂಗಡಿ ಡೋರ್ ಒಡೆದು ಬಾಳಗೊನೆ ಕದ್ದ ಆನೆ

ಇನ್ನೊಂದೆಡೆ , ಚಾಮರಾಜನಗರ ತಾಲ್ಲೂಕಿನ ಗಡಿ ಭಾಗ, ತಮಿಳುನಾಡಿನ ಹಾಸನೂರಿನಲ್ಲಿ ಕಾಡಾನೆಯೊಂದು ದಿನಸಿ ಮಳಿಗೆಯೊಂದರ ಬಾಗಿಲು ಮುರಿದು ಬಾಳೆಗೊನೆ ತಿಂದಿದೆ. ಈ ದೃಶ್ಯವು ಅಲ್ಲಿದ್ದವರ ಮೊಬೈಲ್​ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಆನೆಯನ್ನು ಎಷ್ಟೆ ಬೆರಸಿದರೂ ಅದು ಬಾಳೆಗೊನೆ ಕಿತ್ತು ತೆಗೆದುಕೊಂಡು ಹೋಗಿದೆ. ಸದ್ಯ  ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತೀರ್ಥಹಳ್ಳಿಯಲ್ಲಿ ಮತ್ತೆ ಶಿಕಾರಿ ಶೂಟ್​! ಶಿಕ್ಷಣಾಧಿಕಾರಿ ತೋಟದಲ್ಲಿ ಮಂಡಿ ಚಿಪ್ಪು ಎಗರಿಸಿದ್ದು ಯಾರು? ಕಾಂತರಾಜ್​ ಕೇಸ್​ಗೂ ಇದಕ್ಕೂ ಇದ್ಯಾ ಲಿಂಕ್?

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

Share This Article