ಭದ್ರಾವತಿ ರೌಡಿ ಮುಜ್ಜು ಕೊಲೆ ಕೇಸ್ ! ಐವರು ಆರೋಪಿಗಳು ಅರೆಸ್ಟ್ ! ಹತ್ಯೆಗೆ ಕಾರಣವಾಗಿದ್ದೇನು?

KARNATAKA NEWS/ ONLINE / Malenadu today/ Jul 22, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಭದ್ರಾವತಿ (Bhadravati) ತಾಲ್ಲೂಕಿನಲ್ಲಿ ನಡೆದಿದ್ದ ರೌಡಿ ಮುಜ್ಜು  ಅಲಿಯಾಸ್ ಮುಜಾಹೀದ್ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳನ್ನು ಕಡೂರಿನಿಂದ ಬಂಧಿಸಿ ಕರೆತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದು, ಹಳೇಯ ದ್ವೇಷ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸಂತೋಷ್​ ಹಾಗೂ ಸುರೇಶ್ ಪ್ರಮುಖ ಆರೋಪಿಗಳು ಎನ್ನಲಾಗಿದ್ದು, ಈ ಸಂಬಂಧ ಇನ್ನಷ್ಟು ಮಾಹಿತಿ ಹೊರಬರಬೇಕಿದೆ. 

2019 ರಲ್ಲಿ ರಮೇಶ್​ ಎಂಬಾತನ ಕೊಲೆ ನಡೆದಿತ್ತು, ರೌಡಿ ಮುಜ್ಜು ರಮೇಶ್​ನಿಗೆ ಡ್ರ್ಯಾಗರ್​ನಿಂದ ಚುಚ್ಚಿ ಸಂತೋಷ್ ಹಾಗೂ ಸುರೇಶ್​ ಮೇಲೂ ಅಟ್ಯಾಕ್​ ಮಾಡಿದ್ದ. ಈ ಘಟನೆ ನಂತರ ಮುಜ್ಜು ಜೈಲಿಗೆ ಹೋಗಿ ಬಂದಿದ್ದ. ಇದೇ ವಿಚಾರದಲ್ಲಿ ಮುಜ್ಜುವನ್ನ ಕೊಲೆ ಮಾಡಲಾಗಿದೆ ಎಂಬ ಮಾಹಿತಿಯಿದೆ. ಇನ್ನೂ  ಘಟನೆ ನಡೆದ ದಿನ ತನ್ನ ಎರಡನೇ ಹೆಂಡತಿಯ ಮನೆಗೆ ಮುಜ್ಜು ತಡರಾತ್ರಿ ಹೊರಟಿದ್ದ, ಆಕೆಯ ಮನೆಯ ಗೇಟಿನ ಬಳಿಯೇ ಕಾದಿದ್ದ ಹಂತಕರು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ಧರು. 

ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ (Shikaripura Rural Police Station) ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಸಂಬಂಧ  3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ (3rd Additional District and Sessions Court) ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಆರೋಪ ಸಾಬೀತಾದ ಹಿನ್ನಲ್ಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 

ಏನಿದು ಪ್ರಕರಣ?

ದಿನಾಂಕಃ 09-10-2021 ರಂದು ಕಪ್ಪನಹಳ್ಳಿ ಗ್ರಾಮದ ಅನಿಲ ಎಂಬಾತ ಅದೇ ಗ್ರಾಮದ ವಾಸಿ 35 ವರ್ಷದ ಮಹಿಳೆಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದ. ಈ ಸಂಬಂಧ  ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿತ್ತು. ಆನಂತರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​ 

 

 

Leave a Comment