ಶಿವಮೊಗ್ಗ ನಗರದ ಐಬಿ ಸರ್ಕಲ್​ ಬಳಿ ರಾತ್ರಿ ಭೀಕರ ಅಪಘಾತ! ಡಿವೈಡರ್​ಗೆ ಕಾರು ಡಿಕ್ಕಿ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jul 19, 2023 SHIVAMOGGA NEWS

ಶಿವಮೊಗ್ಗ /  ನಗರದ ಐಬಿ ಸರ್ಕಲ್​ ಬಳಿಯಲ್ಲಿ ನಿನ್ನೆ ತಡರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದೆ. ಕುವೆಂಪು ರೋಡ್ ಕಡೆಯಿಂದ ಬರುತ್ತಿದ್ದ ಟೊಯೆಟಾ ಕಂಪನಿಯ ಫಾರ್ಚುನರ್​ ವಾಹನವೊಂದು, ಸರ್ಕಲ್​ನಲ್ಲಿ ಡಿವೈಡರ್​ಗೆ ಡಿಕ್ಕಿಯಾಗಿ ನುಜ್ಜುಗುಜ್ಜಾಗಿದೆ. ಅಲ್ಲದೆ ಸರ್ಕಲ್​ ಬಳಿಯಲ್ಲಿರುವ ಡಿವೈಡರ್​ಗಳಿಗೆ ಹಾನಿಯಾಗಿದೆ. 

ವೈದ್ಯರೊಬ್ಬರಿಗೆ ಗಾಯ

ಇನ್ನೂ ಕಾರನ್ನು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಚಲಾಯಿಸುತ್ತಿದ್ದರು ಎಂಬ ಮಾಹಿತಿಯಿದ್ದು, ಅವರಿಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.  ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಟೋ ವಾಹನವನ್ನು ಕರೆಸಿಕೊಂಡು ಆಕ್ಸಿಡೆಂಟ್ ಆದ ಟೊಯೆಟಾ ಕಂಪನಿಯ ಫಾರ್ಚುನರ್ ವಾಹನ  ಸ್ಟೇಷನ್​ಗೆ ತೆಗೆದುಕೊಂಡು ಹೋಗಿದ್ದಾರೆ.   ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ, ಈ ಸಂಬಂಧ ಸದ್ಯ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ

ಮಲ್ನಾಡ್​ನ ಕಾಡು ಮನೆಯ ಸಮಸ್ಯೆಗಳ ಬಗ್ಗೆ ಬೆಂಗಳೂರಿನಲ್ಲಿ ಬಿಗಿ ಚರ್ಚೆ! ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಏನೇಲ್ಲಾ ತೀರ್ಮಾನವಾಯ್ತು ಗೊತ್ತಾ?

ತೀರ್ಥಹಳ್ಳಿ ರಾಷ್ಟ್ರೀಯ ಹೆದ್ಧಾರಿ 169 ನಲ್ಲಿ ಭೀಕರ ಅಪಘಾತ! ನಿಂತಿದ್ದ ಕ್ಯಾಂಟರ್​ಗೆ ಒಮಿನಿ ಡಿಕ್ಕಿ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿ ಸಮೀಪ, ನಿಂತಿದ್ದ ಕ್ಯಾಂಟರ್​ ಒಂದಕ್ಕೆ ಒಮಿನಿಯೊಂದು ಡಿಕ್ಕಿಯಾಗಿದೆ.   ರಾಷ್ಟ್ರೀಯ ಹೆದ್ದಾರಿ 169 ರ ತೀರ್ಥಹಳ್ಳಿ -ಕೊಪ್ಪ ಶೃಂಗೇರಿಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.  ಕುಂಬಾರದಡಿಗೆ ಬಳಿ ರಸ್ತೆ ಬದಿಯಲ್ಲಿ  ಕ್ಯಾಂಟರ್ ವೊಂದು ನಿಂತಿತ್ತು . ಈ ವೇಳೆ  ಅತೀ ವೇಗದಲ್ಲಿ ಇದ್ದ ಓಮಿನಿ ಕಾರು ಕ್ಯಾಂಟರ್ ಗೆ ಗುದ್ದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಕಾರಿನ ಚಾಲಕನ ಸ್ಥಿತಿ ಗಂಭೀರವಾಗಿದ್ದು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.  


ಜಸ್ಟ್ ಅನುಮಾನದಿಂದ ಸಿಕ್ಕಿಬಿದ್ದ ದರೋಡೆ ಕೇಸ್​ನಲ್ಲಿ ಬೇಕಾಗಿದ್ದ ಆರೋಪಿ! ದೊಡ್ಡಪೇಟೆ ಪಿಸಿ ಕೆಲಸಕ್ಕೆ ವ್ಯಕ್ತವಾಗ್ತಿದೆ ಶ್ಲಾಘನೆ! ಏನಿದು ಕೇಸ್​?

  

 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor